
ನವದೆಹಲಿ (ಸೆ. 18): ಏಪ್ರಿಲ್‌ನಲ್ಲಿ ಶಾಸಕರ ಜೊತೆಗಿನ ರೊಟ್ಟಿಊಟದ ನಂತರ ಏಕಾಏಕಿ ಯತ್ನಾಳ್ ಸಾಹೇಬರು ಮೌನವಾಗಿದ್ದಾರೆ. ಬಿಜೆಪಿ ಪಾಲಿಟಿಕ್ಸ್ ಬಗ್ಗೆ ಏನೇ ಕೇಳಿದರೂ ಯತ್ನಾಳ್ ಗೌಡರು, ‘ಬೇಡ ಬಿಡ್ರಿ.. ನಾನೇನೂ ಮಾತಾಡಂಗಿಲ್ಲ. ನಾವ್ ಮಾತಾಡೋದು ಕೆಟ್ಟಆಗೋದು ಯಾಕ್ರೀ..’ ಎನ್ನುತ್ತಾರೆ.
ಸಂಪುಟ ವಿಸ್ತರಣೆಗೆ ಬಿಎಸ್‌ವೈ ದೆಹಲಿಗೆ ದೌಡು; ಆದರೆ ಬಿಹಾರ್ ಎಲೆಕ್ಷನ್ ಅಡ್ಡಿ..!
ಯತ್ನಾಳ್ ಗೌಡರಿಗೆ ದಿಲ್ಲಿ ನಾಯಕರೊಬ್ಬರು, ‘ಜಾಸ್ತಿ ಹೇಳಿಕೆ ಕೊಡಬೇಡಿ’ ಎಂದು ಹೇಳಿರುವುದರಿಂದ ಗೌಡರು ಸುಮ್ಮನಾಗಿದ್ದಾರೆ. ಸ್ಥಳೀಯ ಸಂಘದ ಜೊತೆ ಯತ್ನಾಳ್ ಸಂಬಂಧ ಚೆನ್ನಾಗಿಲ್ಲ. ಆದರೆ ಎಬಿವಿಪಿ ಕಾರಣದಿಂದ ದತ್ತಾತ್ರೇಯ ಹೊಸಬಾಳೆ ಜೊತೆ ಅವರಿಗೆ ಆತ್ಮೀಯತೆ ಇದೆ. ಅಂದಹಾಗೆ ದಿಲ್ಲಿ ಬಿಜೆಪಿ ನಾಯಕರ ಪ್ರಕಾರ, ಯಡಿಯೂರಪ್ಪ ಬಿಟ್ಟರೆ ಬಸನಗೌಡರು ಲಿಂಗಾಯತರಲ್ಲಿ ಅತ್ಯಂತ ಜನಪ್ರಿಯರು. ಜೊತೆಗೆ ಪಂಚಮಸಾಲಿ. ಆದರೆ ವಾಚಾಳಿತನದಿಂದಾಗಿ ಶತ್ರುಗಳು ಬಹಳ, ಮಿತ್ರರು ವಿರಳ.
-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
'ಇಂಡಿಯಾ ಗೇಟ್' ದೆಹಲಿಯಿಂದ ಕಂಡ ರಾಜಕಾರಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.