ರಾಯಚೂರಿನ ನಾಲ್ಕು ಜನ ಶಾಸಕರಲ್ಲಿ ಯಾರಿಗೆ ಸಿಗುತ್ತೆ ನಿಗಮ ಮಂಡಳಿ ಭಾಗ್ಯ!

By Suvarna News  |  First Published Jan 24, 2024, 7:32 PM IST

ರಾಯಚೂರು ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ‌7 ಕ್ಷೇತ್ರಗಳ ಪೈಕಿ 4 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಆಗಿದೆ. ಈಗ ಆ ನಾಲ್ಕು ಜನ ಶಾಸಕರು ಸಹ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕಾಗಿ ಭಾರೀ ಪೈಪೋಟಿ ನಡೆಸಿದ್ದಾರೆ.


ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು (ಜ.24): ರಾಯಚೂರು ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ‌7 ಕ್ಷೇತ್ರಗಳ ಪೈಕಿ 4 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಆಗಿದೆ. ಈಗ ಆ ನಾಲ್ಕು ಜನ ಶಾಸಕರು ಸಹ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕಾಗಿ ಭಾರೀ ಪೈಪೋಟಿ ನಡೆಸಿದ್ದಾರೆ. ಕೆಲ ಸಚಿವರು ಆ ನಾಲ್ಕು ಜನ ಶಾಸಕರಿಗೆ ನಿಗಮ ಮಂಡಳಿ ‌ಸ್ಥಾನವೂ ನೀಡದಂತೆ ಹೈಕಮಾಂಡ್ ‌ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬ ಚರ್ಚೆ ಕ್ಷೇತ್ರದಲ್ಲಿ ಶುರುವಾಗಿದೆ. ಎರಡು ಬಾರಿ ಗೆದ್ದವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ‌ಮಾಡಿದೆ. ಆದ್ರೆ ಆ ನಿಯಮವು ಬ್ರೇಕ್ ಮಾಡಲು ಕೆಲ ಸಚಿವ ಮಧ್ಯೆ ಮುಸುಕಿನ ಗುದ್ದಾಟ ಶುರುವಾಗಿದ್ದು, ರಾಯಚೂರು ಜಿಲ್ಲೆಯ ನಾಲ್ಕು ಜನ ಶಾಸಕರಲ್ಲಿ ಯಾರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಗುತ್ತೆ ಎಂಬುವುದೇ ಕುತೂಹಲ ಮೂಡಿಸುತ್ತಿದೆ.

Tap to resize

Latest Videos

ಇಂತಹ ಕುತೂಹಲ ಇರುವ ವೇಳೆಯಲ್ಲಿ ಮಸ್ಕಿ ಶಾಸಕ ಆರ್. ಬಸನಗೌಡ ತುರ್ವಿಹಾಳ  ಮತ್ತು ಲಿಂಗಸೂಗೂರು ‌ಮಾಜಿ ಶಾಸಕ ಡಿ.ಎಸ್. ಹೂಲಗೇರಿ ಬೆಂಗಳೂರಿನ ನಿಲ್ದಾಣದಲ್ಲಿ ಸುರ್ಜೆವಾಲ್ ಅವರನ್ನ ಭೇಟಿ ಮಾಡಿ ನಮಗೆ ಸಚಿವ ಸ್ಥಾನದ ಬೇಡಿಕೆ ಇಟ್ಟಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಚರ್ಚೆ ಆಗುತ್ತಿದೆ. ಆದ್ರೆ ಕಾಂಗ್ರೆಸ್ ನಿಯಮದ ಪ್ರಕಾರ ಯಾವ ಶಾಸಕರು ಎರಡು ಬಾರಿ ಪೂರ್ಣ ಪ್ರಮಾಣದ ಶಾಸಕರಾಗಿ ಆಯ್ಕೆ ಆಗಿದ್ದಾರೋ ಅವರಿಗೆ ನಿಗಮ ಮಂಡಳಿ ಪಟ್ಟ ನೀಡಲು ಚಿಂತನೆ ‌ನಡೆದಿದೆ. ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿ ಕೂಡ ಸಿದ್ಧವಾಗಿದೆ ಎಂಬ ಮಾತುಗಳು ‌ಕೇಳಿಬರುತ್ತಿವೆ.

ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದ ಬಾಲಕ ಮೂರು ಸಿಟಿ ಸಂಚರಿಸಿ ಹೈದರಾಬಾದ್‌ನಲ್ಲಿ ಪತ್ತೆ!

ರಾಯಚೂರು ಗ್ರಾಮೀಣ ಶಾಸಕರಿಗೆ ನಿಗಮ ಮಂಡಳಿ ತಪ್ಪಿಸಲು ತಂತ್ರ:
ಕಾಂಗ್ರೆಸ್ ಸತತ ಎರಡು ಬಾರಿ ಶಾಸಕರಾಗಿ ಆಯ್ಕೆಗೊಂಡವರಿಗೆ ನಿಗಮ ಮಂಡಳಿ ‌ಅಧ್ಯಕ್ಷ ಸ್ಥಾನ ನೀಡಲು ಮುಂದಾಗಿದೆ. ಅದರಂತೆ ರಾಯಚೂರು ಗ್ರಾಮೀಣ ಕ್ಷೇತ್ರದಿಂದ ಬಸನಗೌಡ ದದ್ದಲ್ ಎರಡು ಬಾರಿ ಪೂರ್ಣ ಪ್ರಮಾಣದ ಶಾಸಕರಾಗಿದ್ದಾರೆ. ಹೀಗಾಗಿ ಬಸನಗೌಡ ದದ್ದಲ್ ಗೆ ನಿಗಮ ಮಂಡಳಿ ಸ್ಥಾನ ಸಿಗುವುದು ಪಕ್ಕಾ ಆಗಿದೆ. ಆದ್ರೆ ಇವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ತಪ್ಪಿಸಲು ಒಂದು ಬಣ ತಂತ್ರಗಾರಿಕೆ ನಡೆಸುತ್ತಿದೆ. ಆದ್ರೆ ಕಾಂಗ್ರೆಸ್ ಹೈಕಮಾಂಡ್ ಯಾವ ತಂತ್ರಕ್ಕೂ ಕ್ಯಾರೆ ಎನ್ನದೇ ಬಸನಗೌಡ ದದ್ದಲ್ ಗೆ ನಿಗಮ ಮಂಡಳಿ ಸ್ಥಾನ‌ ನೀಡುವುದು ಖಾತ್ರಿ ಆಗಿದೆ. ಯಾವ ನಿಗಮ ಮಂಡಳಿ ಅಧ್ಯಕ್ಷ ಎಂಬುವುದು ಮಾತ್ರ ಕಾಂಗ್ರೆಸ್ ಹೈಕಮಾಂಡ್ ಪಟ್ಟಿ ರಿಲೀಸ್ ಮಾಡಬೇಕಾಗಿದೆ.

ಹಂಪನಗೌಡ ಬಾದರ್ಲಿ ಗೆ ನಿಗಮ ಮಂಡಳಿ ಸ್ಥಾನವೇ ಬೇಡವಂತೆ:
ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕಾತಿ ಈಗ ಕಾಂಗ್ರೆಸ್‌ ನಾಯಕರ ಬಣಗಳ ಪ್ರತಿಷ್ಠೆಯ ಪ್ರಶ್ನೆಯಾಗಿ ಮಾರ್ಪಟ್ಟಿದೆ. ರಾಜ್ಯ ಕಾಂಗ್ರೆಸ್‌ನಿಂದ ಅಂತಿಮವಾಗಿ ಹೈಕಮಾಂಡ್‌ಗೆ ಸಲ್ಲಿಕೆಯಾದ ಪಟ್ಟಿಗೆ ಕೆಲವು ಹೆಸರು ಸೇರ್ಪಡೆಯಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಗೆ ಬೆಂಬಲಿಗರು ಒತ್ತಡ ಹೇರತೊಡಗಿದ್ದಾರೆ. ಹೊಸದಾಗಿ ಸೇರಿಸಿದ ಹೆಸರುಗಳಿಗೆ ಒಂದು ಬಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರೆ, ಮತ್ತೊಂದು ಬಣ ಹೊಸ ಹೆಸರುಗಳು ಸೇರಿಸಬೇಕು ಎಂದು ಪಟ್ಟು ಹಿಡಿದಿದೆ. ಮತ್ತೊಂದು ಕಡೆ ಸಿಂಧನೂರು ಶಾಸಕರಾದ ಹಂಪನಗೌಡ ಬಾದರ್ಲಿ ನನಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಡ. ನಿಗಮ‌ ಮಂಡಳಿ ಅಧ್ಯಕ್ಷ ಸ್ಥಾನ  ಬೇರೆಯವರಿಗೆ ನೀಡಿ, ನನಗೆ ಬೇಡ ಎಂದು ಕಾಂಗ್ರೆಸ್ ಹೈಕಮಾಂಡ್ ಗೆ ಸಂದೇಶ ರವಾನಿಸಿದ್ದಾರೆ. ಕಾಂಗ್ರೆಸ್ ನ ಹಿರಿಯ ಶಾಸಕರಲ್ಲಿ ಒಬ್ಬರಾಗಿರುವ ಹಂಪನಗೌಡ ಬಾದರ್ಲಿ ಅವರು ಐದು ಬಾರಿ ಶಾಸಕರಾಗಿದ್ರು. ಒಂದು ಬಾರಿಯೂ ಸಹ ಸಚಿವ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಈ ಬಾರಿ ಹಂಪನಗೌಡ ಬಾದರ್ಲಿಗೆ ಸಚಿವ ಸ್ಥಾನ ನೀಡಬೇಕು ಎಂಬ ಕೂಗು ಇಡೀ ಕ್ಷೇತ್ರದಲ್ಲಿ ಜೋರಾಗಿ ಕೇಳಿಬರುತ್ತಿದೆ. ಖುದ್ದು ಶಾಸಕರೇ ನನಗೆ ನಿಗಮ ಮಂಡಳಿ ಬೇಡವೆಂದು ಹೇಳಿದ್ದು, ಶಾಸಕ ಹಂಪನಗೌಡ ಬಾದರ್ಲಿಗೆ ಸಚಿವ ಸ್ಥಾನ ನೀಡುತ್ತಾ ಕಾಂಗ್ರೆಸ್ ಹೈಕಮಾಂಡ್ ಎಂಬುವುದು ಕಾದು ನೋಡಬೇಕಾಗಿದೆ.

ಒಗ್ಗಟ್ಟಾಗಿ 1600 ಕೋಟಿ ವ್ಯವಹಾರದ ಕಂಪೆನಿ ಸ್ಥಾಪಿಸಿದ ಭಾರತದ ಸಪ್ತ ನಾ ...

ಮಸ್ಕಿ ಶಾಸಕರಿಗೆ ಸಿಗುತ್ತಾ ನಿಗಮ ಮಂಡಳಿ ಸ್ಥಾನ: 
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ನಲ್ಲಿ ಭಾರೀ ಪೈಪೋಟಿ ಶುರುವಾಗಿದೆ. ರಾಯಚೂರು ಜಿಲ್ಲೆಯಲ್ಲಿ ಕಾಂಗ್ರೆಸ್ ನ ನಾಲ್ಕು ಜನ ಶಾಸಕರಲ್ಲಿ ಯಾರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಗುತ್ತೆ ಎಂಬ ಚರ್ಚೆ ಜಿಲ್ಲೆಯಲ್ಲಿ ಶುರುವಾಗಿದೆ. ಅದರಲ್ಲೂ ಮಾನ್ವಿ ಶಾಸಕ ಹಂಪಯ್ಯ ನಾಯಕ ಮತ್ತು ಬಸನಗೌಡ ತುರ್ವಿಹಾಳ ನಡುವೆ ನಿಗಮ ಮಂಡಳಿಗಾಗಿ ಭಾರೀ ಕಸರತ್ತು ‌ಶುರುವಾಗಿದೆ.

ಹೀಗಾಗಿ ‌ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಹಾಗೂ ‌ಲಿಂಗಸೂಗೂರು ಮಾಜಿ ಶಾಸಕ ಡಿ.ಎಸ್. ಹೂಲಗೇರಿ ಬೆಂಗಳೂರಿನ ಏರ್ ಪೋರ್ಟ್ ಗೆ ಹೋಗಿ ರಣದೀಪ್ ಸಿಂಗ್ ಸುರ್ಜೇವಾಲ್ ಅವರನ್ನ ಭೇಟಿ ಮಾಡಿ ನಿಗಮ ಮಂಡಳಿ ನೀಡುವಂತೆ ಮನವಿ ಮಾಡಿ ಬಂದಿದ್ದಾರೆ. ಇದೇ ವೇಳೆ ಸುರ್ವೇವಾಲ ಸಹ ಎರಡು ಬಾರಿ ಶಾಸಕರಾದವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಚಿಂತನೆ ಇದೆ ಎಂಬ  ವಿಚಾರವೂ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮಸ್ಕಿ ಕ್ಷೇತ್ರದ ತುಂಬಾ ಬಸನಗೌಡ ತುರ್ವಿಹಾಳಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಗುವುದು ಖಾತ್ರಿ ಆಗಿದೆ ಎಂಬ ವಿಚಾರ ಕ್ಷೇತ್ರದಲ್ಲಿ ಚರ್ಚೆ ಆಗುತ್ತಿದೆ.

click me!