ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿಯಾಗಲಿ ಎಂಬ ಶ್ರೀರಾಮುಲು ಹೇಳಿಕೆ ವಿಚಾರ; ಇದೀಗ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಕ್ಕೆ ಹೈಕಮಾಂಡ್‌ಗೆಉತ್ತರ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ವರದಿ : ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ (ಆ.18) : ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು. 2018ರ ಬಾದಾಮಿ ಚುನಾವಣೆಯಲ್ಲಿ ಅವರು ಹೇಗೆ ಗೆದ್ರು ಗೊತ್ತಾ..? ನನ್ನ ಮತ್ತು ಅವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಮುಂದಿನ ದಿನಗಳಲ್ಲಿ ನಾವಿಬ್ಬರು ಒಂದೇ ವೇದಿಕೆಯಲ್ಲಿ ಬಂದ್ರು ಅಚ್ಚರಿಯಿಲ್ಲ. ಶ್ರೀರಾಮುಲು(Sriramulu) ಯಾವಾಗಲೂ ಕುರುಬ ಸಮಾಜದ ಪರವಾಗಿದ್ದಾರೆ ಮತ್ತು ಸಿದ್ದರಾಮಯ್ಯ ವಿರೋಧಿಯಲ್ಲ ಎಂದು ಹೇಳೋ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಾಡಿಹೊಗಳಿದ್ದ ಶ್ರೀರಾಮುಲುಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗಾಗಲೇ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್(Nalin Kumar Kateelu) ಸೇರಿದಂತೆ ಹಲವು ರಾಜ್ಯ ನಾಯಕರಿಗೆ ಉತ್ತರ ನೀಡಿದ್ದಾರೆ.. ಇದೀಗ ಹೈಕಮೆಂಡ್ ನಿಂದಲೂ ಶ್ರೀರಾಮುಲುಗೆ ಮೌಖಿಕ ನೋಟಿಸ್ ನೀಡಲಾಗಿದೆ..?
undefined
ಸಿದ್ದು ಸಿಎಂ ಆಗಲಿ: ಸ್ಪಷ್ಟನೆ ಕೊಡಲು ಹೋಗಿ ಶ್ರೀರಾಮುಲು ಮತ್ತೆ ಯಡವಟ್ಟು, ಪೇಚಿಕೆ ಸಿಲುಕಿದ ಸಚಿವ..!
ಘಟನೆ ಕುರಿತು ವಿವರಣೆ ನೀಡುವಂತೆ ಸೂಚನೆ : ಮೊನ್ನೆ ಸಮುದಾಯದ ಕಾರ್ಯಕ್ರಮದಲ್ಲಿ ಗೊತ್ತಿದ್ದು, ಮಾತನಾಡಿದ್ರೋ ಅಥವಾ ಒಂದು ಸಮುದಾಯದ ಜನರ ಓಲೈಕೆಗೆ ಮಾತನಾಡಿದ್ರೊ ಗೊತ್ತಿಲ್ಲ. ಸಿದ್ದರಾಮಯ್ಯ ಅವರನ್ನು ಹಾಡಿ ಹೋಗಳೋ ಮೂಲಕ ಸ್ವಪಕ್ಷೀಯರ ಕೆಂಗಣ್ಣಿಗೆ ಗುರಿಯಾಗೋ ಮೂಲಕ ಶ್ರೀರಾಮುಲು ಸಾಕಷ್ಟು ಇರಿಸುಮುರಿಸು ಎದುರಿಸುತ್ತಿದ್ದಾರೆ. ಇನ್ನೂ ರಾಜ್ಯವಷಷ್ಟೇ ಅಲ್ಲದೇ ರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ಸಿದ್ದರಾಮಯ್ಯ ಅವರನ್ನು ಹೊಗಳಿರೋ ಶ್ರೀರಾಮುಲು ಅವರ ನಡೆ ಕುರಿತು ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಹೀಗಾಗಿ ರಾಷ್ಟ್ರೀಯ ನಾಯಕರು ಶ್ರೀರಾಮುಲು ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶ್ರೀರಾಮುಲು ಉತ್ತರಿಸಬೇಕಾದ ಪ್ರಶ್ನೆಗಳು: ಯಾವ ಸಂದರ್ಭದಲ್ಲಿ ಸಿದ್ದರಾಮಯ್ಯ ಬಗ್ಗೆ ಇಷ್ಟೊಂದು ಮಾತನಾಡಿರುವುದು, ಅವಶ್ಯಕತೆ ಏನಿತ್ತು ಅನ್ನೋ ವಿವರಣೆ..? ಯಾಕೆ ಸಿದ್ದರಾಮಯ್ಯ ಪರ ಮಾತನಾಡಿದ್ರಿ..? ಅಂತಹಾ ಅನಿವಾರ್ಯತೆ ಎನಿತ್ತು? ಬಾದಾಮಿ ಚುನಾವಣೆ ತಂತ್ರದ ವಿಷಯ ಈಗ್ಯಾಕೆ ಯಾಕೆ ಬಂತು..? ಬಾದಾಮಿ ಚುನಾವಣೆಯಲ್ಲಿ ಅಮಿತ್ ಷಾ ಸೇರಿದಂತೆ ಹಲವು ರಾಜ್ಯ ನಾಯಕರು ಮುಂದಾಳತ್ವ ವಹಿಸಿದ್ರು.. ಇಂತಹ ಚುನಾವಣೆ ಬಗ್ಗೆ ಅನುಮಾನ ಬರೋ ರೀತಿಯಲ್ಲಿ ಯಾಕೆ ಮಾತನಾಡಿದ್ರಿ..
ಹೌದು, ಇದಿಷ್ಟು ವಿಷಯ ಸೇರಿದಂತೆ ಹಲವು ಪ್ರಶ್ನೆಗಳಿಗೆ ಶ್ರೀರಾಮುಲು ಇದೀಗ ಉತ್ತರ ನೀಡಬೇಕಿದೆ. ಅದು ಕೂಡ ಇಂದು ರಾಜ್ಯ ಬಿಜೆಪಿ ಸಭೆ ಇರೋ ಹಿನ್ನಲೆ ಬೆಂಗಳೂರಿಗೆ ಬಂದಿರೋ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿಯಾಗಿ ಉತ್ತರ ನೀಡಬೇಕಾದ ಅನಿವಾರ್ಯವಾಗಿದೆ.
ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು: ಶ್ರೀರಾಮುಲು ಹೀಗೆ ಹೇಳಿದ್ಯಾಕೆ?
ವಿಷಯ ಗಂಭೀರವಾಗಲು ಕಾರಣವೇನು?: ಒಂದು ಸಮುದಾಯದ ಪರ ಮಾತನಾಡಿದ್ರೇ ವಿಷಯ ಗಂಭೀರವಾಗ್ತಿರಲಿಲ್ಲ. ಬಹುಶಃ ಸಿದ್ದರಾಮಯ್ಯ ಅವರ ಪಕ್ಷದಲ್ಲಿ ಸಿಎಂ ಆಗಲಿ ಎಂದಿದ್ರು ಇಷ್ಟೊಂದು ಸಮಸ್ಯೆ ಬರುತ್ತಿರಲಿಲ್ಲವೇನು ಆದ್ರೇ,ಬಾದಾಮಿ ಚುನಾವಣೆಯಲ್ಲಿ ಪರೋಕ್ಷವಾಗಿ ಸಿದ್ದರಾಮಯ್ಯ ಗೆಲ್ಲಲು ಶ್ರೀರಾಮುಲು ಸಹಕಾರ ಮಾಡಿದಂತಿತ್ತು ಎನ್ನುವ ಮಾತು ಸಾಕಷ್ಟು ಚರ್ಚೆಗಿಡು ಮಾಡಿದೆ. ಯಾಕಂದ್ರೇ ಚುನಾವಣೆಯಲ್ಲಿ ಶ್ರೀರಾಮುಲು ಗೆಲ್ಲಿಸಿಕೊಳ್ಳಲು ಅಂದು ಬಾದಾಮಿಯಲ್ಲಿ ಅಮಿತ್ ಷಾ ಸೇರಿದಂತೆ ಹಲವು ನಾಯಕರು ಬಂದಿದ್ರು.ಸಿದ್ದರಾಮಯ್ಯ ಅವರನ್ನು ಸೋಲಿಸಲೇಬೇಕೆಂದು ರಾಜ್ಯವಷ್ಟೇ ಅಲ್ಲ ರಾಷ್ಟ್ರೀಯ ಮುಖಂಡರು ಟೊಂಕಕಟ್ಟಿ ನಿಂತಿದ್ರು. ಆದ್ರೇ ಸಿದ್ದರಾಮಯ್ಯ ಗೆಲ್ಲಲು
ಒಳ ಒಪ್ಪಂದ ಮಾಡಿಕೊಂಡಿರೋ ರೀತಿಯಲ್ಲಿ ಮಾತನಾಡಿರೋ ಶ್ರೀರಾಮುಲು ಮಾತಿನಿಂದ ಇದು ಬಿಜೆಪಿ ಹೈಕಮೆಂಡ್ ನಾಯಕರಿಗೆ ಸಾಕಷ್ಟು ಮುಜುಗರ ತಂದಿದೆ. ಹೀಗಾಗಿ ಘಟನೆ ವಿವರಣೆ ನೀಡುವಂತೆ ಶ್ರೀರಾಮುಲುಗೆ ಹೈಕಮೆಂಡ್ ಸೂಚನೆ ನೀಡಿದೆ ಎನ್ನಲಾಗ್ತಿದೆ.