ಎಸ್ ಟಿ ಸೋಮಶೇಖರ್ ಅವರು ಆರ್ ಅಶೋಕ್ ಹಾಗೂ ಕುಮಾರ ಸ್ವಾಮಿ ವಿರುದ್ಧ ಗುಡುಗಿದ್ದಾರೆ. ನಾನೇನು ಪಾಕಿಸ್ತಾನದಲ್ಲಿ ಇದ್ದೀನಾ, ಇವರು ಹೆದರಿಸೋದಕ್ಕೆ. ಯಾವ ಮಗನೂ ಹುಟ್ಟಿಲ್ಲ ನನ್ನ ಹೆದರಿಸೋದಕ್ಕೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು (ಫೆ.28): ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಶಾಸಕ ಎಸ್.ಟಿ. ಸೋಮಶೇಖರ್ ಅಡ್ಡ ಮತದಾನ ಮಾಡಿರುವುದು ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಸೋಮಶೇಖರ್ ನಿವಾಸದ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಇವೆಲ್ಲ ಬೆಳವಣಿಗೆಗಳ ಬಳಿಕ ಎಸ್ ಟಿ ಸೋಮಶೇಖರ್ ಅವರು ಆರ್ ಅಶೋಕ್ ಹಾಗೂ ಕುಮಾರ ಸ್ವಾಮಿ ವಿರುದ್ಧ ಗುಡುಗಿದ್ದಾರೆ. ನಾನೇನು ಪಾಕಿಸ್ತಾನದಲ್ಲಿ ಇದ್ದೀನಾ, ಇವರು ಹೆದರಿಸೋದಕ್ಕೆ. ಯಾವ ಮಗನೂ ಹುಟ್ಟಿಲ್ಲ ನನ್ನ ಹೆದರಿಸೋದಕ್ಕೆ. ಇವರಂತೆ ಇಲ್ಲೀಗಲ್ ಇಲ್ಲ ನಾನು, ಸ್ಟ್ರೈಟ್ ಇದ್ದೀನಿ. ಏನ್ ಮಾಡ್ತಾರೆ ನೋಡೋಣ ತಾಕತ್ತು ಇದ್ರೆ ನನ್ನನ್ನು ಹೆದರಿಸಲಿ. ನನ್ನ ವಿರುದ್ದ ಪ್ರತಿಭಟನೆ ಮಾಡ್ತಾರಲ್ಲ ನನ್ನ ಎದುರಿಗೆ ಮಾಡ್ಲೀ ಒಂದೊಂದೆ ಒಂದೊಂದೆ ಹೊರ ತೆಗೆಯುತ್ತೇನೆ ನಾನು ಎಂದು ಆವಾಜ್ ಹಾಕಿದ್ದಾರೆ.,
ಮೂರು ವರ್ಷದಲ್ಲಿ ಇವರ ಆಟಗಳನ್ನೆಲ್ಲ ನೋಡಿದ್ದೇನೆ. ಯಡಿಯೂರಪ್ಪ ಅವರಿಗಿಂತ ಮುನ್ನ ಯಾರೆಲ್ಲ ನನ್ನ ಹತ್ರ ಮಾತನಾಡಿದ್ರು. ಯಡಿಯೂರಪ್ಪ ಅವರನ್ನು 100% ಇಳಿಸ್ತಿನಿ ಅಂತ ಯಾರು ಹೇಳಿದ್ರು. ಅವೆಲ್ಲವನ್ನು ಸಾಕ್ಷಿ ಸಮೇತ ನಾನು ಹೇಳಬೇಕಾಗುತ್ತೆ. ಯಾರು ಯಾರಿಗೆ ಹೇಗೆ ಹೇಗೆ ಮೋಸ ಮಾಡಿದ್ರು ಎಲ್ಲವನ್ನು ತೆರೆದಿಡುತ್ತೇನೆ. ಇದುವರೆಗೂ ನಾನು ಆ ರೀತಿ ಪಾಲಿಟಿಕ್ಸ್ ಮಾಡಿಲ್ಲ. ಇವ್ರು ಮಾಡೋದಕ್ಕೆ ಹೋದ್ರೆ ತಾಯಿಗೆ ದ್ರೋಹ ಮಾಡಿದ್ರು ಅಂತ ಎಲ್ಲ ಮಾತನಾಡಿದ್ರೆ? ಹೌದು ಕ್ರಾಸ್ ವೋಟ್ ಮಾಡಿದ್ದೀನಿ. ಏನ್ ಇವಾಗ ? ಎಸ್ ಐ ಡನ್ ಇಟ್ ಏನ್ ಇವಾಗ? ಎಂದು ರೆಬೆಲ್ ಆಗಿ ಮಾತನಾಡಿದ್ದಾರೆ.
ಸಿಎನ್‌ಜಿ ಗ್ಯಾಸ್‌ಗೆ ಟಕ್ಕರ್, CBG ಇಂಧನ ಉತ್ಪಾದನೆಗೆ 5000 ಕೋಟಿ ಹೂಡಿಕೆಗೆ ಮುಂದಾದ ಅಂಬಾನಿ, ಏನಿದು ಸಿಬಿಜಿ?
20 ವರ್ಷದಿಂದ ನಾನು ರಾಜಕೀಯದಲ್ಲಿ ಇದ್ದೀನಿ ನಾನು ಆ ರೀತಿ ರಾಜಕೀಯ ಮಾಡಿಲ್ಲ ಇವಾಗ ಇವ್ರು ಮಾಡಿದ್ರೆ ನಾನು ಎಲ್ಲವನ್ನು ತೆರೆದಿಡಬೇಕಾಗುತ್ತೆ. ಬಿಜೆಪಿಯವರು ಸ್ವತಂತ್ರರಿದ್ದಾರೆ ಏನ್ ಬೇಕಾದ್ರು ಮಾಡಬಹುದು. ಅನರ್ಹ ಮಾಡ ಬಹುದು, ಪಕ್ಷದಿಂದ ಕಿತ್ತಾಕಬಹುದು. ಅವರ ತಾಕತ್ತು ಏನೇನಿದೆ ಎಲ್ಲವನ್ನು ಮಾಡ್ಲೀ. ಚುನಾವಣೆ ಸಂದರ್ಭದಲ್ಲಿ ಇದೆಲ್ಲವನ್ನು ಮಾತನಾಡಬೇಕು.
ಪ್ರಜಾಪ್ರಭುತ್ವ ಯಾರು ಬೇಕಾದ್ರು ಎಲೆಕ್ಷನ್ ಗೆ ನಿಲ್ಲಬಹುದು. ಸೋಲು ಗೆಲುವು ಜನರ ಕೈಯಲ್ಲಿರೋದು. ಕಳೆದ ಚುನಾವಣೆಯಲ್ಲಿಯೂ ಎಲ್ರೂ ಒಗಟ್ಟಾಗಿ ನನ್ನ ವಿರುದ್ಧವೇ ನಿಂತ್ರು. ಕಾಂಗ್ರೆಸ್ , ಬಿಜೆಪಿ, ಜೆಡಿಎಸ್ ಮೂವರು ಒಗಟ್ಟಾಗಿ ನನ್ನ ವಿರುದ್ದ ಫೈಟ್ ಮಾಡಿದ್ರು. ನಾಲ್ಕು ಸಾರಿ ಆ ಕ್ಷೇತ್ರದಲ್ಲಿ ನಾನು ಗೆದಿದ್ದೇನೆ , ಚುನಾವಣೆ ಯಾರು ಬೇಕಾದ್ರು ನಿಲ್ಲಬಹುದು ಯಾರು ಬೇಕಾದ್ರು ಗೆಲ್ಲಬಹುದು.
ರಾಜಕೀಯ ವ್ಯಭಿಚಾರ ಮಾಡೋರು ಎಲ್ಲಾ ಕಡೆ ಸಲ್ಲುತ್ತಾರೆ; ಅಡ್ಡ ಮತದಾನಕ್ಕೆ ಸಿ.ಟಿ.ರವಿ ವಾಗ್ದಾಳಿ
ಹೌದು ಅಡ್ಡ ಮತ ಮಾಡಿದ್ದೀನಿ ಏನ್ ಇವಾಗ? ಯಾವುದಕ್ಕೂ ಹೆದುರುವ ಮನುಷ್ಯ ನಾನಲ್ಲ. ಇದೇ ಹಿಮಾಚಲ ಪ್ರದೇಶದಲ್ಲಿ ಎಷ್ಟು ಜನ ಬಿಜೆಪಿಗೆ ವೊಟ್ ಹಾಕಿಲ್ಲ. ಕೋರ್ಟ್ ಆದೇಶ, ಆತ್ಮಸಾಕ್ಷಿ ಮತ ಯಾರಿಗೆ ಹಾಕ ಬೇಕು ಅವರಿಗೆ ಹಾಕಿದ್ದೇನೆ. ಇದು ಅಪವಿತ್ರ ಮೈತ್ರಿ, ಎಂಪಿ ಎಲೆಕ್ಷನ್ ಗಾಗಿ ಮೋದಿ ಕೈಕಾಲು ಹಿಡಿದು ಮಾಡಿಕೊಂಡಿದ್ದಾರೆ. ಇದು ರಾಜ್ಯಸಭಾ ಎಲೆಕ್ಷನ್ ಗಾಗಿ ಅಲ್ಲ ಜೆಡಿಎಸ್ ಅವರಿಗೆ ಅರ್ಥ ಆಗಬೇಕು. ಜೆಡಿಎಸ್ ಗೆ ಬಿಜೆಪಿ ಮಾಡಿದ್ದ ದ್ರೋಹ ಇದು. ಆ ಕುಮಾರಸ್ವಾಮಿಗೆ ಅರ್ಥ ಆಗ ಬೇಕು ನನ್ನ ವಿರುದ್ಧ ಮಾತನಾಡೋದಲ್ಲ. ಕುಮಾರ ಸ್ವಾಮಿ ನನಗೆ ಹೇಳಿ ಕೊಡ ಬೇಕಾದ ಅವಶ್ಯಕತೆ ಇಲ್ಲ. ಕುಮಾರ ಸ್ವಾಮಿ ಅವರ ತಟ್ಟೆಯಲ್ಲಿ ಹೆಗ್ಗಣ ಬಿದಿದ್ದೆ. ಪ್ರಜಾಪ್ರಭುತ್ವ ಸೋತಿರುವ ಹತಾಷೆಯಲ್ಲಿ ಮಾತನಾಡುತ್ತಿದ್ದಾರೆ. ಅವರಷ್ಟೆ ಶಕ್ತಿ ದೇವರು ನನಗೆ ಕೊಟ್ಟಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಇನ್ನು ಪಾಕಿಸ್ತಾನ್ ಜಿಂದಬಾದ್ ಕೂಗಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಎಸ್ ಟಿ ಸೋಮಶೇಖರ್, ಇದು ನೂರಕ್ಕೆ ನೂರಷ್ಟು ತಪ್ಪು. ಪೊಲೀಸರು ಹಾಗೂ ಗೃಹಮಂತ್ರಿಗಳಿಗೆ ಮಾತನಾಡಿದ್ದೇನೆ. ಯಾರೇ ಕೂಗಿದ್ರು ಅವರ ವಿರುದ್ದ ಕ್ರಮ ಜರುಗಿಸ ಬೇಕು. ಬಿಜೆಪಿ ಅವರಿಗೆ ಇದು ಒಂದು ಅಂಶದ ಕಾರ್ಯಕ್ರಮ. ಅವರು ವಿಧಾನಸಭೆಯಲ್ಲಿ ಜನರ ಪರವಾಗಿ ಸರ್ಕಾರಕ್ಕೆ ಚುರುಕು ಮುಟ್ಟಿಸೋ ಕ್ರಮ ಮಾಡ ಬೇಕು. ಅದು ಬಿಟ್ಟು ಚಿಕ್ಕ ಚಿಕ್ಮ ವಿಚಾರವನ್ನಿಟ್ಟುಕೊಂಡು ಪ್ರತಿಭಟನೆ ಮಾಡ್ತಾರೆ ಎಂದರು.