ಬಹು ನಿರೀಕ್ಷಿತ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ 36 ಶಾಸಕರನ್ನು ನೇಮಕ ಮಾಡಲಾಗಿದೆ. ಗಣರಾಜ್ಯೋತ್ಸವದ ದಿನವೇ ರಾಜ್ಯ ಸರ್ಕಾರ ನಿಗಮ ಮಂಡಳಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ಬೆಂಗಳೂರು (ಜ.26): 32 ಶಾಸಕರನ್ನು ನಿಗಮ ಮಂಡಳಿಗೆ ನೇಮಕ ಮಾಡಿ ಆದೇಶ ಹೊರಡಿಸಿದೆ. ಗಣರಾಜ್ಯೋತ್ಸವದ ದಿನದವೇ ಬಹುನಿರೀಕ್ಷಿತ ಆದೇಶ ರಾಜ್ಯ ಸರ್ಕಾರದಿಂದ ಪ್ರಕಟವಾಗಿದೆ. 32 ಶಾಸಕರ ನಿಗಮ ಮಂಡಳಿ ನೇಮಕ ಆದೇಶದಲ್ಲಿ ಸಿಎಂ ಸಿದ್ದರಾಮಯ್ಯ ಬಣದ ಶಾಸಕರ ಮೇಲುಗೈ ಎದ್ದು ಕಾಣಿಸಿದೆ. ಇಂದು ರಾಜ್ಯಕ್ಕೆ ಬರಬೇಕಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಭೇಟಿ ಮುಂದಕ್ಕೆ ಹೋಗಿದ್ದರಿಂದ ನಿಗಮ ಮಂಡಳಿ ಪಟ್ಟಿ ಬಿಡುಗಡೆ ಇನ್ನಷ್ಟು ತಡವಾಗಬಹುದು ಎನ್ನುವ ಸೂಚನೆಗಳಿದ್ದವು. ಆದರೆ, ಸಂಜೆಯ ವೇಳೆಗೆ 36 ಶಾಸಕರ ಪಟ್ಟಿಯನ್ನು ಇದಕ್ಕೆ ಅಂತಿಮ ಮಾಡಲಾಗಿದೆ. ಎಲ್ಲಾ ಶಾಸಕರುಗಳನ್ನು ಇಲ್ಲಿನ ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿ ಸಂಪುಟ ದರ್ಜೆಯ ಸ್ಥಾನ ಮಾನದೊಂದಿಗೆ ಅಂದರೆ, ಸಚಿವರಿಗೆ ನೀಡಲಾಗುವ ಎಲ್ಲಾ ಸೌಲಭ್ಯದೊಂದಿಗೆ ಎರಡು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ ಎಂದು ಸಿಎಂ ಸಿದ್ಧರಾಮಯ್ಯ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಸಿಎಂ ಸಿದ್ಧರಾಮಯ್ಯ ನಿಗಮ ಮಂಡಳಿ ಸ್ಥಾನ ಮೊದಲು ಶಾಸಕರಿಗೆ ನೀಡಬೇಕು ಎಂದು ಆಶಯ ವ್ಯಕ್ತಪಡಿಸಿದ್ದರು. ಆದರೆ, ಕಾರ್ಯಕರ್ತರನ್ನೂ ನಿಗಮ ಮಮಡಳಿಗೆ ನೇಮಕ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪಟ್ಟು ಹಿಡಿದಿದ್ದರು. ಆದರೆ, ಡಿಕೆ ಶಿವಕುಮಾರ್‌ಗೆ ಇಲ್ಲಿ ಹಿನ್ನಡೆಯಾಗಿದೆ. ಮುಂದಿನ ಅವಧಿಯಲ್ಲಿ ಕಾರ್ಯಕರ್ತರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ.
ನಿಗಮ ಹಂಚಿಕೆಗೆ ರಾಜಣ್ಣ ಕಿಡಿ: ನಾವು ಗುಲಾಮರಾ?
ಡಿಸಿಎಂಗೆ ರಾಜಕೀಯ ಸಲಹೆಗಾರ: ಇನ್ನು ಇದೇ ಮೊದಲ ಬಾರಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ರಾಜಕೀಯ ಸಲಹೆಗಾರ ನೇಮಕವಾಗಿದ. ರಾಜ್ಯದಲ್ಲಿ ಉಪಮುಖ್ಯಮಂತ್ರಿಗೆ ರಾಜಕೀಯ ಸಲಹೆಗಾರ ನೇಮಕವಾಗಿರುವುದು ಇದೇ ಮೊದಲು.ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ ಅವರನ್ನು ಡಿಸಿಎಂ ಡಿಕೆಶಿ ರಾಜಕೀಯ ಸಲಹೆಗಾರರಾಗಿ ನೇಮಕ ಮಾಡಲಾಗಿದೆ. 36 ಶಾಸಕರ ಪೈಕಿ, ಮಸ್ಕಿ ಶಾಸಕ ಬಸನವಗೌಡ ತುರುವಿಹಾಳ್‌ಗೆ ಯಾವುದೇ ನಿಗಮವನ್ನು ಘೋಷಣೆ ಮಾಡಲಾಗಿಲ್ಲ.
ರಾಯಚೂರಿನ ನಾಲ್ಕು ಜನ ಶಾಸಕರಲ್ಲಿ ಯಾರಿಗೆ ಸಿಗುತ್ತೆ ನಿಗಮ ಮಂಡಳಿ ಭಾಗ್ಯ!