
ಈಗ ಸದ್ಯ ಜಗತ್ತಿನಾದ್ಯಂತ ಬೆಚ್ಚಿಬೀಳಿಸೋ ವಿಷ್ಯ ಎಂದರೆ ಅದು ಎಪ್ಸ್ಟೀನ್ ಫೈಲ್ಸ್ (Epstein Files). ಚಿಕ್ಕ ಮಕ್ಕಳನ್ನು ಲೈಂ*ಗಿಕತೆಗೆ ಬಳಸಿಕೊಳ್ಳುವುದು ಮಾತ್ರವಲ್ಲದೇ ಅವರನ್ನು ಕೊಂದು ಅವರ ದೇಹದ ಭಾಗಗಳನ್ನು ತಿನ್ನುವಂಥ ವಿಕೃತಿಯನ್ನೂ ಕೆಲವರು ಮಾಡಿರುವುದಾಗಿ ಜೆಫ್ರಿ ಎಪ್ಸ್ಟೀನ್ ಫೈಲ್ಸ್ನಲ್ಲಿ ಉಲ್ಲೇಖಿಸಲಾಗಿದೆ. ಜೀವನಕ್ಕೆ ಬೇಕಾದ ಎಲ್ಲಾ ಐಷಾರಾಮಿಗಳು ಸಿಕ್ಕ ಬಳಿಕವೂ, ಇರುವ ದುಡ್ಡನ್ನು ಏನು ಮಾಡಬೇಕು ಎಂದು ತಿಳಿಯದೇ ಗೊಂದಲಕ್ಕೆ ಒಳಗಾದಾಗ ಮನುಷ್ಯ ಈ ರೀತಿ ವಿಕೃತನಾಗುತ್ತಾನೆ ಎಂದು ಹೇಳುವ ಮಾತಿಗೆ ಸಾಕ್ಷಿಯಾಗಿ ನಿಂತಿದೆ ಈ ಫೈಲ್ಸ್. ನಿಜಕ್ಕೂ ನಾವು ನೋಡುತ್ತಿರುವ ಜಗತ್ತೇ ಒಂದು, ಅದರೊಳಗೆ ಅವಿತಿರುವ ವಿಷಯವೇ ಇನ್ನೊಂದು ಎಂದು ಇದಾಗಲೇ ಹಲವು ಜ್ಞಾನಿಗಳು ಹೇಳಿರುವುದು ಉಂಟು. ಅಂಥದ್ದೇ ವಿಚಿತ್ರ, ಭಯಾನಕ, ಕ್ರೂರ ಎನ್ನಿಸುವ, ಮನುಷ್ಯನ ಕರಾಳತನವನ್ನು ತೆಗೆದಿಡುವ ಭಯಾನಕ ಸತ್ಯವನ್ನು ಇದರಲ್ಲಿ ಉಲ್ಲೇಖಿಸಲಾಗಿದೆ.
ಪ್ರಪಂಚದಲ್ಲಿ ದುಡ್ಡಿದ್ದರೆ ಏನು ಬೇಕಾದರೂ ಮಾಡಬೋದು ಅಂತಾರೆ.. ಆದರೆ ಆ ದುಡ್ಡು ಮತ್ತು ಅಧಿಕಾರದ ಮದ ನೆತ್ತಿಗೇರಿದರೆ ಮನುಷ್ಯ ಎಷ್ಟರ ಮಟ್ಟಿಗೆ ಕೆಳಜಾರಬಹುದು ಅನ್ನೋದಕ್ಕೆ ಇಲ್ಲೊಂದು ಬೆಚ್ಚಿಬೀಳಿಸೋ ಉದಾಹರಣೆಯಿದೆ. ಇದು ಕೇವಲ ಒಬ್ಬ ವ್ಯಕ್ತಿಯ ಕಥೆಯಲ್ಲ, ಇಡೀ ಪ್ರಪಂಚದ ದೊಡ್ಡ ದೊಡ್ಡ ವ್ಯಕ್ತಿಗಳ ಮುಖವಾಡ ಕಳಚೋ ಸ್ಫೋಟಕ ಪ್ರಕರಣ.. ಇದರಲ್ಲಿ ಭಾರತದ ಖ್ಯಾತನಾಮರ ಹೆಸರೂ ಕೇಳಿಬಂದಿದೆ. ಆದರೆ ಇದರ ನಡುವೆಯೇ ಈ ಕೃತಕ ಬುದ್ಧಿಮತ್ತೆಯ ಯುಗದಲ್ಲಿ ತಮಗೆ ಆಗದವರ ವಿಡಿಯೋ ಮಾಡಿ ಅವರನ್ನೂ ಕೂಡ ಈ ಘಟನೆಗೆ ಲಿಂಕ್ ಮಾಡುವ ಹೇಯ ಕಾರ್ಯವೂ ಅದೇ ಇನ್ನೊಂದೆಡೆ ನಡೆಯುತ್ತಿದೆ. ಎಐ ಯುಗದಲ್ಲಿ ಸತ್ಯ ಯಾವುದು, ಸುಳ್ಳು ಯಾವುದು ಎಂದು ತಿಳಿಯದ ಜನರು ಅದನ್ನೇ ನಿಜ ಎಂದು ನಂಬಿಕೊಂಡು ಅತ್ಯಂತ ಕೆಟ್ಟರೀತಿಯಲ್ಲಿ ಕಮೆಂಟ್ಸ್ ಮಾಡುವುದು ನಡೆಯುತ್ತಿದೆ. ಕೆಲವೊಮ್ಮೆ ಇದು ಸುಳ್ಳು ಎಂದು ತಿಳಿದಿದ್ದರೂ, ಅದನ್ನು ಬೇರೆಯವರು ನಂಬಲಿ ಎನ್ನುವ ಕಾರಣಕ್ಕೆ ಅವರ ಘನತೆಗೆ ಕುಂದು ತರುವ ಕೆಲಸವನ್ನೂ ಮಾಡುತ್ತಾ ವಿಕೃತಿ ಮೆರೆಯುತ್ತಿದ್ದಾರೆ.
ಅದೇ ಇನ್ನೊಂದೆಡೆ, ಯಾವುದೋ ರಾಜಕಾರಣಿಯನ್ನೋ ಇಲ್ಲವೇ ವಿಐಪಿಯನ್ನೋ ಹೋಲುವ ವ್ಯಕ್ತಿಗಳ ವಿಡಿಯೋ ವೈರಲ್ ಮಾಡಿಯೂ ವಿಕೃತಿ ಮೆರೆಯಲಾಗುತ್ತಿದೆ. ಇದೀಗ, ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರದ್ದು ಎನ್ನಲಾದ ವಿಡಿಯೋ ಒಂದನ್ನು ಶೇರ್ ಮಾಡಲಾಗಿದೆ. ಇದರಲ್ಲಿ ಆ ವ್ಯಕ್ತಿ ಎಪ್ಸ್ಟೀನ್ ಜೊತೆಗೆ ಹೆಣ್ಣುಮಕ್ಕಳ ನಡುವೆ ಡಾನ್ಸ್ ಮಾಡುತ್ತಾ, ಕಿಸ್ ಮಾಡುವುದನ್ನು ನೋಡಬಹುದಾಗಿದೆ. ಮಾತ್ರವಲ್ಲದೇ ಎಪ್ಸ್ಟೀನ್ ಫೈಲ್ಸ್ನಲ್ಲಿ ರಾಹುಲ್ ಗಾಂಧಿ ಎಂದು ಹೆಸರು ಕೊಟ್ಟು ಸರ್ಚ್ ಮಾಡಿದರೆ, ಅದರಲ್ಲಿ ರಾಹುಲ್ ಗಾಂಧಿಯ ಹೆಸರು ತೋರಿಸುವ ಫೈಲ್ಗಳೂ ಇರುವುದನ್ನು ನೋಡಬಹುದು.
ಆದರೆ ಸತ್ಯಾಂಶವೇ ಬೇರೆ ಇದೆ. ಇದರ ಫ್ಯಾಕ್ಟ್ ಚೆಕ್ ಮಾಡಿದಾಗ, ಇದು ರಾಹುಲ್ ಗಾಂಧಿ ಅವರ ವಿಡಿಯೋ ಅಲ್ಲ, ಬದಲಿಗೆ ಬೇರೆ ಯಾರದ್ದೋ ಎನ್ನುವುದು ಸಾಬೀತಾಗಿದೆ. ಅದೇ ರೀತಿ ಎಪ್ಸ್ಟೀನ್ ಫೈಲ್ಸ್ನಲ್ಲಿ ನೀವು ಯಾವುದೇ ರಾಜಕಾರಣಿಗಳ ಹೆಸರನ್ನು ಟೈಪ್ ಮಾಡಿ ಸರ್ಚ್ ಮಾಡಿದರೂ ಅವರ ಹೆಸರು ಅದರಲ್ಲಿ ತೋರಿಸುತ್ತದೆ. ಅಂದ ಮಾತ್ರಕ್ಕೆ ಅವರಿಗೂ, ಈ ಭಯಾನಕ ಕೃತ್ಯಕ್ಕೂ ಲಿಂಕ್ ಇದೆ ಎನ್ನುವುದು ಸರಿಯಲ್ಲ ಎನ್ನುವುದು ಫ್ಯಾಕ್ಟ್ ಚೆಕ್ನಿಂದ ಸಾಬೀತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.