ಅನುಭವಿ, ಹಿರಿಯ ನಾಯಕ ಕಾಂಗ್ರೆಸ್‌ಗೆ ಬಂದ್ರೆ ಒಳ್ಳೆಯದು: ಜೆಡಿಎಸ್ MLAಗೆ ರಮೇಶ್ ಕುಮಾರ್ ಆಹ್ವಾನ

By Suvarna News  |  First Published Oct 2, 2021, 8:26 PM IST

* ಜೆಡಿಎಸ್‌ ಶಾಸಕಗೆ ಕಾಂಗ್ರೆಸ್‌ ಬರುವಂತೆ ಆಹ್ವಾನ ಕೊಟ್ಟ ರಮೇಶ್ ಕುಮಾರ್
* ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಬಹಿರಂಗ ಆಹ್ವಾನ
* ಅನುಭವಿ, ಹಿರಿಯ ನಾಯಕ ಕಾಂಗ್ರೆಸ್‌ಗೆ ಬಂದ್ರೆ ಒಳ್ಳೆಯದು ಎಂದ ಮಾಜಿ ಸ್ಪೀಕರ್


ಕೋಲಾರ, (ಅ.02): ಕ್ಷೇತ್ರದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಶೀಘ್ರವೇ ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಈ ಕುರಿತು ರಾಜ್ಯ ಕಾಂಗ್ರೆಸ್​ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ.

ಇದರ ಮಧ್ಯೆ ಮಾಜಿ ಸ್ಪೀಕರ್​​ ಶಾಸಕ ರಮೇಶ್​​ ಕುಮಾರ್ ಅವರು, ಕಾಂಗ್ರೆಸ್‌ಗೆ ಬಂದ್ರೆ ಒಳ್ಳೆಯದು ಎಂದು ಶ್ರೀನಿವಾಸಗೌಡಗೆ ಬಹಿರಂಗವಾಗಿಯೇ ಆಹ್ವಾನ ಕೊಟ್ಟಿದ್ದಾರೆ.

Tap to resize

Latest Videos

undefined

ಕುಮಾರಸ್ವಾಮಿ, ದೇವೇಗೌಡ್ರ ವಿರುದ್ಧ ಮತ್ತೆ ತಿರುಗಿಬಿದ್ದ ಜೆಡಿಎಸ್ ಶಾಸಕ

ಇಂದು (ಅ.02)ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್​​ ಕುಮಾರ್, ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಕಾಂಗ್ರೆಸ್​ ಸೇರ್ಪಡೆಗೆ ಸ್ವಾಗತವಿದೆ. ಕಾಂಗ್ರೆಸ್ ಒಂದು ದೊಡ್ಡ ಸಂಸ್ಥೆ, ಅದನ್ನ ಸೇರಬೇಕು ಎಂದು ತೀರ್ಮಾನ‌ ಮಾಡಿದ್ರೆ ಸೇರುತ್ತಾರೆ ಎಂದರು.

ಶ್ರೀನಿವಾಸಗೌಡರಿಗೆ ಅವರದ್ದೇ ಆದ ಶಕ್ತಿ ಸಾಮರ್ಥ್ಯ ಇದೆ. ಅವರದ್ದೇ ಆದ ವರ್ಚಸ್ಸು ಇದೆ.   ಅವರು ಗ್ರಾಮ‌ ಪಂಚಾಯತಿಯಿಂದ ಜನರ‌ ಮಧ್ಯ ಇದ್ದು ಶಾಸಕರಾಗಿ ಆಯ್ಕೆಯಾಗಿ ಬಂದವರು. ಅವರೇನು ಆಕಾಶದಿಂದ ಉದುರಿ‌ಬಂದವರಲ್ಲ, ಗಾಳಿಯಲ್ಲಿ ತೇಲಿ ಬಂದವರಲ್ಲ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹಕಾರ ಕ್ಷೇತ್ರದಲ್ಲಿ, ಸಚಿವರಾಗಿ ಕೆಲಸ‌ ಮಾಡಿದ್ದಾರೆ. ಇಷ್ಟು ಹಿರಿಯ ನಾಯಕ, ಅನುಭವ ಇರುವವರು ಪಕ್ಷಕ್ಕೆ ಬಂದರೆ ಶಕ್ತಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಏನ್ ನಮ್ಮಪ್ಪಂದಾ, ಅವರು ಸೆಕ್ಯೂಲರ್ ಆಗಿ ಕೆಲಸ ಮಾಡಬೇಕು ಎಂದುಕೊಂಡಿದ್ದಾರೆ. ಕಾಂಗ್ರೆಸ್ ಒಂದು ದೊಡ್ಡ ಸಂಸ್ಥೆ, ಅದನ್ನ ಸೇರಬೇಕು ಎಂದು ತೀರ್ಮಾನ ಮಾಡಿದ್ರೆ ಸೇರ್ತಾರೆ ಎಂದು ಸ್ಪಷ್ಟಪಡಿಸಿದರು.
 

click me!