ರಮೇಶ ಜಾರಕಿಹೊಳಿ ಮತ್ತೆ ಮಂತ್ರಿಯಾಗ್ತಾರೆ: ನಳಿನ್‌ ಕುಮಾರ ಕಟೀಲ್‌

By Kannadaprabha News  |  First Published Sep 30, 2022, 7:10 PM IST

ಹಾಲಿ ಶಾಸಕರನ್ನು ಬದಲಿಸುವ ಪ್ರಶ್ನೆಯೇ ಇಲ್ಲ. ಆಕಾಂಕ್ಷಿಗಳು ಹೆಚ್ಚಾಗಿದ್ದರೆ ಅದು ಪಕ್ಷದ ಶಕ್ತಿ. ಹಾಲಿ ಶಾಸಕರನ್ನು ಬದಲಾಯಿಸುವ ಬಗ್ಗೆ ಯಾವುದೇ ಸೂಚನೆ, ಚರ್ಚೆ ನಮ್ಮ ಮುಂದಿಲ್ಲ ಎಂದು ಹೇಳಿದ ಕಟೀಲ್‌ 


ಬೆಳಗಾವಿ(ಸೆ.30):  ಖಂಡಿತವಾಗಿಯೂ ರಮೇಶ ಮಂತ್ರಿ ಆಗುತ್ತಾರೆ. ಯಾವಾಗ ಆಗುತ್ತಾರೋ ಎನ್ನುವುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟ ವಿಚಾರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ ಕಟೀಲ್‌ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಮಂತ್ರಿ ಆಗುತ್ತಾರೆಯೇ? ಎಂಬ ಪತ್ರಕರ್ತರ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು. ಹಾಲಿ ಬಿಜೆಪಿ ಶಾಸಕರ ಮತಕ್ಷೇತ್ರದಲ್ಲಿ ಆಕಾಂಕ್ಷಿಗಳು ಹೆಚ್ಚಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಾಲಿ ಶಾಸಕರನ್ನು ಬದಲಿಸುವ ಪ್ರಶ್ನೆಯೇ ಇಲ್ಲ. ಆಕಾಂಕ್ಷಿಗಳು ಹೆಚ್ಚಾಗಿದ್ದರೆ ಅದು ಪಕ್ಷದ ಶಕ್ತಿ. ಹಾಲಿ ಶಾಸಕರನ್ನು ಬದಲಾಯಿಸುವ ಬಗ್ಗೆ ಯಾವುದೇ ಸೂಚನೆ, ಚರ್ಚೆ ನಮ್ಮ ಮುಂದಿಲ್ಲ ಎಂದು ಹೇಳಿದರು.

ಅಲ್ಲದೆ, ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಅವಧಿ ಪೂರ್ಣ ಚುನಾವಣೆ ಬರುವುದಿಲ್ಲ. ನಮ್ಮ ಸರ್ಕಾರ ಪೂರ್ಣ ಅವಧಿ ಪೂರೈಸುತ್ತದೆ. ವಿಧಾನಸಭೆ ಚನಾವಣೆ ಬಗ್ಗೆ ನಮಗೆ ಯಾವುದೇ ಧಾವಂತ ಇಲ್ಲ. ಸಿಎಂ ಆಗುವ ಧಾವಂತದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಇದ್ದಾರೆ. ನಮ್ಮ ಪಕ್ಷದಲ್ಲಿ ಅಂತಹ ಧಾವಂತಗಳು ಇಲ್ಲ ಎಂದರು.

Tap to resize

Latest Videos

ಎಂಟು ವರ್ಷ ಅಧ್ಯಯನ ಮಾಡಿ ಪಿಎಫ್‌ಐ ಬ್ಯಾನ್‌: ನಳಿನ್‌ ಕುಮಾರ್‌ ಕಟೀಲ್‌

ಬಾಲಚಂದ್ರ ಬದಲು ಸತೀಶ ಹೆಸರು:

ನಾವು ಎಲ್ಲರನ್ನೂ ಇಟ್ಟುಕೊಂಡು ಚುನಾವಣೆಗೆ ಹೋಗುತ್ತೇವೆ. ಸ್ಪಷ್ಟವಾಗಿ ಚುನಾವಣೆ ಎದುರಿಸಿ ಗೆಲ್ಲುತ್ತೇವೆ. ಇದು ನಮ್ಮ, ಸತೀಶ ಜಾರಕಿಹೊಳಿ ಗುರಿ ಎಂದ ಕಟೀಲ್‌ ಅವರು ಮಾತನಾಡುವ ಭರದಲ್ಲಿ ಬಾಲಚಂದ್ರ ಜಾರಕಿಹೊಳಿ ಬದಲಾಗಿ ಸತೀಶ ಜಾರಕಿಹೊಳಿ ಎಂದರು. ತಕ್ಷಣವೇ ತಮ್ಮ ಹೇಳಿಕೆ ಸರಿಮಾಡಿಕೊಂಡ ಅವರು, ಸತೀಶ ಜಾರಕಿಹೊಳಿ ಬೈಯ್ದು, ಬೈಯ್ದು ಅವರ ಹೆಸರು ಬಂತು. ನಮ್ಮದು, ಬಾಲಚಂದ್ರ ಜಾರಕಿಹೊಳಿ, ರಮೇಶಜಾರಕಿಹೊಳಿ ಗುರಿ ಒಂದೇ ಇದೆ. ಮುಂದಿನ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ 18 ಸ್ಥಾನಗಳಲ್ಲಿ ಗೆಲ್ಲುತ್ತೇವೆ. ರಾಜ್ಯದಲ್ಲಿ 150 ಸ್ಥಾನದಲ್ಲಿ ಬಿಜೆಪಿ ಗೆಲ್ಲುವ ಗುರಿಯಿದೆ ಎಂದರು.

ಮೊದಲು ಕಾಂಗ್ರೆಸ್‌ ನಿಷೇಧಿಸಬೇಕು:

ದೇಶದಲ್ಲಿ ಮೊದಲು ಕಾಂಗ್ರೆಸ್‌ ಪಕ್ಷವನ್ನು ನಿಷೇಧಿಸಬೇಕಿದೆ. ದೇಶದಲ್ಲಿ ಪಿಎಫ್‌ಎ, ಎಸ್‌ಡಿಪಿಎನಂತಹ ಸಂಘಟನೆಗಳಿಗೆ ಶಕ್ತಿ ಕೊಟ್ಟಿದ್ದೇ ಕಾಂಗ್ರೆಸ್‌. ಆಂತರಿಕ ಭಯೋತ್ಪಾದನೆಯಂತಹ ಚಟುವಟಿಕೆ ನಡೆಸಲು ಆ ಸಂಘಟನೆಗಳಿಗೆ ಶಕ್ತಿ ಕೊಟ್ಟಿದ್ದೇ ಕಾಂಗ್ರೆಸ್‌ ಎಂದು ನಳಿನಕುಮಾರ ಕಟೀಲ್‌ ಆರೋಪಿಸಿದರು.

ಕಾಂಗ್ರೆಸ್‌ ಸ್ವಾತಂತ್ರ್ಯಾನಂತರ ದೇಶದಲ್ಲಿ ಆಡಳಿತ ಮಾಡಿದರೆ ಈ ದೇಶ ಹಾಳು ಮಾಡುತ್ತದೆ ಎಂಬುದು ಮಹಾತ್ಮ ಗಾಂಧಿಯವರಿಗೆ ಗೊತ್ತಿತ್ತು. ಸ್ವಾತಂತ್ರ್ಯ ನಂತರ ಕಾಂಗ್ರೆಸ್‌ ವಿಸರ್ಜನೆ ಮಾಡಲಿ ಎಂದು ಹೇಳಿದ್ದರೂ ಮಾಡಲಿಲ್ಲ. ಸಿದ್ದರಾಮಣ್ಣ ಒಮ್ಮೆ ಅಧ್ಯಯನ ಮಾಡಲಿ. ಅವರ ಕಾಲಘಟ್ಟದಲ್ಲಿ ಎಷ್ಟುಪಿಎಫ್‌ಐ ಕಾರ್ಯಕರ್ತರನ್ನ ರಕ್ಷಣೆ ಮಾಡಿದ್ದಾರೆ? ಹಂತಕರನ್ನು ರಕ್ಷಣೆ ಮಾಡಿದ್ದಾರೆ. ಗೋಹಂತಕರನ್ನು ರಕ್ಷಣೆ ಮಾಡಿರುವ ಬಗ್ಗೆ ಅಧ್ಯಯನ ಮಾಡಲಿ. ಆಗ ಅವರೇ ಕಾಂಗ್ರೆಸ್‌ನ್ನು ನಿಷೇಧಿಸುವಂತೆ ಹೇಳುತ್ತಾರೆ ಎಂದು ತಿರುಗೇಟು ನೀಡಿದರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ ಮತ್ತು ಸಿದ್ದರಾಮಯ್ಯ ಅವರನ್ನು ರಾಜಕೀಯ ಸನ್ಯಾಸತ್ವ ಕೊಡಿಸುವ ಸವಾಲನ್ನು ರಮೇಶ ಜಾರಕಿಹೊಳಿ ತೆಗೆದುಕೊಂಡಿದ್ದಾರೆ. ನಾವು ತೆಗೆದುಕೊಂಡಿದ್ದೇವೆ ಎಂದರು.

ಕದ್ದಿಲ್ಲವೆಂದರೆ ಭಯಪಡುವ ಅಗತ್ಯ ಇಲ್ಲ:

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಮೇಲೆ ಸಿಬಿಐ ದಾಳಿ ವಿಚಾರ ಸಂಬಂಧ ಪ್ರತಿಕ್ರಿಯಿಸಿ ನಳಿನ್‌ಕುಮಾರ ಕಟೀಲ್‌, ಸಿಬಿಐ, ಐಟಿ ಎಲ್ಲರ ತನಿಖೆಯನ್ನು ಮಾಡಲಿದೆ. ಇವರು ಸರಿಯಾಗಿದ್ದರೆ ಭಯಪಡುವ ಅವಶ್ಯಕತೆ ಇಲ್ಲ. ಅದಕ್ಕೆ ಉತ್ತರ ಕೊಡಬೇಕು. ಇವರು ಕದ್ದಿದ್ದರೆ ಭಯಪಡಬೇಕು, ಕದ್ದಿಲ್ಲ ಅಂದ್ರೆ ಭಯಪಡುವ ಅವಶ್ಯಕತೆ ಇಲ್ಲ. ಧೈರ್ಯವಾಗಿ ಹೋಗಿ ಉತ್ತರ ಕೊಡಬೇಕು ಎಂದರು.

‘‘ಸಾಮೂಹಿಕ ನಾಯಕತ್ವದಡಿ ಚುನಾವಣೆಗೆ ಹೋಗ್ತೀವಿ; ಇದು ನಮ್ಮ, ಸತೀಶ್ ಜಾರಕಿಹೊಳಿ ಗುರಿ’’: Nalin Kumar

ಕಾಂಗ್ರೆಸ್ಸಿಗರ ಕಾಲಘಟ್ಟದಲ್ಲಿ ಎಲ್ಲರ ಮೇಲೂ ತನಿಖೆ ಆಗಿದೆ. ಹಾಗಂತ ಎಲ್ಲರೂ ಹೆದರಿದರೆ? ನರೇಂದ್ರ ಮೋದಿ ಅವರನ್ನು 9 ಗಂಟೆಗಳ ಕಾಲ ತನಿಖೆ ಮಾಡಿದ್ದರೆ, ಅಮಿತ ಶಾ ಅವರನ್ನು ಜೈಲಿಗೆ ಹಾಕಿದ್ದರು. ನಾವು ಸ್ಟೆ್ರೖಕ್‌ ಮಾಡಲಿಲ್ಲ. ಬೀದಿ ಹೋರಾಟ ಮಾಡಲಿಲ್ಲ. ಆದರೆ, ಇವರ ಸಮಸ್ಯೆ ನೋಡಿ ಜೈಲಿಗೆ ಹೋಗುತ್ತಾರೆ ಎಂದರೆ ಕಾನೂನು ಪ್ರಕಾರ ಇವರು ಮೆರವಣಿಗೆ ತೆಗೆಯುತ್ತಾರೆ. ಇದೊಂದು ಹೊಸ ಪ್ರಯೋಗ ಜೈಲಿಗೆ ಹೋಗುವಾಗ, ಬರುವಾಗ ಮೆರವಣಿಗೆ ಮಾಡುತ್ತಾರೆ. ಐಟಿ ದಾಳಿ ನಡೆದರೆ ಜನ ಸೇರಿ ಗೋಳೋ ಎಂದು ಬೊಬ್ಬೆ ಹಾಕುತ್ತಾರೆ. ಇವರಿಗೆ ಕಾನೂನಿಗೆ ಕೊಡುವವರಾ ಎಂದು ನಳಿನ್‌ಕುಮಾರ ಕಟೀಲ್‌ ಪ್ರಶ್ನಿಸಿದರು.

ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಅವಧಿ ಪೂರ್ಣ ಚುನಾವಣೆ ಬರುವುದಿಲ್ಲ. ನಮ್ಮ ಸರ್ಕಾರ ಪೂರ್ಣ ಅವಧಿ ಪೂರೈಸುತ್ತದೆ. ವಿಧಾನಸಭೆ ಚನಾವಣೆ ಬಗ್ಗೆ ನಮಗೆ ಯಾವುದೇ ಧಾವಂತ ಇಲ್ಲ. ಸಿಎಂ ಆಗುವ ಧಾವಂತದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಇದ್ದಾರೆ. ನಮ್ಮ ಪಕ್ಷದಲ್ಲಿ ಅಂತಹ ಧಾವಂತಗಳು ಇಲ್ಲ ಅಂತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ ಕಟೀಲ್‌ ತಿಳಿಸಿದ್ದಾರೆ. 
 

click me!