ರಾಜ್ಯ ರಾಜಕೀಯದ ಬಗ್ಗೆ ಹೊಸ ಸುಳಿವು ನೀಡಿದ ಸಚಿವ ರಮೇಶ್‌ ಜಾರಕಿಹೊಳಿ

By Kannadaprabha NewsFirst Published Jan 26, 2021, 9:23 AM IST
Highlights

ರಾಜ್ಯ ರಾಜಕೀಯದ ಬಗ್ಗೆ ಸಚಿವ ರಮೇಶ್ ಜಾರಕಿಹೊಳಿ ಹೊಸ ಸುಳಿವು ನೀಡಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಈಗಾಗಲೇ ಸಂಪುಟ ವಿಸ್ತರಣೆಯಾಗಿದ್ದು ಇದರ ಬೆನ್ನಲ್ಲೇ  ಸುಳಿವು ನೀಡಿದ್ದಾರೆ. 

ಅಥಣಿ (ಜ.26): ಶಾಸಕ ಮಹೇಶ್‌ ಕುಮಟಳ್ಳಿ ಅವರು ಬರುವ ಮಾಚ್‌ರ್‍ ಇಲ್ಲವೆ ಏಪ್ರಿಲ್‌ ಒಳಗೆ ಸಚಿವರಾಗುತ್ತಾರೆ ಎಂದು ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ. ಈ ಮೂಲಕ ಸಂಪುಟ ಪುನಾರಚನೆಯ ಸುಳಿವು ನೀಡಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರುವ ಮಾಚ್‌ರ್‍-ಏಪ್ರಿಲ್‌ ಒಳಗೆ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ಸಿಗುವ ಭರವಸೆ ಇದೆ. ಇತ್ತೀಚೆಗೆ ಕೆಲವು ಮಾಧ್ಯಮಗಳು ಮಂಗಳೂರಿನಲ್ಲಿ ತಾವು ಗುಪ್ತ ಸಭೆ ಮಾಡಿದ್ದೇವೆ ಎಂಬ ಸುದ್ದಿ ಮಾಡಿದ್ದವು. ಅದು ಸತ್ಯಕ್ಕೆ ದೂರವಾದದ್ದು. ಮಂಗಳೂರಲ್ಲಿ ನನ್ನ ಪೂರ್ವ ನಿಯೋಜಿತ ಕಾರ್ಯಕ್ರಮ ಇತ್ತು. ಕೆಲವು ನೀರಾವರಿ ಯೋಜನೆಗಳ ಕುರಿತು ಸಭೆ ಇತ್ತು. ಆ ಸಮಯದಲ್ಲಿ ನಾವು ಯಾವುದೇ ಗುಪ್ತ ಸಭೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ರೆಸಾರ್ಟ್‌ ಸೀಕ್ರೆಟ್ ಮೀಟಿಂಗ್ ಬಗ್ಗೆ ಕಾರಣ ಬಿಚ್ಚಿಟ್ಟ ಸಚಿವ ರಮೇಶ್ ಜಾರಕಿಹೊಳಿ ...

17 ಜನ ಬಿಜೆಪಿಗೆ ಸೇರಿದವರಲ್ಲಿ ಯಾರಲ್ಲೂ ಭಿನ್ನಾಭಿಪ್ರಾಯ ಇಲ್ಲ. ಬಿಜೆಪಿಯಲ್ಲಿ ಭಿನ್ನಮತ ಎಂಬುದೇ ಇಲ್ಲ. ಪಕ್ಷದ ಹೈಕಮಾಂಡ್‌ ಕೈಗೊಳ್ಳುವ ಎಲ್ಲ ನಿರ್ಣಯಗಳಿಗೆ ನಾವೆಲ್ಲರೂ ಬದ್ಧರಿದ್ದೇವೆ. ಖಾತೆ ಹಂಚಿಕೆಯಲ್ಲಿ ಸಮಸ್ಯೆಯನ್ನು ನಮ್ಮ ನಾಯಕರಾದ ಸಿಎಂ ಬಿ.ಎಸ್‌.ಯಡಿಯೂರಪ್ಪನವರು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದರು.

click me!