ಗಂಗಾವತಿ(ಜೂ.27): ನಗರದ 30ನೇ ವಾರ್ಡ್‌ನ ನಗರಸಭೆ ಬಿಜೆಪಿ ಸದಸ್ಯೆ ಸುಚೇತಾ ಕಾಶೀನಾಥ ಶಿರಿಗೇರಿ ಕೆಆರ್‌ಪಿಪಿ ಸೇರ್ಪಡೆಯಾದ ಕೆಲಹೊತ್ತಲ್ಲೇ ಬಿಜೆಪಿಗೆ ಮರಳಿದ್ದಾರೆ! ಸುಚೇತಾ ಶಿರಿಗೇರಿ ಅವರ ನಿವಾಸಕ್ಕೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಾಪಕ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಸೋಮವಾರ ಪಕ್ಷದ ಕಾರ್ಯಕರ್ತರೊಂದಿಗೆ ಭೇಟಿ ನೀಡಿ ಕೆಆರ್‌ಪಿಪಿ ಶಾಲು ಹೊದೆಸಿ ಪಕ್ಷಕ್ಕೆ ಬರಮಾಡಿಕೊಂಡರು. ಈ ವಿಷಯ ತಿಳಿದು, ಕೆಲಹೊತ್ತಲ್ಲೇ ಮಾಜಿ ಶಾಸಕ ಪರಣ್ಣ ಮುನವಳ್ಳಿ ಭೇಟಿ ನೀಡಿ ಬಿಜೆಪಿ ಶಾಲು ಹೊದೆಸಿ, ಪಕ್ಷ ಬಿಡದಂತೆ ಮನವಿ ಮಾಡಿದರು. ಮುನವಳ್ಳಿ ಜತೆ ಬಿಜೆಪಿ ಕಾರ್ಯಕರ್ತರು ಇದ್ದರು.
ವಿಧಾನಸಭೆ ಚುನಾವಣೆ ಪೂರ್ವದಲ್ಲಿ ನಗರಸಭೆಯ ಮೂವರು ಬಿಜೆಪಿ, ಒಬ್ಬ ಪಕ್ಷೇತರ, ಕೆಲವು ಕಾಂಗ್ರೆಸ್ ಸದಸ್ಯರು ಕೆಆರ್‌ಪಿಪಿ ಸೇರ್ಪಡೆಯಾಗಿದ್ದಾರೆ. ಈ ಮೂಲಕ ನಗರಸಭೆಯನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳಲು ಶಾಸಕ ಜನಾರ್ದನ ರೆಡ್ಡಿ ತೆರೆಮರೆ ಕಸರತ್ತು ನಡೆಸಿದ್ದಾರೆ. ಈಗ ಮತ್ತಷ್ಟು ಬಿಜೆಪಿ ಸದಸ್ಯರ ಮೇಲೆ ಕಣ್ಣಿಟ್ಟಿದ್ದು, ಸುಚೇತಾ ಶಿರಿಗೇರಿ ಅವರ ಮನೆಗೆ ಭೇಟಿ ನೀಡಿ ಕೆಆರ್‌ಪಿಪಿ ಶಾಲು ಹಾಕಿ ಸೇರ್ಪಡೆ ಮಾಡಿಕೊಂಡರು.
ಬಸ್ ನಿಲ್ಲಿಸದ ಚಾಲಕ: ತಲೆ ಕೆಟ್ಟು ಬಸ್‌ಗೆ ಕೊಪ್ಪಳದ ಮಹಿಳೆಯಿಂದ ಕಲ್ಲೇಟು!
ಮಾಜಿ ಶಾಸಕ ದಿಢೀರ್ ಭೇಟಿ:
ಸುಚೇತಾ ಶಿರಿಗೇರಿ ನಿವಾಸಕ್ಕೆ ಶಾಸಕ ಜನಾರ್ದನ ರೆಡ್ಡಿ ಭೇಟಿ ನೀಡಿದ ಕೆಲವೆ ಗಂಟೆಗಳಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಭೇಟಿ ನೀಡಿದರು. ಪಕ್ಷ ಬಿಟ್ಟು ಹೋಗದಂತೆ ಮನವರಿಕೆ ಮಾಡಿದರು. ಬಿಜೆಪಿಯಿಂದ ಜಯ ಸಾಧಿಸಿದ್ದು, ಬರುವ ದಿನಗಳಲ್ಲಿ ಉತ್ತಮ ಅವಕಾಶ ದೊರೆಯಲಿದೆ. ಪಕ್ಷ ಬಿಟ್ಟು ಹೋಗದಂತೆ ತಿಳಿವಳಿಕೆ ಹೇಳಿದರು. ಬಳಿಕ ಬಿಜೆಪಿ ಶಾಲು ಹಾಕಿದರು.
ಕೊಪ್ಪಳ: ಕೈಕೊಟ್ಟಮಳೆ, ನಗರಗಳತ್ತ ಗುಳೆ ಹೊರಟ ರೈತರು!
ನಮ್ಮ 30ನೇ ವಾರ್ಡಿನ ಅಭಿವೃದ್ಧಿ ದೃಷ್ಟಿಯಿಂದ ಶಾಸಕ ಗಾಲಿ ಜನಾರ್ದನ ರೆಡ್ಡಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಶಾಸಕರು ಕೆಆರ್‌ಪಿಪಿ ಶಾಲು ಹಾಕಿದರು. ಆದರೆ ನಾನು ಬಿಜೆಪಿಯಿಂದ ಚುನಾಯಿತನಾಗಿದ್ದೇನೆ. ಬಿಜೆಪಿಯಲ್ಲೇ ಇರುತ್ತೇನೆ ಅಂತ ಬಿಜೆಪಿ ನಗರಸಭೆ ಸದಸ್ಯೆ ಸುಚೇತಾ ಶಿರಿಗೇರಿ ತಿಳಿಸಿದ್ದಾರೆ.
ನಮ್ಮ ಪಕ್ಷದ ತತ್ವ-ಸಿದ್ಧಾಂತಗಳನ್ನು ಮೆಚ್ಚಿ ಸುಚೇತಾ ಶಿರಿಗೇರಿ ಅವರು ಪಕ್ಷ ಸೇರ್ಪಡೆಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸುಚೇತಾ ಶಿರಿಗೇರಿ ಅವರಿಗೆ ಪಕ್ಷದ ಶಾಲು ಹಾಕಿ ಬರ ಮಾಡಿಕೊಳ್ಳಲಾಯಿತು ಅಂತ ಶಾಸಕರು ಗಂಗಾವತಿ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.