ತುಮಕೂರಿನ ಶಿರಾ ಉಪಚುನಾವಣೆ JDS ಅಭ್ಯರ್ಥಿ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಕಾರ್ಯಕರ್ತರಿಗೆ ಬಿಗ್ ಶಾಕಿಂಗ್ ನ್ಯೂಸ್ ಸಿಕ್ಕಿದೆ.
ತುಮಕೂರು, (ಅ.06): ಶಿರಾ ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ದಿವಂಗತ ಶಾಸಕ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ ಅವರನ್ನು ಘೋಷಣೆ ಮಾಡಲಾಗಿದೆ.
ಇಂದು (ಮಂಗಳವಾರ) ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಅಧಿಕೃತವಾಗಿ ಘೋಷಣೆ ಮಾಡಿದರು. ಇದಾದ ಕೆಲವೇ ಸಮಯದಲ್ಲಿ ಜೆಡಿಎಸ್‌ಗೆ ಬಿಗ್ ಶಾಕ್ ಆಗಿದೆ.
ಶಿರಾ ಬೈ ಎಲೆಕ್ಷನ್‌ಗೆ ಜೆಡಿಎಸ್ ಅಭ್ಯರ್ಥಿ ಘೋಷಣೆ: ರಂಗೇರಿದ ಉಪಚುನಾವಣೆ..!
ಹೌದು... ಶಿರಾ ಉಪಚುನಾವಣೆ JDS ಅಭ್ಯರ್ಥಿ ಹಾಗೂ ದಿವಂಗತ ಶಾಸಕ ಸತ್ಯನಾರಾಯಣ್ ಪತ್ನಿ ಅಮ್ಮಾಜಮ್ಮಾಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ನಿನ್ನೆಯಷ್ಟೇ (ಸೋಮವಾರ) ಕೊರೋನಾ ಪರೀಕ್ಷೆಗೆ ಅಮ್ಮಾಜಮ್ಮಾರನ್ನ ಒಳಪಡಿಸಲಾಗಿತ್ತು. ಕಳೆದ ಮೂರು ದಿನದಿಂದ 62 ವರ್ಷದ ಅಮ್ಮಾಜಮ್ಮಾ ಮೈಕೈ ನೋವಿನಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.
ಇದೀಗ, ಅವರಿಗೆ ಕೊರೋನಾ ದೃಢಪಟ್ಟಿರೋದನ್ನ ಅಮ್ಮಾಜಮ್ಮಾ ಪುತ್ರ ಸತ್ಯಪ್ರಕಾಶ್ ಅಧಿಕೃತವಾಗಿ ತಿಳಿಸಿದ್ದಾರೆ. ಸದ್ಯ ಅಮ್ಮಾಜಮ್ಮಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಚುನಾವಣೆ ಹೊತ್ತಲ್ಲಿ ಕೊರೋನಾ ವಕ್ಕರಿಸಿಕೊಂಡಿದ್ದು, ಜೆಡಿಎಸ್ ಕಾರ್ಯಕರ್ತರಿಗೆ ಕೊಂಚ ಬೇಸರ ತಂದಿದೆ.
ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ಆರ್.ಆರ್.ನಗರ ಕ್ಷೇತ್ರಗಳಿಗೆ ನ.03ರಂದು ಮತದಾನ ನಡೆಯಲಿದ್ದು, ನ.10ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಸಲು ಅ.16 ಕೊನೆಯ ದಿನವಾಗಿದೆ....