ಮಾಧ್ಯಮಿಕ, ಫೆಡರಲ್‌, ಅಪೆಕ್ಸ್‌ ಸಹಕಾರ ಸಂಘದಲ್ಲೂ ಮೀಸಲಾತಿ: ಸಚಿವ ಕೆ.ಎನ್‌.ರಾಜಣ್ಣ

By Kannadaprabha News  |  First Published Feb 16, 2024, 9:23 PM IST

ಪ್ರಾಥಮಿಕ ಸಹಕಾರ ಸಂಘಗಳಲ್ಲಿ ಇರುವಂತೆ ಮಾಧ್ಯಮಿಕ, ಫೆಡರಲ್‌, ಅಫೆಕ್ಸ್‌ ಸಹಕಾರ ಸಂಘಗಳು ಮತ್ತು ಸೌಹಾರ್ದ ಸಹಕಾರಿ ಸಂಘಗಳ ಆಡಳಿತ ಮಂಡಳಿಗಳಲ್ಲಿಯೂ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ, ಮಹಿಳೆಯರಿಗೆ ಮೀಸಲು ಕಲ್ಪಿಸುವ ಸಂಬಂಧದ ಎರಡು ಪ್ರತ್ಯೇಕ ವಿಧೇಯಕಗಳನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು. 


ವಿಧಾನಸಭೆ (ಫೆ.16): ಪ್ರಾಥಮಿಕ ಸಹಕಾರ ಸಂಘಗಳಲ್ಲಿ ಇರುವಂತೆ ಮಾಧ್ಯಮಿಕ, ಫೆಡರಲ್‌, ಅಫೆಕ್ಸ್‌ ಸಹಕಾರ ಸಂಘಗಳು ಮತ್ತು ಸೌಹಾರ್ದ ಸಹಕಾರಿ ಸಂಘಗಳ ಆಡಳಿತ ಮಂಡಳಿಗಳಲ್ಲಿಯೂ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ, ಮಹಿಳೆಯರಿಗೆ ಮೀಸಲು ಕಲ್ಪಿಸುವ ಸಂಬಂಧದ ಎರಡು ಪ್ರತ್ಯೇಕ ವಿಧೇಯಕಗಳನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು. ಈ ಕುರಿತ ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ 2024 ಮತ್ತು ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ 2024 ಅನ್ನು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಸದನದಲ್ಲಿ ಮಂಡಿಸಿದರು. 

ಪ್ರಾಥಮಿಕ ಸಹಕಾರ ಸಂಘಗಳು ಮತ್ತು ಪ್ರಾಥಮಿಕ ಸೌಹಾರ್ದ ಸಹಕಾರಿ ಸಂಘಗಳ ಆಡಳಿತ ಮಂಡಳಿಗಳಲ್ಲಿ ಇರುವ ಮೀಸಲಾತಿಗೆ ಅನುಗುಣವಾಗಿ ಇನ್ನುಳಿದ ಇನ್ನಿತರೆ ಸಹಕಾರ ಹಾಗೂ ಸಹಕಾರಿ ಸಂಘಗಳ ಮಂಡಳಿಗಳಿಗಳಲ್ಲಿ ಪ್ರಾತಿನಿಧ್ಯ ಹೊಂದಿರದ ವರ್ಗದ ಜನರಿಗೆ ಮೀಸಲಾತಿ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸುವುದು. ಕೃಷಿ ಪತ್ತಿನ ಸಹಕಾರ ಸಂಘದ ಮಂಡಳಿಗಳನ್ನು ಹೊರತುಪಡಿಸಿ ಪ್ರತಿಯೊಂದು ನೆರವು ಪಡೆದ ಸಹಕಾರ ಸಂಘದ ಮಂಡಳಿಗಳಲ್ಲಿ ಸರ್ಕಾರದ ನಾಮನಿರ್ದೇಶನ ಸ್ಥಾನಗಳನ್ನು ಮೂರಕ್ಕೆ ಹೆಚ್ಚಿಸಿ ಒಂದು ಸ್ಥಾನವನ್ನು ಎಸ್ಸಿ/ಎಸ್ಸಿಗೆ, ಮತ್ತೊಂದು ಮಹಿಳೆಯರಿಗೆ, ಮೂರನೆಯದು ಇತರೆ ಪ್ರವರ್ಗದವರಿಗಾಗಿ ಮೀಸಲಿಡುವ ಉದ್ದೇಶದಿಂದ ಈ ತಿದ್ದುಪಡಿ ವಿಧೇಯಕ ತರಲಾಗಿದೆ. 

Tap to resize

Latest Videos

ಅಲ್ಲದೆ, ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಎಲ್ಲ ಸಹಕಾರ ಸಂಘಗಳು ಮತ್ತು ಸೌಹಾರ್ದ ಸಹಕಾರಿ ಸಂಘಗಳ ಎಲ್ಲ ಸದಸ್ಯರಿಗೂ ಮತದಾನ ಅವಕಾಶ ನೀಡುವುದು, ಎರಡನೇ ಆಡಳಿತ ಸುಧಾರಣೆಗಳ ಆಯೋಗದ ವರದಿಯ ಶಿಫಾರಸ್ಸುಗಳಿಗೆ ಅನುಗುಣವಾಗಿ ಸಹಕಾರ ಚುನಾವಣಾ ಪ್ರಾಧಿಕಾರವನ್ನು ರದ್ದುಮಾಡಿ, ರಿಜಿಸ್ಟ್ರಾರ್‌ ನಿಯಂತ್ರಣದಡಿ ಸಹಕಾರ ಚುನಾವಣಾ ವಿಭಾಗವನ್ನು ಸೃಜಿಸುವ ಅಂಶವನ್ನು ತಿದ್ದುಪಡಿಯಲ್ಲಿ ಪ್ರಸ್ತಾಪಿಸಲಾಗಿದೆ.

ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಲೂಟಿ ಜಾತ್ರೆ: ಕಾಂಗ್ರೆಸ್ ವಿರುದ್ಧ ಎಚ್‌ಡಿಕೆ ವಾಗ್ದಾಳಿ

ಶಿವಲಿಂಗೇಗೌಡ ಸಚಿವರಾಗುತ್ತಾರೆ: ಸಚಿವ ಸ್ಥಾನದಿಂದ ವಂಚಿತರಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡರು ಒಬ್ಬರು. ಮುಂದೆ ಅವರು ನೂರಕ್ಕೆ ನೂರರಷ್ಟು ಸಚಿವರಾಗುತ್ತಾರೆ. ನಂತರ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೂಡ ಬರುತ್ತಾರೆ ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದರು. ಗೃಹಮಂಡಳಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಶಿವಲಿಂಗೇಗೌಡರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಶಿವಲಿಂಗೇಗೌಡರ ಹೆಸರು ಕೂಡ ಸಚಿವರಾಗುವವರ ಪಟ್ಟಿಯಲ್ಲಿ ಇತ್ತು. ಕೊನೇ ಗಳಿಗೆಯಲ್ಲಿ ತಪ್ಪಿಹೋಯಿತು ಎಂದು ಹೇಳಿದರು.

click me!