ಇತಿಹಾಸದ ಸಮಕಾಲೀನ ಪರಿಸ್ಥಿತಿಯಲ್ಲಿ ನಾವು ಇದ್ದಿದ್ದರೆ ಸಿದ್ದರಾಮಯ್ಯ, ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಅವರು ದ್ರೋಹಿ ಹೈದರಾಲಿ ಜೊತೆ ನಿಂತುಕೊಳ್ಳುತ್ತಿದ್ದರು. ನಾವು ಲಕ್ಷ್ಮಮ್ಮಣ್ಣಿ ಪರ ಇರುತ್ತಿದ್ದೆವು.
ಚಿಕ್ಕಮಗಳೂರು (ಮಾ.19): ಟಿಪ್ಪು ಮೈಸೂರು ಒಡೆಯರಿಗೆ ಮೋಸ ಮಾಡಿದ ಎಂದು ಹೇಳಬೇಕಿಲ್ಲ. ಒಂದು ವೇಳೆ ಸಮಕಾಲೀನ ಪರಿಸ್ಥಿತಿಯಲ್ಲಿ ಇದ್ದಿದ್ದರೆ ಸಿದ್ದರಾಮಯ್ಯ, ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಅವರು ದ್ರೋಹಿ ಹೈದರಾಲಿ ಜೊತೆ ನಿಂತುಕೊಳ್ಳುತ್ತಿದ್ದರು. ನಾವು ಲಕ್ಷ್ಮಮ್ಮಣ್ಣಿ ಪರ ಇರುತ್ತಿದ್ದೆವು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇತಿಹಾಸದಲ್ಲಿ ಒನಕೆ ಓಬವ್ವ, ಸಾಮಾನ್ಯ ಗೃಹಿಣಿ ಆಗಿದ್ದರೂ ಒನಕೆ ಹಿಡಿದು ಹೈದರಾಲಿ ಸೈನಿಕರನ್ನ ಸದೆ ಬಡಿದಿದ್ದಳು. ಹಾಗಾದ್ರೆ, ಕುಮಾರಸ್ವಾಮಿ ದೃಷ್ಟಿಯಲ್ಲಿ ಒನಕೆ ಓಬವ್ವ ಮಾಡಿದ್ದು ಅಪರಾಧವಾಗುತ್ತದೆ. ಹೈದರಾಲಿ ವಿರುದ್ಧ ಮದಕರಿ ನಾಯಕ ಬಂಡಾಯ ಎದ್ದಿದ್ದು ಅಪರಾಧವಾಗುತ್ತದೆ. ಒಂದು ವೇಳೆ ಸಮಕಾಲಿನ ಪರಿಸ್ಥಿತಿಯಲ್ಲಿ ಇದ್ದಿದ್ದರೆ ಸಿದ್ದರಾಮಯ್ಯ, ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಅವರು ಹೈದರಾಲಿ ಜೊತೆ ನಿಂತುಕೊಳ್ಳುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
undefined
ಉರಿಗೌಡ - ನಂಜೇಗೌಡ ಸಿನಿಮಾ: ಮುನಿರತ್ನಗೆ ಆದಿಚುಂಚನಗಿರಿ ಶ್ರೀ ಆಹ್ವಾನ
ಬಿಜೆಪಿಯವರು ಲಕ್ಷ್ಮಮ್ಮಣ್ಣಿ ಪರ ನಿಲ್ಲುತ್ತಿದ್ದೆವು: ನಾವು ನಂಜರಾಜ ಒಡೆಯರ ಹಾಗೂ ಮಹಾರಾಣಿ ಲಕ್ಷ್ಮಮ್ಮಣ್ಣಿ ಜೊತೆ ನಿಲ್ಲುತ್ತಿದ್ದೇವು. ಟಿಪ್ಪು ಹಾಗೂ ಹೈದರಾಲಿ ಜೊತೆ ನಿಲ್ಲುವವರು ದ್ರೋಹಿಗಳು ಆಗುತ್ತಾರೆ. ಮಹಾರಾಣಿ ಲಕ್ಷ್ಮಮ್ಮಣ್ಣಿ ಜೊತೆ ನಿಲ್ಲುವವರು ದ್ರೋಹಿ ಆಗಲ್ಲ. ಲಕ್ಷ್ಮಮ್ಮಣ್ಣಿ ಸಾಮ್ರಾಜ್ಯ ಪುನರ್ ಸ್ಥಾಪಿಸಿದಿದ್ದರೆ ಸಾಮಾಜಿಕ ನ್ಯಾಯ ಸಿಗುತ್ತಿರಲಿಲ್ಲ ಎಂದು ಟಿಪ್ಪು ಬೆಂಬಲಕ್ಕೆ ನಿಂತ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿಯನ್ನು ನಡೆಸಿದರು.
ದೇಜಗೌರಿಂದ ಉರಿಗೌಡ, ನಂಜೇಗೌಡ ಪಾತ್ರದ ಉಲ್ಲೇಖ: ಇತಿಹಾಸವನ್ನ ಮರೆತವನು ಇತಿಹಾಸ ಸೃಷ್ಟಿಸಲಾರ ಎಂಬ ಗಾದೆ ಮಾತಿದೆ. 1994 ಭಾರತೀಯ ಜನತಾ ಪಾರ್ಟಿ ರಾಜ್ಯದಲ್ಲಿ ಅಧಿಕಾರದಲ್ಲಿ ಇರಲಿಲ್ಲ. ಅವಾಗ ಸುವರ್ಣ ಮಂಡ್ಯ ಎಂಬ ಪುಸ್ತಕವನ್ನು ದೇ. ಜವರೇಗೌಡರು ಬರೆದಿದ್ದಾರೆ. ಆ ಪುಸ್ತಕದಲ್ಲಿ ಉರೀಗೌಡ, ನಂಜೇಗೌಡರ ಪಾತ್ರವನ್ನ ಹೇಳಿದ್ದಾರೆ. ಇದನ್ನ ಇವತ್ತು ಸೃಷ್ಟಿ ಮಾಡಿರೋದಲ್ಲ. ಈ ಕಥೆ ಬಿಜೆಪಿ ಅವರದು ಎಂದು ಆರೋಪ ಮಾಡುತ್ತಿದ್ದಾರೆ. ದೇ. ಜವರೇಗೌಡರು ಭಾರತೀಯ ಜನತಾ ಪಾರ್ಟಿಯವರಲ್ಲ, 1994 ರಲ್ಲಿ ಪುಸ್ತಕವನ್ನು ಬರೆದಿದ್ದರು ಅವತ್ತು ಬಿಜೆಪಿ ಅಧಿಕಾರದಲ್ಲಿ ಇರಲಿಲ್ಲ. ಆಗ ದೇವೇಗೌಡರು ಮುಖ್ಯಮಂತ್ರಿ ಆಗಿದ್ದರು ಎಂದು ಹೇಳಿದರು.
ದೇವೇಗೌಡರಿಂದಲೇ ಪುಸ್ತಕ ಬಿಡುಗಡೆ: 2006ರಲ್ಲಿ ಪುನರ್ ಮುದ್ರಣಗೊಂಡ ಪುಸ್ತಕವನ್ನು ದೇವೇಗೌಡರೇ ಬಿಡುಗಡೆ ಮಾಡಿದ್ದಾರೆ. ಟಿಪ್ಪುವಿನ ನೀತಿಯ ಕಾರಣಕ್ಕೆ ಉರಿಗೌಡ, ನಂಜೇಗೌಡ ಸೇರಿದಂತೆ ಒಕ್ಕಲಿಗರು ಟಿಪ್ಪು ವಿರುದ್ಧ ತಿರುಗಿ ಬಿದ್ದಿದ್ದರು. ಟಿಪ್ಪು ಕೊಂದಿದ್ದು ಅಪರಿಚಿತರು ಎನ್ನುತ್ತಾರೆ. ನಾವು ಈಗ ಉರೀಗೌಡ, ನಂಜೇಗೌಡರೇ ಕೊಂದಿದ್ದು ಎಂದು ಹೇಳುತ್ತೇವೆ. ನಾನು ಚಾಲೆಂಜ್ ಹಾಕ್ತೀನಿ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನ ಮಸೀದಿ ಆಗಿದ್ದು ಹೇಗೆ? ಟಿಪ್ಪು ಮತಾಂತರ ಅಲ್ಲದೆ ಇದ್ದಿದ್ದರೆ ಆಂಜನೇಯ ದೇವಾಲಯವನ್ನು ಜಾಮಿಯ ಮಸೀದಿಯಾಗಿ ಪರಿವರ್ತನೆ ಮಾಡಿದ ಕಿರಾತಕ ಯಾರು? ಎಂದು ಪ್ರಶ್ನೆ ಮಾಡಿದರು.
ಉರಿಗೌಡ, ನಂಜೇಗೌಡ ಬಗ್ಗೆ ಸಾಕ್ಷ್ಯ ಹುಡುಕಿ ತೆಗೆದ ಬಿಜೆಪಿ: ಸಿನಿಮಾ ಮುಹೂರ್ತಕ್ಕೆ ಡೇಟ್ ಫಿಕ್ಸ್..!
ಅಜಾನ್ ಮಾನಸಿಕತೆಗೆ ಸರ್ಜಿಕಲ್ ಸ್ಟ್ರೈಕ್: ಶಿವಮೊಗ್ಗ ಡಿ.ಸಿ. ಕಚೇರಿ ಮೇಲೆ ಆಜಾನ್ ಕೂಗಿರುವುದು ಅವರ ಮಾನಸಿಕತೆ ವ್ಯಕ್ತಗೊಳ್ಳುತ್ತದೆ. ವಿಧಾನಸೌಧದ ಮೇಲೆ ಕೂಗುತ್ತೇವೆ ಎಂಬ ದಾಸ್ಯವನ್ನು ಬಿಡಬೇಕು. ಮಹಮ್ಮದ್ ಅಲಿ ಜಿನ್ನಾ, ಬಿನ್ ಲಾಡೆನ್ ಮಾನಸಿಕತೆಗಿಂತ ಇದು ಭಿನ್ನವಾಗಿಲ್ಲ. ಆ ಮಾನಸಿಕತೆಯನ್ನು ಹೇಗೆ ಸರ್ಜಿಕಲ್ ಸ್ಟ್ರೈಕ್ ಮಾಡಬೇಕು ಎಂಬುದು ನಮಗೆ ಗೊತ್ತಿದೆ ಎಂದು ಹೇಳಿದ್ದಾರೆ.