ಮಂಡ್ಯದಲ್ಲಿ ಜೆಡಿಎಸ್ ವೀಕ್ ಆಗಿದೆ: ಇದೇ ಬಿಗ್ ಎಕ್ಸಾಂಪಲ್

Suvarna News   | Asianet News
Published : Oct 10, 2021, 03:28 PM ISTUpdated : Oct 10, 2021, 03:42 PM IST
ಮಂಡ್ಯದಲ್ಲಿ ಜೆಡಿಎಸ್ ವೀಕ್ ಆಗಿದೆ: ಇದೇ ಬಿಗ್ ಎಕ್ಸಾಂಪಲ್

ಸಾರಾಂಶ

ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಾದರೆ ಕೇಂದ್ರ ಸರ್ಕಾರದ ಜೊತೆ ಮಾತನಾಡಿ ಅವಶ್ಯಕತೆ ಇರುವ ಕಲ್ಲಿದ್ದಲು ತರಿಸಿಕೊಳ್ಳಬೇಕು ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ತಯಾರಾಗುವುದು ನಿಲ್ಲಬಾರದು ಎಂದ ಮಾಜಿ ಸಿಎಂ ಸಿದ್ದರಾಮಯ್ಯ ಜೆಡಿಎಸ್ ಬಗ್ಗೆ ಮಾತನಾಡದಿದ್ದರೆ ಸಿದ್ದುಗೆ ನಿದ್ದೆ ಬರಲ್ಲ ಎಂಬ HDK ಹೇಳಿಕೆ ವಿಚಾರಕ್ಕೂ ಪ್ರತಿಕ್ರಿಯೆ

 ಮಂಡ್ಯ  (ಅ.10):  ರಾಜ್ಯದಲ್ಲಿ ಕಲ್ಲಿದ್ದಲು (Coal) ಕೊರತೆಯಾದರೆ ಕೇಂದ್ರ ಸರ್ಕಾರದ ಜೊತೆ ಮಾತನಾಡಿ ಅವಶ್ಯಕತೆ ಇರುವ ಕಲ್ಲಿದ್ದಲು ತರಿಸಿಕೊಳ್ಳಬೇಕು. ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ (Electricity) ತಯಾರಾಗುವುದು ನಿಲ್ಲಬಾರದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದರು.

ಮಂಡ್ಯದಲ್ಲಿ (mandya) ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಇದರಿಂದ ರೈತರಿಗೆ (Farmers), ಗ್ರಾಹಕರಿಗೆ  ತೊಂದೆಯಾಗಬಾರದು. ಕಲ್ಲಿದ್ದಲು ವಿಚಾರ ನಿರ್ವಹಣೆ ಸರ್ಕಾರದ ಜವಬ್ದಾರಿ ಎಂದರು. 

ನಾನು ಮೊದಲಿನಿಂದಲು RSS ವಿರುದ್ಧ ಮಾತನಾಡುತ್ತಿದ್ದೇನೆ. RSS ಒಂದು ಕೋಮುವಾದಿ ಸಂಘಟನೆ. ಶ್ರೇಣೀಕೃತ ವ್ಯವಸ್ಥೆ ಪರವಾಗಿರುವ ಸಂಘಟನೆ. ಮನುಸಂಸ್ಕೃತಿ ಇರುವ ಸಂಘಟನೆ. ನಾನು ರಾಜಕೀಯಕ್ಕೆ ಬಂದಾಗಿನಿಂದಲೂ ವಿರೋಧಿಸಿಕೊಂಡು ಬರ್ತಿದ್ದೀನಿ ಎಂದರು. 

ಉಪಚುನಾವಣೆ ಗೆದ್ದು ದೇಶಕ್ಕೆ ಸಂದೇಶ ರವಾನಿಸಬೇಕಿದೆ: ಸಿದ್ದರಾಮಯ್ಯ

ಜೆಡಿಎಸ್ (JDS) ಬಗ್ಗೆ ಮಾತನಾಡದಿದ್ದರೆ ಸಿದ್ದುಗೆ ನಿದ್ದೆ ಬರಲ್ಲ ಎಂಬ ಕುಮಾರಸ್ವಾಮಿ (HD Kumaraswamy) ಹೇಳಿಕೆ ವಿಚಾರಕ್ಕೂ ಪ್ರತಿಕ್ರಿಯಿಸಿದ ಅವರು ನಾನು ಜೆಡಿಎಸ್ ಬಗ್ಗೆ ಮಾತನಾಡೋದೆ ಇಲ್ಲ. ಕುಮಾರಸ್ವಾಮಿ ಕಾಲು ಕೆರೆದುಕೊಂಡು ಬರ್ತಾರೆ, ನಾನೇನು ಮಾಡ್ಲೀ. ಕುಮಾರಸ್ವಾಮಿ, ದೇವೇಗೌಡರ ಬಗ್ಗೆ ಮಾತನಾಡೋದನ್ನ ಬಿಟ್ಟಿದ್ದೇನೆ. ಯಾಕಂದರೇ ನನ್ನ ಮಾತುಗಳನ್ನ ಕೋಮುವಾದಿ ಬಣ್ಣಕಟ್ಟಿ ತಿರುಚುತ್ತಾರೆ. ಟೀಕೆ ಮಾಡಿದರೆ ಮಾಡಿಕೊಳ್ಳಲಿ ಬಿಡಿ. ನಾನು‌ ಕುಮಾರಸ್ವಾಮಿ ಹೇಳಿಕೆಗಳನ್ನ ನೆಗ್ಲೈಟ್ ಮಾಡಿದ್ದೀನಿ ಎಂದರು. 

ಮಂಡ್ಯದಲ್ಲಿ ಜೆಡಿಎಸ್ ಸ್ಟ್ರಾಂಗ್ ಇದ್ದಿದ್ದರೆ ಎಂಪಿ ಚುನಾವಣೆ (MP Election) ಸೋಲುತ್ತಿದ್ದರಾ. ಮಂಡ್ಯದಲ್ಲಿ ಜೆಡಿಎಸ್ ಬಹಳ ವೀಕ್ ಆಗಿದ್ದಾರೆ. ನಾವು ಅಭ್ಯರ್ಥಿ ಹಾಕಿರಲಿಲ್ಲ, ಅವರು ಸೋತರು. ಎಷ್ಟು ಅಂತರದಲ್ಲಿ ಸೋತರು.  ಎಷ್ಟು ಎಂಎಲ್ಎ ಗಳಿದ್ದಾರೆ?. ಜೆಡಿಎಸ್ ಸ್ಟ್ರಾಂಗ್ ಇದ್ದಿದ್ದರೆ ಸೋಲುತ್ತಿದ್ದರಾ ಎಂದು ಪ್ರಶ್ನೆ ಮಾಡಿದ ಸಿದ್ದರಾಮಯ್ಯ ಮಂಡ್ಯ ಲೋಕಸಭೆಯಲ್ಲಿ ನಿಖಿಲ್ (Nikhil) ಸೋಲು ಅಣಕಿಸಿದರು. 

ಜೆಡಿಎಸ್‌ಗೆ ಯಾವಾಗಲೂ ಕಾಂಗ್ರೆಸ್‌ ಟಾರ್ಗೆಟ್

ಇನ್ನು ಹುಬ್ಬಳ್ಳಿಯಲ್ಲಿಯು ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಜೆಡಿಎಸ್‌ಗೆ ಯಾವಾಗಲೂ ಕಾಂಗ್ರೆಸ್‌(Congress)ಪಕ್ಷವೇ ಟಾರ್ಗೆಟ್‌. ಈ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಯುತ್ತಿರುವ ಹಾನಗಲ್‌ ಹಾಗೂ ಸಿಂದಗಿ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದು   ಟೀಕಿಸಿದ್ದರು.

  ಬಸವ ಕಲ್ಯಾಣದಲ್ಲೂ ಇದೇ ರೀತಿ ಮಾಡಿದ್ದರು. ಇದೀಗ ಈ ಎರಡು ಕ್ಷೇತ್ರಗಳಲ್ಲೂ ಈ ತರಹ ಮಾಡಿದ್ದಾರೆ. ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಹಾಕುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಎಲ್ಲಿ ಕಣಕ್ಕಿಳಿಸಬೇಕೋ ಅಲ್ಲಿ ನಿಲ್ಲಿಸಲ್ಲ. ಮಂಡ್ಯ, ಹಾಸನ ಮತ್ತಿತರ ಕಡೆಗಳಲ್ಲಿ ಅಲ್ಪಸಂಖ್ಯಾತರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿ ನೋಡೋಣ ಎಂದ ಅವರು, ಇಲ್ಲಿ ಬಿಜೆಪಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಅಲ್ಪಸಂಖ್ಯಾತರನ್ನು ಕಣಕ್ಕಿಳಿಸಿದ್ದಾರೆ ಎಂದು ಆರೋಪಿಸಿದ್ದರು.

ಸಿದ್ದರಾಮಯ್ಯ ಯಾವ ದೊಣ್ಣೆ ನಾಯಕ: ಕುಮಾರಸ್ವಾಮಿ

ಬಿಜೆಪಿ(BJP) ಹಾಗೂ ಜೆಡಿಎಸ್‌(JDS) ಒಳ ಒಪ್ಪಂದ ಮಾಡಿಕೊಂಡಿದೆಯೋ ಗೊತ್ತಿಲ್ಲ ಎಂದ ಅವರು, ಹಳೆ ಮೈಸೂರು ಭಾಗದಲ್ಲಿ ಅಷ್ಟೇ ಜೆಡಿಎಸ್‌ ಪ್ರಬಲವಾಗಿದೆ. ಅಲ್ಲಿ ಕಾಂಗ್ರೆಸ್‌ ಕೂಡ ಪ್ರಬಲವಾಗಿದೆ. ಹೀಗಾಗಿ, ಪದೇ ಪದೇ ಕಾಂಗ್ರೆಸ್‌ನ್ನೇ ಟಾರ್ಗೆಟ್‌ ಮಾಡುತ್ತಿದ್ದಾರೆ. ಆದರೆ, ಬಿಜೆಪಿಯನ್ನು ಮಾತ್ರ ಟಾರ್ಗೆಟ್‌ ಮಾಡುತ್ತಿಲ್ಲ ಎಂದಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?