ಅರ್ಥಶಾಸ್ತ್ರ ಗೊತ್ತಿಲ್ಲದೆ ನಾನು ಬಜೆಟ್‌ ಮಂಡಿಸಿದ್ದೇನೆಯೇ?: ಸಿದ್ದು ಟಾಂಗ್‌

Published : Jun 06, 2022, 03:00 AM IST
ಅರ್ಥಶಾಸ್ತ್ರ ಗೊತ್ತಿಲ್ಲದೆ ನಾನು ಬಜೆಟ್‌ ಮಂಡಿಸಿದ್ದೇನೆಯೇ?: ಸಿದ್ದು ಟಾಂಗ್‌

ಸಾರಾಂಶ

ತಾಲೂಕು ಕೋರ್ಟಲ್ಲಿ ವಕೀಲಿಕೆ ಮಾಡುತ್ತಿದ್ದ ಪ್ರತಿಪಕ್ಷ ನಾಯಕಗೆ ಅರ್ಥಶಾಸ್ತ್ರದ ಬಗ್ಗೆ ಏನು ಗೊತ್ತು? ಎಂಬ ಸಂಸದ ಪ್ರತಾಪ್‌ ಸಿಂಹ ಹೇಳಿಕೆಗೆ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮೈಸೂರು (ಜೂ.06): ತಾಲೂಕು ಕೋರ್ಟಲ್ಲಿ ವಕೀಲಿಕೆ ಮಾಡುತ್ತಿದ್ದ ಪ್ರತಿಪಕ್ಷ ನಾಯಕಗೆ ಅರ್ಥಶಾಸ್ತ್ರದ ಬಗ್ಗೆ ಏನು ಗೊತ್ತು? ಎಂಬ ಸಂಸದ ಪ್ರತಾಪ್‌ ಸಿಂಹ ಹೇಳಿಕೆಗೆ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಣಕಾಸು ವಿಚಾರದ ಬಗ್ಗೆ ಗೊತ್ತಿಲ್ಲದೆ 13 ಬಜೆಟ್‌ ಮಂಡಿಸಿದ್ದೇನೆಯೇ? ಹಣಕಾಸು ಬಗ್ಗೆ ಇವನಿಗೆ ಏನು ಗೊತ್ತು? ಎಂದು ತಿರುಗೇಟು ನೀಡಿದ್ದಾರೆ. ನಗರದಲ್ಲಿ ಭಾನುವಾರ ಸಂಶೋಧನಾ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಕೇಂದ್ರಕ್ಕೆ .19 ಲಕ್ಷ ಕೋಟಿ ಕರ್ನಾಟಕದಿಂದ ಸಂಗ್ರಹವಾಗಿದೆ. ಆದರೆ ಬಂದಿದ್ದು .4.50 ಲಕ್ಷ ಕೋಟಿ ಮಾತ್ರ. 

ನಮ್ಮ ತೆರಿಗೆ ಹಣ .14 ಲಕ್ಷ ಕೋಟಿ ಬರಬೇಕಲ್ಲ, ಅದು ಪ್ರತಾಪ ಸಿಂಹ ಅವರಪ್ಪನದಾ? ಮೋದಿ ಅವರಪ್ಪನದಾ? ಎಂದು ಪ್ರಶ್ನಿಸಿದರು. ಮೋದಿ ಅಧಿಕಾರಕ್ಕೆ ಬರುವ ಮುನ್ನ .53 ಲಕ್ಷ ಕೋಟಿ ಸಾಲ ಇದ್ದರೆ ಈಗ .155 ಲಕ್ಷ ಕೋಟಿ ಸಾಲವಾಗಿದೆ. 2018 ಮಾರ್ಚ್‌ ಅಂತ್ಯಕ್ಕೆ .2.45 ಲಕ್ಷ ಕೋಟಿ ಸಾಲವಾಗಿತ್ತು. ಈಗ .5.45 ಲಕ್ಷ ಕೋಟಿ ಸಾಲವಿದೆ. ಇವರ ಕೈಯಲ್ಲಿ ಆಡಳಿತ ಇದ್ದರೆ ದೇಶ, ರಾಜ್ಯ ಉಳಿಯಲು ಸಾಧ್ಯವಿಲ್ಲ. ದಲಿತರು ಮತ್ತು ಹಿಂದುಳಿದವರು ಒಂದಾಗದಿದ್ದರೆ ಬಿಜೆಪಿ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂದರು.

ನಮ್ಮ ಹಳೆಯ ಚಡ್ಡಿಗಳನ್ನು ಕಳಿಸಿಕೊಡುತ್ತೇವೆ: ಕಾಂಗ್ರೆಸ್ ನಾಯಕರ ವಿರುದ್ದ ಸಿ.ಟಿ.ರವಿ ವಾಗ್ದಾಳಿ

13 ಬಾರಿ ಬಜೆಟ್‌ ಮಂಡಿಸಿದ್ದರೂ ಸಿದ್ದುಗೆ ತೆರಿಗೆ ಜ್ಞಾನ ಇಲ್ಲ: ತಾಲೂಕು ನ್ಯಾಯಾಲಯದಲ್ಲಿ ವಕೀಲಗಿರಿ ಮಾಡಿಕೊಂಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ದೇಶದ ಆರ್ಥಿಕತೆ ಬಗ್ಗೆ ಹೇಗೆ ಗೊತ್ತಾಗಬೇಕು ಎಂದು ಸಂಸದ ಪ್ರತಾಪ್‌ ಸಿಂಹ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚು ಅನುದಾನ ಬಂದಿಲ್ಲ ಹಾಗೂ ತೆರಿಗೆ ಬಾಕಿ ನೀಡಿಲ್ಲ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಸಂಬಂಧಿಸಿದಂತೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಉತ್ತರಿಸಿದ ಅವರು, 13 ಬಾರಿ ಬಜೆಟ್‌ ಮಂಡಿಸಿರುವುದಾಗಿ ಹೇಳಿಕೊಳ್ಳುವ ಸಿದ್ದರಾಮಯ್ಯ ತೆರಿಗೆ ವ್ಯವಸ್ಥೆಯ ಕುರಿತು ಕನಿಷ್ಠ ಜ್ಞಾನ ಇಲ್ಲದೆ ಹೀಗೆ ಮಾತನಾಡುತ್ತಿದ್ದಾರೆ. ಕೆಂಗಲ್‌ ಹನುಮಂತಯ್ಯ ಅವರಿಂದ ಹಿಡಿದು ಜಗದೀಶ್‌ ಶೆಟ್ಟರ್‌ವರೆಗೆ ಎಲ್ಲಾ ಮುಖ್ಯಮಂತ್ರಿಗಳು ಸಾಲ ಮಾಡಿದ್ದ ಎರಡು ಪಟ್ಟನ್ನು ಸಿದ್ದರಾಮಯ್ಯ ಒಬ್ಬರೇ ಮಾಡಿದ್ದಾರೆ ಎಂದು ಟೀಕಿಸಿದರು.

1ಕ್ಕೆ ಅಕ್ಕಿ ಕೊಟ್ಟೆಎಂದು ಬೋರ್ಡು ಹಾಕಿಕೊಂಡಿದ್ದ ಸಿದ್ದರಾಮಯ್ಯನವರೇ ಉಳಿಕೆ 29 ಕೊಟ್ಟಿದ್ದು ಯಾರು? ಮೈಸೂರಿನಿಂದ ಆಯ್ಕೆಯಾದ ನೀವು ನೀಡುತ್ತಿರುವ ಹೇಳಿಕೆಯನ್ನು ನೋಡಿದರೆ ನಾಚಿಕೆ ಆಗುತ್ತದೆ ಎಂದರು. ಪ್ರಧಾನಿ ನರೇಂದ್ರಮೋದಿ ಅವರು ರಾಜ್ಯಕ್ಕೆ ಸಾಕಷ್ಟು ಯೋಜನೆ ಕೊಡುತ್ತಿದ್ದಾರೆ. ಬರುತ್ತಿದ್ದಾರೆ. ಮೈಸೂರು- ಬೆಂಗಳೂರು ಹೆದ್ದಾರಿ ವಿಸ್ತರಣೆ, ಮೈಸೂರು ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆ, ಮೈಸೂರು- ಮಡಿಕೇರಿ ರಸ್ತೆ ಅಭಿವೃದ್ಧಿ, ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಗೆ 150 ಕೋಟಿ ಮೊತ್ತದ ಅತ್ಯುನ್ನತ ಅಧ್ಯಯನ ಕೇಂದ್ರ, ಪಾಸ್‌ಪೋರ್ಟ್‌ ಸೇವಾ ಕೇಂದ್ರ, ನೋಟು ಮುದ್ರಣ ಇಂಕ್‌ ಉತ್ಪಾದನಾ ಕೇಂದ್ರ ಸೇರಿದಂತೆ ಸಾಕಷ್ಟುಯೋಜನೆಯನ್ನು ಕೇಂದ್ರ ಸರ್ಕಾರ ನೀಡಿದೆ ಎಂದು ಅವರು ವಿವರಿಸಿದರು.

ಆರೆಸ್ಸೆಸ್‌ ಹೆಡಗೇವಾರ್‌ ಭಾಷಣ ಶಾಲಾ ಮಕ್ಕಳಿಗೆ ಯಾಕ್‌ ಬೇಕ್ರಿ?: ಸಿದ್ದರಾಮಯ್ಯ

ಕೇಂದ್ರ ಸರ್ಕಾರವು . 1.29 ಲಕ್ಷ ಕೋಟಿ ಅನುದಾನವನ್ನು ವಿವಿಧ ಯೋಜನೆಯಡಿ ನೀಡಿದೆ. ಎನ್‌ಆರ್‌ಇಜಿ ಅಡಿ .27,418 ಕೋಟಿ, ಕೃಷಿಗೆ  19,374 ಕೋಟಿ ನೀಡಿದ್ದು, ಕೃಷಿ ಸಮ್ಮಾನ್‌ ಯೋಜನೆಯಡಿ 47,86,000 ರೈತರಿಗೆ . 8,704 ಕೋಟಿ ನೀಡಿದ್ದಾರೆ. ಪ್ರಧಾನ ಮಂತ್ರಿ ಕೃಷಿ ಕ್ರೆಡಿಟ್‌ಕಾರ್ಡ್‌ ಯೋಜನೆಯಡಿ .19 ಸಾವಿರ ಕೋಟಿ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಗೆ 3,298 ಕಿ.ಮೀಟರ್‌ಗೆ . 50,527 ಕೋಟಿಯನ್ನು ಕೇಂದ್ರ ನೀಡಿದೆ ಎಂದರು. ಈ ಪೈಕಿ ಮೈಸೂರಿಗೆ 9,551 ಕೋಟಿಯನ್ನು ಹೆದ್ದಾರಿಗೆ ನೀಡಿದೆ. ಆಯುಷ್‌ ಕಟ್ಟಡ ಮತ್ತು ಅತ್ಯುನ್ನತ ಕೇಂದ್ರ ತೆರೆಯಲು . 150 ಕೋಟಿ, ಮೈಸೂರು- ಮಡಿಕೇರಿ ಹೆದ್ದಾರಿ ವಿಸ್ತರಣೆಗೆ  4 ಸಾವಿರ ಕೋಟಿ, ಆತ್ಮನಿರ್ಭರ ಭಾರತ್‌ ಯೋಜನೆಯಡಿ 10 ಸಾವಿರ ಫಲಾನುಭವಿಗಳಿಗೆ ತಲಾ 10 ಸಾವಿರ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕೆ ಶಿವಕುಮಾರ್‌ಗೆ ಕೇಂದ್ರ ನಾಯಕತ್ವ ಸ್ಥಾನ : ಕಾಂಗ್ರೆಸ್‌ನಲ್ಲಿ ಕೂಗು
ನಾಯಕತ್ವ ಬದಲಾವಣೆ ಹೇಳಿಕೆ ಒಂದು ತಿಂಗಳ ಮೌನವ್ರತ : ಪಿ.ರವಿಕುಮಾರ್