ಡಿಕೆಶಿ ಮೇಕೆದಾಟು ಹೇಳಿಕೆ: ಕಾಂಗ್ರೆಸ್‌ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಎಐಎಡಿಎಂಕೆ

By Kannadaprabha NewsFirst Published Jun 2, 2023, 3:40 AM IST
Highlights

ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆ ‘ತಮಿಳುನಾಡನ್ನು ಮರುಭೂಮಿಯಾಗಿ ಪರಿವರ್ತಿಸುವ ಪ್ರಯತ್ನ’ ಎಂದು ಕಿಡಿಕಾರಿರುವ ತಮಿಳುನಾಡು ವಿಪಕ್ಷ ಎಐಎಡಿಎಂಕೆ, ಮೇಕೆದಾಟು ಯೋಜನೆಗೆ ಮುಂದಾದರೆ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕದ ಕಾಂಗ್ರೆಸ್‌ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. 

ಚೆನ್ನೈ (ಜೂ.02): ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆ ‘ತಮಿಳುನಾಡನ್ನು ಮರುಭೂಮಿಯಾಗಿ ಪರಿವರ್ತಿಸುವ ಪ್ರಯತ್ನ’ ಎಂದು ಕಿಡಿಕಾರಿರುವ ತಮಿಳುನಾಡು ವಿಪಕ್ಷ ಎಐಎಡಿಎಂಕೆ, ಮೇಕೆದಾಟು ಯೋಜನೆಗೆ ಮುಂದಾದರೆ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕದ ಕಾಂಗ್ರೆಸ್‌ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. 

ಮೇಕೆದಾಟು ಅಣೆಕಟ್ಟು ನಿರ್ಮಾಣ ಮಾಡಲಾಗುವುದು ಎಂಬ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ತಿರುಗೇಟು ನೀಡಿದ್ದ ತಮಿಳುನಾಡು ಜಲ ಸಂಪನ್ಮೂಲ ಸಚಿವ ಮುರುಗನ್‌, ‘ಕರ್ನಾಟಕದ ಮೇಕೆದಾಟು ಯೋಜನೆಯನ್ನು ಎಲ್ಲ ಹಂತಗಳಲ್ಲೂ ವಿರೋಧಿಸುತ್ತೇವೆ’ ಎಂದ ಬೆನ್ನಲ್ಲೇ ಇದೀಗ ವಿಪಕ್ಷ ಎಐಡಿಎಂಕೆ ಕೂಡ ಡಿಕೆ ಶಿವಕುಮಾರ್‌ ವಿರುದ್ಧ ಹರಿಹಾಯ್ದಿದೆ. 

ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು: ಶಾಸಕ ಹರೀಶ್‌ ಪೂಂಜ

ಈ ಬಗ್ಗೆ ಮಾತನಾಡಿರುವ ವಿಪಕ್ಷ ನಾಯಕ ಕೆ ಪಳನಿಸ್ವಾಮಿ, ‘ನೆರೆಯ ರಾಜ್ಯವು ನದಿಯ ಕೆಳಪಾತ್ರದ ರಾಜ್ಯಗಳ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸಬಾರದು. 1956 ಅಂತರಾಜ್ಯ ನದಿ ನೀರು ವಿವಾದ ಕಾಯ್ದೆ ಪ್ರಕಾರ ಕರ್ನಾಟಕವು ನದಿಯ ನೈಸರ್ಗಿಕ ಮಾರ್ಗವನ್ನು ತಡೆಯುವ ಅಥವಾ ಬದಲಾಯಿಸುವ ಹಕ್ಕನ್ನು ಹೊಂದಿಲ್ಲ. ಕಾವೇರಿ ಜಲವಿವಾದದ ಅಂತಿಮ ತೀರ್ಪಿನಲ್ಲಿಯೂ ಸಹ ನದಿಯ ಕೆಳಭಾಗದ ರಾಜ್ಯಗಳ ಅನುಮೋದನೆ ಇಲ್ಲದೆ ಯಾವುದೇ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳಬಾರದು ಎಂಬುದು ಸ್ಪಷ್ಟವಾಗಿದೆ. 

ಹೀಗಿರುವಾಗ ಕರ್ನಾಟಕ ಕಾಂಗ್ರೆಸ್‌ನ ಘೋಷಣೆ ತಮಿಳುನಾಡು ಹಿತಾಸಕ್ತಿಗೆ ವಿರುದ್ಧವಾಗಿದೆ.  ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸುವ ಮೇಕೆದಾಟು ಅಣೆಕಟ್ಟು ನಿರ್ಮಾಣವು ಕುಡಿಯುವ ನೀರಿಗಾಗಿ ಹಾಗೂ ನೀರಾವರಿಗಾಗಿ ಕಾವೇರಿ ನದಿಯನ್ನು ಅವಲಂಬಿಸಿರುವ ತಮಿಳುನಾಡನ್ನು ಮರುಭೂಮಿಯನ್ನಾಗಿ ನಿರ್ಮಿಸುತ್ತದೆ’ ಎಂದಿದ್ದಾರೆ. 

ಮುದ್ದಾದ ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಕೊಂದ ತಂದೆ: ಕಾರಣವೇನು ಗೊತ್ತಾ?

ಈ ವೇಳೆ ಆಡಳಿತಾರೂಢ ಡಿಎಂಕೆ ವಿರುದ್ಧವೂ ಹರಿಹಾಯ್ದ ಪಳನಿಸ್ವಾಮಿ ‘ಮೇಕೆದಾಟು ವಿಷಯದಲ್ಲಿ ಆಡಳಿತಾರೂಢ ಡಿಎಂಕೆಯನ್ನು ಅವಲಂಬಿಸುವುದರಲ್ಲಿ ಅರ್ಥವಿಲ್ಲ. ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಮೇಕೆದಾಟು ನಿರ್ಮಾಣವನ್ನು ಎಐಡಿಎಂಕೆ ತೀವ್ರವಾಗಿ ಖಂಡಿಸುತ್ತದೆ. ಒಂದು ವೇಳೆ ಮುಂದಾದರೆ ತಮಿಳುನಾಡು ಮರುಭೂಮಿಯಾಗಿ ಪರಿವರ್ತನೆಯಾಗುವುದನ್ನು ತಡೆಯಲು ಎಐಡಿಎಂಕೆ ತೀವ್ರ ಪ್ರತಿಭಟನೆ ನಡೆಸುತ್ತದೆ ಎಂದು ಕರ್ನಾಟಕಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ’ ಎಂದಿದ್ದಾರೆ.

click me!