ರೈತರ ವಿಚಿತ್ರ ಸಮಸ್ಯೆ: ಉತ್ತರ ಕನ್ನಡದಲ್ಲಿ ಮಂಗಗಳ ‘ಟ್ರ್ಯಾನ್ಸ್‌ಫರ್‌’ದೇ ಸುದ್ದಿ!

Kannadaprabha News   | Kannada Prabha
Published : Jun 02, 2025, 09:55 AM IST
Uttara Kannada

ಸಾರಾಂಶ

ರೈತರಿಗೆ ಮಂಗಗಳ ಹಾವಳಿ ನಿಯಂತ್ರಣವೇ ದೊಡ್ಡ ಸವಾಲು. ಕೈಗೆ ಬಂದ ಬೆಳೆ ಮಂಗಗಳ ಪಾಲಾಗುತ್ತಿದೆ. ಏನೇ ಅನ್ನಿ ಎಷ್ಟು ಹಾವಳಿ ನಡೆಸಿದರೂ ಮಂಗಗಳನ್ನು ಕೊಲ್ಲುವಂತಿಲ್ಲ. ಹೀಗಿದ್ದಾಗ ಮಾಡೋದೇನು?

ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ವಿವಿಧೆಡೆ ಹಿಡಿದ ಮಂಗಗಳನ್ನು ಕುಮಟಾ ತಾಲೂಕಿನ ಗಡಿಯಾದ ದೇವಿಮನೆ ಘಟ್ಟಕ್ಕೆ ತಂದು ಬಿಡಲಾರಂಭಿಸಿದರು. ಇನ್ನು ಕುಮಟಾ ತಾಲೂಕಿನ ವಿವಿಧೆಡೆ ಹಿಡಿದ ಮಂಗಗಳನ್ನು ಹೊನ್ನಾವರದ ಮಲೆಮನೆ ಘಟ್ಟಕ್ಕೆ ತಂದು ಬಿಡತೊಡಗಿದರು. ಅದೇ ರೀತಿ ಜೋಯಿಡಾದ ಮಂಗಗಳು ಅಣಶಿಘಟ್ಟಕ್ಕೆ ಬಂದವು. ಘಟ್ಟದ ಕೆಳಭಾಗಗಳಲ್ಲಿ ಮಂಗಗಳ ಹಾವಳಿ ಹೆಚ್ಚಿದಾಗ ಅಲ್ಲಿನ ಜನ ಮಂಗಗಳನ್ನು ಸೆರೆಹಿಡಿದು ಬೇರೆಡೆ ಬಿಟ್ಟರು. ಅಲ್ಲಿಯವರು ಇಲ್ಲಿ ತಂದುಬಿಟ್ಟರು.

ರೈತರಿಗೆ ಮಂಗಗಳ ಹಾವಳಿ ನಿಯಂತ್ರಣವೇ ದೊಡ್ಡ ಸವಾಲು. ಕೈಗೆ ಬಂದ ಬೆಳೆ ಮಂಗಗಳ ಪಾಲಾಗುತ್ತಿದೆ. ಏನೇ ಅನ್ನಿ ಎಷ್ಟು ಹಾವಳಿ ನಡೆಸಿದರೂ ಮಂಗಗಳನ್ನು ಕೊಲ್ಲುವಂತಿಲ್ಲ. ಹೀಗಿದ್ದಾಗ ಮಾಡೋದೇನು? ಇಂಥ ಪರಿಸ್ಥಿತಿಯಲ್ಲಿ ರೈತರು ಕಂಡುಕೊಂಡಿದ್ದು ಮಂಗಗಳನ್ನು ಸೆರೆ ಹಿಡಿದು ಬೇರೆಡೆ ಬಿಟ್ಟು ಬರುವ ತಂತ್ರ. ಆದರೆ ಎಷ್ಟೇ ಮಂಗಗಳನ್ನು ಹಿಡಿದು ಬೇರೆಡೆ ಬಿಟ್ಟು ಬಂದರೂ ಮಂಗಗಳ ಸಂಖ್ಯೆ ಕಡಿಮೆ ಆಗುವುದೇ ಇಲ್ಲ. ಸ್ವಾರಸ್ಯ ಇರುವುದೇ ಇಲ್ಲಿ! ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ವಿವಿಧೆಡೆ ಹಿಡಿದ ಮಂಗಗಳನ್ನು ಕುಮಟಾ ತಾಲೂಕಿನ ಗಡಿಯಾದ ದೇವಿಮನೆ ಘಟ್ಟಕ್ಕೆ ತಂದು ಬಿಡಲಾರಂಭಿಸಿದರು.

ಇನ್ನು ಕುಮಟಾ ತಾಲೂಕಿನ ವಿವಿಧೆಡೆ ಹಿಡಿದ ಮಂಗಗಳನ್ನು ಹೊನ್ನಾವರದ ಮಲೆಮನೆ ಘಟ್ಟಕ್ಕೆ ತಂದು ಬಿಡತೊಡಗಿದರು. ಅದೇ ರೀತಿ ಜೋಯಿಡಾದ ಮಂಗಗಳು ಅಣಶಿ ಘಟ್ಟಕ್ಕೆ ಬಂದವು. ಘಟ್ಟದ ಕೆಳಭಾಗಗಳಲ್ಲಿ ಮಂಗಗಳ ಹಾವಳಿ ಹೆಚ್ಚಿದಾಗ ಅಲ್ಲಿನ ಜನತೆ ಮಂಗಗಳನ್ನು ಸೆರೆಹಿಡಿದು ಬೇರೆಡೆ ಬಿಟ್ಟರು. ಅಲ್ಲಿಯವರು ಇಲ್ಲಿ ತಂದುಬಿಟ್ಟರು. ಆದರೆ ಎಲ್ಲೂ ಮಂಗಗಳ ಹಾವಳಿ ನಿಲ್ಲಲೇ ಇಲ್ಲ. ಇಲ್ಲಿಯ ಮಂಗಗಳು ಬೇರೆಡೆ ದಾಳಿ ಇಟ್ಟರೆ, ಬೇರೆಡೆಯಿಂದ ಬಂದ ಮಂಗಗಳು ಇಲ್ಲಿ ದಾಳಿ ಇಡಲಾರಂಭಿಸಿದವು. ರೈತರಿಗೆ ಅಲೆದಾಟ ಹೆಚ್ಚಾಯಿತೇ ಹೊರತು ಮಂಗಗಳ ಹಾವಳಿ ನಿಲ್ಲದಂತಾಯಿತು. ಈಗ ರೈತರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಹೇಗಾದರೂ ಮಂಗಗಳ ಹಾವಳಿ ನಿಂತರೆ ಸಾಕೆಂದು ಆಂಜನೇಯನಿಗೆ ಹರಕೆ ಹೊರುತ್ತಿದ್ದಾರೆ.

ಎಸ್ಸೆಸ್ಸೆಲ್ಸೀಲಿ 5 ಲಕ್ಷ ಮಕ್ಕಳಿಗೆ 625 ಅಂಕ ಬರಬೇಕಂತೆ!
ಈಗ ತಾನೇ ಶಾಲೆ ಆರಂಭವಾಗಿದೆ, ಮೇಷ್ಟ್ರುಗಳು ಇನ್ನೂ ಪಾಠ ಶುರು ಮಾಡಿಲ್ಲ, ಮಕ್ಕಳೂ ರಜೆಯ ಮೂಡ್‌ನಲ್ಲಿದ್ದಾರೆ. ಹೀಗಿರುವಾಗ ಧುತ್ತೆಂದು ದೊಡ್ಡ ಟಾಸ್ಕ್‌ ಅನ್ನು ಮುಖ್ಯಮಂತ್ರಿಗಳು ನೀಡಿರುವುದು ಮೇಷ್ಟ್ರುಗಳನ್ನು ಚಿಂತೆಗೀಡಾಗುವಂತೆ ಮಾಡಿದೆ. ಆಗಿದ್ದಿಷ್ಟು... ಮೊನ್ನೆ ನಗರದ ಬಿಟಿಎಂ ಲೇಔಟ್‌ನ ಶಾಲೆಯೊಂದರಲ್ಲಿ ನಡೆದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬ್ರು, ‘ನೋಡಿ ಮುಂದಿನ ವರ್ಷ ನಾಲ್ಕರಿಂದ ಐದು ಲಕ್ಷ ಮಕ್ಕಳು 625ಕ್ಕೆ 625 ಅಂಕ ಪಡೆಯುವಂತೆ ನೋಡಿಕೊಳ್ಳಿ’ ಅಂತ ತಾಕೀತು ಮಾಡಿಬಿಟ್ಟಿದ್ದಾರೆ.

ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಏಳೆಂಟು ಲಕ್ಷ ಮಕ್ಕಳಲ್ಲಿ ಐದಾರು ಲಕ್ಷಮಕ್ಕಳು ಪಾಸಾಗುವಂತೆ ಮಾಡೋಕೆ ಶಿಕ್ಷಣ ಇಲಾಖೆ ಹೆಣಗಾಡುತ್ತಿದೆ. ಹೀಗಿರುವಾಗ ಮುಖ್ಯಮಂತ್ರಿಗಳ ಈ ಕಟ್ಟಾಜ್ಞೆ ಹೇಗೆ ಜಾರಿ ಮಾಡಬೇಕೆಂದು ತಲೆಕೆಡಿಸಿಕೊಳ್ಲುವಂಥ ಸ್ಥಿತಿ ಬಂದಿದೆ. ಗ್ರೇಸ್‌ ಅಂಕ ಕೊಡುವುದರಿಂದ ಮಕ್ಕಳ ಸಾಮರ್ಥ್ಯ ಗೊತ್ತಾಗಲ್ಲ ಅಂತ ತೆಗೆದುಹಾಕಿದ್ದೇವೆ. ಇದರಿಂದ ಎಸ್ಸೆಸ್ಸೆಲ್ಸಿ ಫಲಿತಾಂಶ ಈ ಬಾರಿ ಶೇ.63ಕ್ಕೆ ಕುಸಿದಿದೆ. ಮುಂದಿನ ವರ್ಷ ಫಲಿತಾಂಶ ಶೇ.75ರಷ್ಟು ಬರುವಂತೆ ನೋಡಿಕೊಳ್ಳಿ ಎಂದು ವೇದಿಕೆಯಲ್ಲಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಇಲಾಖೆ ಇತರೆ ಅಧಿಕಾರಿಗಳು, ಶಿಕ್ಷಕರಿಗೆ ಸಿಎಂ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲ, ಈ ಬಾರಿ ಬರೀ 40 ಮಕ್ಕಳು ಮಾತ್ರ 625ಕ್ಕೆ 625 ಅಂಕ ಪಡೆದಿದ್ದಾರೆ. ಏನಿದು 14 ಲಕ್ಷ ಮಕ್ಕಳಿಗೆ 40 ಮಕ್ಕಳು ಅಷ್ಟೇನಾ? ಮುಂದಿನ ವರ್ಷದ ಪರೀಕ್ಷೆಯಲ್ಲಿ 4ರಿಂದ 5 ಲಕ್ಷ ಮಕ್ಕಳು ತಲಾ 625 ಅಂಕ ಬರುವಂತೆ ಮಾಡಬೇಕು ಎಂದಿದ್ದಾರೆ.

ಒಂದು ಕ್ಷಣ ವೇದಿಕೆಯಲ್ಲಿದ್ದ ಶಿಕ್ಷಣ ಸಚಿವರಾದಿಯಾಗಿ ಎಲ್ಲರೂ ಅಚ್ಚರಿಯಿಂದ ಮುಖ್ಯಮಂತ್ರಿ ಅವರನ್ನು ನೋಡತೊಡಗಿದರು. ಅಷ್ಟರಲ್ಲಿ ಯಾರೋ ಸರ್‌... ಎಸ್ಸೆಸ್ಸೆಲ್ಸಿ ಬರೆಯೋ ಮಕ್ಕಳ ಸಂಖ್ಯೆ 8 ಲಕ್ಷ ಅಂದ್ರು. ಬಳಿಕ ಸಾವರಿಸಿಕೊಂಡ ಮುಖ್ಯಮಂತ್ರಿಗಳು ಹೋ ಪ್ರತೀ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯೋದು 8 ಲಕ್ಷ ಮಕ್ಕಳಲ್ವಾ? ಹಾಗಾದ್ರೆ ಕನಿಷ್ಠ 1 ಲಕ್ಷ ಮಕ್ಕಳಾದ್ರೂ 625ಕ್ಕೆ 625 ಅಂಕ ಪಡೆಯುಂತೆ ಮಾಡಬೇಕು ಅಂದ್ರು. ಇದು ಅಧಿಕಾರಿಗಳು, ಶಿಕ್ಷಕರನ್ನು ಇನ್ನೂ ಕಕ್ಕಾಬಿಕ್ಕಿಯಾಗುವಂತೆ ಮಾಡಿತು. ಮಾಹಿತಿ ಪ್ರಕಾರ, ಇತಿಹಾಸದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಒಂದು ವರ್ಷದಲ್ಲಿ 625 ಅಂಕ ಪಡೆದ ಮಕ್ಕಳ ಗರಿಷ್ಠ ಸಂಖ್ಯೆ 165 ದಾಟಿಲ್ಲ. ಹೀಗಿರುವಾಗ ಲಕ್ಷ ಮಕ್ಕಳು ಶೇ.100ರಷ್ಟು ಫಲಿತಾಂಶ ಪಡೆಯುವಂತೆ ಮಾಡುವುದು ಹೇಗೆ? ಎನ್ನುವ ಶಿಕ್ಷಕರ ಪ್ರಶ್ನೆಗೆ ಉತ್ತರ ಕೊಡುವವರು ಯಾರು ಎಂಬುದು ಮಾತ್ರ ಗೊತ್ತಾಗಲಿಲ್ಲ.

ವಸಂತಕುಮಾರ್ ಕತಗಾಲ
ಲಿಂಗರಾಜು ಕೋರಾ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ