ಶೋಭಾ ಕರಂದ್ಲಾಜೆಗೆ ಮಂಪರು ಪರೀಕ್ಷೆ ಮಾಡಿಸಿ Vinay Kumar Sorake

Published : Apr 10, 2022, 01:35 PM ISTUpdated : Apr 10, 2022, 01:36 PM IST
ಶೋಭಾ ಕರಂದ್ಲಾಜೆಗೆ ಮಂಪರು ಪರೀಕ್ಷೆ ಮಾಡಿಸಿ  Vinay Kumar Sorake

ಸಾರಾಂಶ

ಸಿದ್ದರಾಮಯ್ಯನನ್ನು ನಿಮಾನ್ಸ್ ಗೆ ಸೇರಿಸಿದರೆ ಕಾಂಗ್ರೆಸ್ ಉಳಿಯುತ್ತೆ  ಎಂದು ಹೇಳಿಕೆ ನೀಡಿದ್ದ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕಾಂಗ್ರೆಸ್ ನ ವಿನಯಕುಮಾರ್ ಸೊರಕೆ ಕಿಡಿಕಾರಿದ್ದಾರೆ.

ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್ 

ಉಡುಪಿ(ಎ.10): ಸಿದ್ದರಾಮಯ್ಯರನ್ನು (siddaramaiah) ನಿಮಾನ್ಸ್ ಗೆ (nimhans) ಸೇರಿಸಿ ಎಂದಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ (shobha karandlaje) ಮಾಜಿ ಸಚಿವ ವಿನಯಕುಮಾರ್ ಸೊರಕೆ ( Former minister Vinay Kumar Sorake ) ತಿರುಗೇಟು ನೀಡಿದ್ದಾರೆ, ಉಡುಪಿಯಲ್ಲಿ (Udupi) ಮಾತನಾಡಿದ ಸೊರಕೆ ಮುಂದಿನ ಚುನಾವಣೆಗೂ ಮುನ್ನ ಶೋಭಾ ಕರಂದ್ಲಾಜೆಗೆ ಮಂಪರು ಪರೀಕ್ಷೆ (narco analysis test ) ಮಾಡಿ ಮತದಾರರಿಗೆ ಅದರ ವರದಿ ನೀಡಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಅಲ್ ಖೈದಾ ಉಗ್ರನ ಹೇಳಿಕೆಯ ವಿಡಿಯೋ ಬಿಡುಗಡೆಯಾದಾಗ, ಅದನ್ನು ಆರೆಸ್ಸೆಸ್ ಜೊತೆ ತಳುಕು ಹಾಕಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಿದ್ದರಾಮಯ್ಯನವರನ್ನು ನಿಮಾನ್ಸ್ ಸೇರಿಸದಿದ್ದರೆ ಕಾಂಗ್ರೆಸ್ (congress) ಪಕ್ಷ ನಾಶವಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದರು. ಪಕ್ಷದ ಹಿರಿಯ ನಾಯಕರ ಬಗ್ಗೆ ನೀಡಿರುವ ಹೇಳಿಕೆಗೆ ಸೊರಕೆ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಓರ್ವ ರಾಷ್ಟ್ರಮಟ್ಟದ ಜಾತ್ಯತೀತ ನಾಯಕ. ಐದು ವರ್ಷಗಳ ಕಾಲ ಯಶಸ್ವಿಯಾಗಿ ರಾಜ್ಯಕ್ಕೆ ಆಡಳಿತ ನೀಡಿದ್ದಾರೆ. 13 ಬಜೆಟ್ ಮಂಡಿಸಿರುವ ಏಕೈಕ ನಾಯಕ. ಇತಿಹಾಸದಲ್ಲಿ ಸಿದ್ದರಾಮಯ್ಯ ನಂತೆ ಕೆಲಸ ಮಾಡಿದ ಮುಖ್ಯಮಂತ್ರಿ ಇನ್ನೊಬ್ಬರಿಲ್ಲ. ಅರಸು, ಬಂಗಾರಪ್ಪನವರ ಹಾದಿಯಲ್ಲಿ ನಡೆದ ಅಪರೂಪದ ಸಿದ್ದರಾಮಯ್ಯ ಈ ನಾಡಿನ ಜಾತ್ಯಾತೀತ ಶಕ್ತಿಯ ರೀತಿಯಲ್ಲಿ ಕೆಲಸ ಮಾಡಿದ್ದಾರೆ‌ ಸಿ.ಟಿ. ರವಿ, ಶೋಭಾ ,ಆರಗ ಜ್ಞಾನೇಂದ್ರ ರಿಗೆ ಸಿದ್ದರಾಮಯ್ಯ ಬಗ್ಗೆ ಮಾತನಾಡುವ ಯಾವ ಯೋಗ್ಯತೆ ಇದೆ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಮುಖ್ಯ ಮಂತ್ರಿಗಳು ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

ZERODHA BMI CHALLENGE ಈ ಕಂಪನಿಯಲ್ಲಿ ಬೋನಸ್ ಬೇಕಾದರೆ ದೇಹದ ತೂಕ ಇಳಿಸಿಕೊಳ್ಳಬೇಕು!

 ಸಿದ್ದರಾಮಯ್ಯನವರ ಬಾಯಿಮುಚ್ಚಿಸುವ ಕೆಲಸ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಜನರ ದಾರಿ ತಪ್ಪಿಸಲು ಅವರ ವ್ಯಕ್ತಿತ್ವಕ್ಕೆ ಧಕ್ಕೆ ಮಾಡಲಾಗುತ್ತಿದೆ. ಸಿದ್ದರಾಮಯ್ಯನವರನ್ನು ನಿಮಾನ್ಸ್ ಇಗೆ ಸೇರಿಸಬೇಕು ಎನ್ನುವ ಶೋಭಾ ಕರಂದ್ಲಾಜೆಯನ್ನು ಯಾವ ಆಸ್ಪತ್ರೆಗೆ ಸೇರಿಸಬೇಕು ಎಂದು ಪ್ರಶ್ನಿಸಿದ್ದಾರೆ. ಮುಂದಿನ ಚುನಾವಣೆಗೆ ನಿಲ್ಲುವ ಮೊದಲು ಶೋಭಾ ಕರಂದ್ಲಾಜೆ ಅವರಿಗೆ ಮಂಪರು ಪರೀಕ್ಷೆ ಮಾಡಿ ಅದರ ವರದಿಯನ್ನು ಮತದಾರರಿಗೆ ನೀಡಬೇಕು.ಆಕೆ ಮೆದುಳಿನ ಸ್ಥಿಮಿತ ಕಳೆದುಕೊಂಡವರಂತೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಎಸ್ಡಿಪಿಐ ಬಿಜೆಪಿಯ ಲವ್ವಿನ ಕೂಸು: ಬಿಜೆಪಿಯವರು ಎಸ್ಡಿಪಿಐ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಉಡುಪಿ ಜಿಲ್ಲೆಯ ಕಾಪು ಪುರಸಭಾ ಚುನಾವಣೆಯಲ್ಲಿ ಎಸ್ ಡಿಬಪಿ ಐ ಮತ್ತು  ಬಿಜೆಪಿಯ ದೋಸ್ತಿಯನ್ನು ಎಲ್ಲರೂ ನೋಡಿದ್ದಾರೆ. ಒಟ್ಟಿಗೆ ಹೋಗಿ ನಾಮಪತ್ರ ಹಾಕುತ್ತಾರೆ; ವಿಜಯೋತ್ಸವ ಮಾಡುತ್ತಾರೆ.ಎರಡು ಪಕ್ಷಗಳು ಜೊತೆಯಾಗಿ ಒಳಒಪ್ಪಂದ ಮಾಡಿಕೊಂಡು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಎಸ್ಡಿಪಿಐ ಪಕ್ಷ ಏನಿದ್ದರೂ ಬಿಜೆಪಿಯ ಲವ್ವಿನ ಕೂಸು ಎಂದು ಹೋಲಿಕೆ ಮಾಡಿದ್ದಾರೆ.

Hubballi ಗೊತ್ತಿಲ್ಲದೆ ಪೊಲೀಸರಿಂದ ಅಂತ್ಯಸಂಸ್ಕಾರ, ಗೊತ್ತಾದಾಗ ಮತ್ತೆ ಮಣ್ಣಾದ ಮುಜಾಫರ್‌!

ಶೋಭಾ ಕರಂದ್ಲಾಜೆಯವರು ಸಂಸದೆಯಾಗಿ ಯಾವುದೇ ಸಮಸ್ಯೆಗೆ ಸ್ಪಂದಿಸುವುದಿಲ್ಲ. ಯಾರದ್ದಾದರೂ ಕೊಲೆಯಾದಾಗ ಪ್ರತ್ಯಕ್ಷವಾಗುತ್ತಾರೆ. ಈ ಸಲವೂ ಅವರನ್ನು ಕರ್ನಾಟಕಕ್ಕೆ ಬರ ಮಾಡಿದ್ದು ಹರ್ಷನ ಕೊಲೆ. ಆದರೆ ಅವರದೇ ಪಕ್ಷದವರು ತಪ್ಪು ಮಾಡಿದಾಗ, ಕೊಲೆ ಮಾಡಿದಾಗ ಶೋಭಾ ಕರಂದ್ಲಾಜೆ ತಲೆಮರೆಸಿಕೊಂಡು ತಿರುಗುತ್ತಾರೆ. ಕೋಟದಲ್ಲಿ ಅವಳಿ ಮರ್ಡರ್ ,ಪ್ರವೀಣ್ ಪೂಜಾರಿ ಕೊಲೆಯನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌
ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ಕೊಡಿ ಎಂದು ಸಮಯ ಬಂದಾಗ ಕೇಳುವೆ: ಸಚಿವ ಮಹದೇವಪ್ಪ