ಸಿದ್ದರಾಮೋತ್ಸವ ಪಕ್ಷದ್ದೇ ಕಾರ್ಯಕ್ರಮ: ಮಧು ಬಂಗಾರಪ್ಪ

Published : Jul 24, 2022, 01:02 PM IST
ಸಿದ್ದರಾಮೋತ್ಸವ ಪಕ್ಷದ್ದೇ ಕಾರ್ಯಕ್ರಮ: ಮಧು ಬಂಗಾರಪ್ಪ

ಸಾರಾಂಶ

ಸಿದ್ದರಾಮೋತ್ಸವ ಕಾರ್ಯಕ್ರಮ ಇದು ಸಿದ್ದರಾಮಯ್ಯ ಅವರ ಅಭಿಮಾನಿಗಳಿಂದ ನಡೆಯುತ್ತಿರುವ ಕಾರ್ಯಕ್ರಮ. ಸಿದ್ದರಾಮಯ್ಯನವರಿಗೆ ಅದ್ದೂರಿ ಹುಟ್ಟು ಹಬ್ಬ ಆಚರಿಸಿಕೊಳ್ಳುವುದರಲ್ಲಿ ಆಸಕ್ತಿ ಇಲ್ಲ ಎಂದ ಮಧು ಬಂಗಾರಪ್ಪ

ಉಡುಪಿ (ಜು.24): ಸಿದ್ದರಾಮಯ್ಯ ಅವರಿಗೆ ತಮ್ಮ ಹುಟ್ಟುಹಬ್ಬ ಆಚರಿಸುವ ವೈಯಕ್ತಿಕ ಆಸೆ ಇಲ್ಲ,ಮೊದಲಿನಿಂದಲೂ ಅವರಿಗೆ ಆಡಂಬರ ಆಚರಣೆಗಳಿಂದ ದೂರ. ಆದರೆ ಅವರ ಅಭಿಮಾನಿಗಳು ಮತ್ತು ಪಕ್ಷದ ತೀರ್ಮಾನದಂತೆ ಸಿದ್ದರಾಮೋತ್ಸವ ನಡೆಯುತ್ತದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಧು ಬಂಗಾರಪ್ಪ ಹೇಳಿದ್ದಾರೆ. ಅವರು ಉಡುಪಿ ಕಾಂಗ್ರೆಸ್‌ ಭವನದಲ್ಲಿ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬ - ಕಾಂಗ್ರೆಸ್‌ ಸಮಾವೇಶದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್‌ ಚಿಂತನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

Exclusive Interview: ಸಿದ್ದರಾಮೋತ್ಸವ ಶಕ್ತಿ ಪ್ರದರ್ಶನ ಅಲ್ಲ, ಅನಗತ್ಯ ವಿವಾದ ಅಷ್ಟೇ: ಸಿದ್ದರಾಮಯ್ಯ

ಕಾಂಗ್ರೆಸ್‌(Congress) ಮುಂಬರುವ ಚುನಾವಣೆ(Election)ಯಲ್ಲಿ ಗೆಲುವು ಸಾಧಿಸಿ ಮತ್ತೆ ಅಧಿಕಾರಕ್ಕೆ ಬರಲಿದೆ. ಆ ಕಾರಣಕ್ಕಾಗಿ ಈ ಕಾರ್ಯಕ್ರಮ ಪಕ್ಷಕ್ಕೆ ಬಹಳ ಮುಖ್ಯ, ಈ ಕಾರ್ಯಕ್ರಮ ಮುಂಬರುವ ರಾಜ್ಯ ಚುನಾವಣೆಗೆ ತಯಾರಿ ರೂಪದಲ್ಲಿ ನಡೆಯುತ್ತಿದೆ. ಕಾಂಗ್ರೆಸ್‌ನ ಶಕ್ತಿ ಮತ್ತು ಒಗ್ಗಟ್ಟಿನ ಪ್ರದರ್ಶನ ನಡೆಯಲಿದೆ. ಸಿದ್ದರಾಮೋತ್ಸವ ಒಂದು ವ್ಯಕ್ತಿಯ ವೈಭವೀಕರಣ ಅಲ್ಲ ಎಂದವರು ಸಮಾಜಾಯಿಷಿ ನೀಡಿದರು.

ಕಾಂಗ್ರೆಸ್‌ನಲ್ಲಿ ಒಬ್ಬರನ್ನೊಬ್ಬರು ತುಳಿಯುವ ವ್ಯವಸ್ಥೆ ಎಂದೆಂದಿಗೂ ಇಲ್ಲ, ನಾಯಕರಾದ ಡಿ.ಕೆ. ಶಿವಕುಮಾರ್‌(D.k.Shivakumar), ಸಿದ್ದರಾಮಯ್ಯ(Siddaramaiah) ನಡುವೆ ಗೊಂದಲ ಇಲ್ಲ, ಅದೆಲ್ಲ ವಿರೋಧ ಪಕ್ಷಗಳ ಸೃಷ್ಟಿಸಿರುವುದು. ವಾಸ್ತವದಲ್ಲಿ ಅವರಿಬ್ಬರು ನಾಯಕರು ಜೊತೆಯಾಗಿಯೇ ಇದ್ದಾರೆ. ಹಿಂದೆ ಗುಂಡೂರಾವ್‌(Gundoorao) ಮತ್ತು ಬಂಗಾರಪ್ಪ(Bangarappa) ನಡುವೆಯೂ ಅನ್ಯೋನ್ಯ ರಾಜಕಾರಣ ಇತ್ತು ಎಂದವರು ಉದಾಹರಣೆ ನೀಡಿದರು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸುವ ಮೂಲಕ ಸಿದ್ದರಾಮಯ್ಯ ಅವರ ಬರ್ತಡೇಗೆ ರಾಜ್ಯದ ಜನರೇ ಗಿಫ್ಟ್ ಕೊಡಬೇಕು ಎಂದು ಮಧು ಬಂಗಾರಪ್ಪ ಹೇಳಿದರು.

ಸಿದ್ದರಾಮೋತ್ಸವಕ್ಕೆ ನೋ ಕಾಮೆಂಟ್‌ ಎಂದ ಆನಂದ ಸಿಂಗ್‌..!

ವಿಜಯೇಂದ್ರ ರಾಜಕೀಯಕ್ಕೆ ಜೈಲಿಗೆ ಹೋಗಲೋ ಜನ ಸೇವೆಗೋ?

ಬಿ.ಎಸ್‌. ಯಡಿಯೂರಪ್ಪ(B.S.Yadiyurappa) ಅವರು ತಮ್ಮ ಕ್ಷೇತ್ರವನ್ನು ಪುತ್ರ ವಿಜಯೇಂದ್ರ(B.Y.Vijayendra)ರಿಗೆ ಬಿಟ್ಟು ಕೊಟ್ಟಿರುವುದಕ್ಕೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ನಾವು ಕೂಡ ನಮ್ಮ ತಂದೆಯ ಹೆಸರಿನಲ್ಲಿ ರಾಜಕೀಯಕ್ಕೆ ಬಂದಿದ್ದೇವೆ. ತಂದೆಯ ಹೆಸರು ಹೇಳಿಕೊಂಡು ಬಂದ ಮಾತ್ರಕ್ಕೆ ರಾಜಕೀಯದಲ್ಲಿ ಗೆಲ್ಲುತ್ತಾರೆ ಎಂದೇನೂ ಇಲ್ಲ. ರಾಜಕಾರಣದಲ್ಲಿ ಸ್ವಂತ  ಸಾಮರ್ಥ್ಯ ಇದ್ದವರು ರಾಜಕೀಯ ಮಾಡಲಿ ಅಭ್ಯಂತರವಿಲ್ಲ, ಆದರೆ ವಿಜಯೇಂದ್ರ ರಾಜಕೀಯಕ್ಕೆ ಬರುವುದು ಕೊಳ್ಳೆ ಹೊಡೆಯಲೋ? ಜೈಲಿಗೆ ಹೋಗಲೋ? ಜನಸೇವೆಗೋ? ಎಂದು ವ್ಯಂಗ್ಯವಾಡಿದರು. ಇದೇ ವೇಳೆ ವಿಜಯೇಂದ್ರ ಅವರಿಗೆ ಒಳ್ಳೇದಾಗಲಿ ದೇವರು ಒಳ್ಳೇದು ಮಾಡಲಿ, ನನಗೂ ಅವರು ಹೀಗೆ ಹಾರೈಸುತ್ತಿದ್ದರು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!