ಕಾಂಗ್ರೆಸ್‌ ದೆವ್ವದ ಮನೆ, ದಿನಕ್ಕೊಂದು ಬಿಳಿ-ಕರಿ ದೆವ್ವ ಹೊರ ಬರ್ತಿವೆ: ಆರ್.ಅಶೋಕ್ ವ್ಯಂಗ್ಯ

Published : Dec 13, 2025, 08:23 AM IST
R Ashok

ಸಾರಾಂಶ

ರಾಜ್ಯ ಕಾಂಗ್ರೆಸ್ ದೆವ್ವದ ಮನೆಯಾಗಿದೆ. ಒಂದು ದಿನ ಕೊಳ್ಳಿ ದೆವ್ವ, ಮತ್ತೊಂದು ದಿನ ಬಿಳಿ ದೆವ್ವ, ಮಗದೊಂದು ದಿನ ಕರಿ ದೆವ್ವ... ಹೀಗೆ ದಿನಕ್ಕೊಂದು ದೆವ್ವ ಆಚೆ ಬರುತ್ತಿವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದರು.

ಸುವರ್ಣ ವಿಧಾನಸೌಧ (ಡಿ.13): ರಾಜ್ಯ ಕಾಂಗ್ರೆಸ್ ದೆವ್ವದ ಮನೆಯಾಗಿದೆ. ಒಂದು ದಿನ ಕೊಳ್ಳಿ ದೆವ್ವ, ಮತ್ತೊಂದು ದಿನ ಬಿಳಿ ದೆವ್ವ, ಮಗದೊಂದು ದಿನ ಕರಿ ದೆವ್ವ... ಹೀಗೆ ದಿನಕ್ಕೊಂದು ದೆವ್ವ ಆಚೆ ಬರುತ್ತಿವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗಾವಿ ಅಧಿವೇಶನಕ್ಕೆ ನೇರವಾಗಿ 20 ಕೋಟಿ ರು. ಮತ್ತು ಪರೋಕ್ಷವಾಗಿ ಸುಮಾರು 30 ಕೋಟಿ ರು. ಖರ್ಚಾಗುತ್ತದೆ. ಈ ಅಧಿವೇಶನದಲ್ಲಿ ಏನು ನಡೆಯುತ್ತಿದೆ? ಅಧಿವೇಶನದ ಹೆಸರಿನಲ್ಲಿ ಕಾಂಗ್ರೆಸ್ ಶಾಸಕರು, ಮಂತ್ರಿಗಳ ಡಿನ್ನರ್‌ ಪಾಲಿಟಿಕ್ಸ್‌ ನಡೆಯುತ್ತಿದೆ. ರಾತ್ರಿ ಊಟದ ನೆಪದಲ್ಲಿ ತಡರಾತ್ರಿವರೆಗೂ ಶಾಸಕರು ಮತ್ತು ಮಂತ್ರಿಗಳನ್ನು ಕೂಡಿ ಹಾಕಿಕೊಂಡು ಬಲಪ್ರದರ್ಶಿಸಲಾಗುತ್ತಿದೆ. ಹೈಕಮಾಂಡ್‌ಗೆ ಶಕ್ತಿ ತೋರಿಸಲು ಈ ಅಧಿವೇಶನ ಬಳಸುತ್ತಿದ್ದಾರೆ. ಯಾವ ಮಂತ್ರಿಗೂ ಸಮಯ ಕೊಟ್ಟು ಸದನದಲ್ಲಿ ಕೂರುತ್ತಿಲ್ಲ, ಬಂದರೂ ತಯಾರಿ ಇಲ್ಲದೆ ಬುರುಡೆ ಬಿಟ್ಟು ಹೋಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾ ಬಿಡೆ, ನಾ ಕೊಡೆ: ಬೆಳಗಾವಿಯಲ್ಲೂ ಪವರ್ ಪಾಲಿಟಿಕ್ಸ್‌ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್‌ ‘ನಾ ಬಿಡೆ’ ಎಂದರೆ, ಸಿದ್ದರಾಮಯ್ಯ ‘ನಾ ಕೊಡೆ’ ಎನ್ನುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಒದ್ದು ಅಧಿಕಾರ ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಸಿಎಂ ಕುರ್ಚಿಗೆ ಫೆವಿಕಾಲ್ ಹಾಕಿಕೊಂಡು ಕೂತಿದ್ದಾರೆ ಎಂದು ವ್ಯಂಗ್ಯವಾಡಿದರು. ಸಿಎಂ ಸಿದ್ಧರಾಮಯ್ಯ 47 ಕೋಟಿ ರು. ಖರ್ಚು ಮಾಡಿ ಹೆಲಿಕಾಪ್ಟರ್‌ನಲ್ಲಿ ಓಡಾಡಿದ್ದಾರೆ. ಅವರು ಜಾಸ್ತಿ ಓಡಾಡಿರುವುದು ಮೈಸೂರಿಗೆ. ಅವರು ಮೈಸೂರಿಗೆ ಮುಖ್ಯಮಂತ್ರಿನಾ ಅಥವಾ ಕರ್ನಾಟಕಕ್ಕೆ ಮುಖ್ಯಮಂತ್ರಿನಾ ಎಂಬುದು ಅರ್ಥವಾಗುತ್ತಿಲ್ಲ. ಇಡೀ ರಾಜ್ಯದ ರಸ್ತೆಗಳು ಹಾಳಾಗಿವೆ. ಅದರಲ್ಲೂ ಉತ್ತರ ಕರ್ನಾಟಕದ ರಸ್ತೆಗಳಲ್ಲಿ 10 ಕಿ.ಮೀ. ಪ್ರಯಾಣಿಸಲು 2-3 ಗಂಟೆ ಬೇಕು. ಬೆಂಗಳೂರಿನಲ್ಲಿ ಈ ರಸ್ತೆ ಗುಂಡಿಗಳಿಂದ 15ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಗುಂಡಿ ಮುಚ್ಚಲು ಈ ಸರ್ಕಾರದ ಬಳಿ ಹಣವಿಲ್ಲ. ಮುಖ್ಯಮಂತ್ರಿ ಅವರು ಬೆಂಗಳೂರಿನಲ್ಲಿ ಓಡಾಡಲು ಸಣ್ಣ ಹೆಲಿಕಾಪ್ಟರ್‌ ನೋಡಿಕೊಳ್ಳಬೇಕು ಎಂದು ಟೀಕಿಸಿದರು.

ಬಲಪ್ರದರ್ಶಿಸಲು ಡಿನ್ನರ್‌ ಪಾಲಿಟಿಕ್ಸ್: ಹೆಲಿಕಾಪ್ಟರ್‌ ಗೆ 47 ಕೋಟಿ ರು. ಕೊಡುವ ಮುಖ್ಯಮಂತ್ರಿಗೆ ಕಬ್ಬುಬೆಳೆಗಾರರಿಗೆ ಹಣ ನೀಡುವ ಉದಾರತೆ ಇಲ್ಲ. ಅವರ ಪರ ಮಗ ಫುಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅಪ್ಪನೇ ಐದು ವರ್ಷ ಸಿಎಂ ಎಂದು ಹೇಳುತ್ತಿದ್ದಾರೆ. ಮತ್ತೊಂದೆಡೆ ಡಿ.ಕೆ. ಬ್ರದರ್‌ ತಮ್ಮ ಅಣ್ಣನನ್ನು ಮುಖ್ಯಮಂತ್ರಿಯಾಗಿ ನೋಡುವ ಕನಸು ಕಾಣುತ್ತಿದ್ದಾರೆ. ಇದನ್ನು ನೋಡಿದರೆ, ಕಾಂಗ್ರೆಸ್ ಪಾರ್ಟಿ ಸತ್ತಿದೆ. ಸತ್ತಿರುವ ಪಕ್ಷವನ್ನು ಹಿಂದೆ-ಮುಂದೆ ಹೊರಲು ಕಿತ್ತಾಡುತ್ತಿದ್ದಾರೆ. ಇದು ಹೀಗೇ ಮುಂದುವರೆದರೆ, ಜನರೇ ಸತ್ತಿರುವ ಈ ಸರ್ಕಾರವನ್ನು ಹೂತು ಹಾಕುತ್ತಾರೆ ಎಂದು ಕೆಂಡಕಾರಿದರು. ಅವರಿಗೆ ರಸ್ತೆಗಳ ಮೇಲೆ ವಿಶ್ವಾಸವಿಲ್ಲ. ರಸ್ತೆಗಳ ಮೇಲೆ ಓಡಾಡಿದರೆ ಬೆನ್ನು, ಕಾಲು, ಸೊಂಟ ನೋವು ಬರುತ್ತದೆ. ಹೀಗಾಗಿ ಅವರು ಹೆಲಿಕಾಪ್ಟರ್ ಆಯ್ಕೆ ಮಾಡಿಕೊಂಡಿದ್ದಾರೆ.

ಜನ ಬೇಕಾದರೆ ಕೈ, ಕಾಲು, ಸೊಂಟು ಮುರಿದುಕೊಂಡು ರಸ್ತೆಗಳಲ್ಲಿ ಓಡಾಡಬಹುದು. ಅವರು ಮಾತ್ರ ಸುರಕ್ಷಿತವಾಗಿ ಹೆಲಿಕಾಪ್ಟರ್ ಹೆಲಿಕಾಪ್ಟರ್‌ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು. ಸಿಎಂ ಸಿದ್ಧರಾಮಯ್ಯ 47 ಕೋಟಿ ರು. ಖರ್ಚು ಮಾಡಿ ಹೆಲಿಕಾಪ್ಟರ್‌ನಲ್ಲಿ ಓಡಾಡಿದ್ದಾರೆ. ಅವರು ಜಾಸ್ತಿ ಓಡಾಡಿರುವುದು ಮೈಸೂರಿಗೆ. ಅವರು ಮೈಸೂರಿಗೆ ಮುಖ್ಯಮಂತ್ರಿನಾ ಅಥವಾ ಕರ್ನಾಟಕಕ್ಕೆ ಮುಖ್ಯಮಂತ್ರಿನಾ ಎಂಬುದು ಅರ್ಥವಾಗುತ್ತಿಲ್ಲ. ಇಡೀ ರಾಜ್ಯದ ರಸ್ತೆಗಳು ಹಾಳಾಗಿವೆ. ಅದರಲ್ಲೂ ಉತ್ತರ ಕರ್ನಾಟಕದ ರಸ್ತೆಗಳಲ್ಲಿ 10 ಕಿ.ಮೀ. ಪ್ರಯಾಣಿಸಲು 2-3 ಗಂಟೆ ಬೇಕು. ಬೆಂಗಳೂರಿನಲ್ಲಿ ಈ ರಸ್ತೆ ಗುಂಡಿಗಳಿಂದ 15ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಗುಂಡಿ ಮುಚ್ಚಲು ಈ ಸರ್ಕಾರದ ಬಳಿ ಹಣವಿಲ್ಲ. ಮುಖ್ಯಮಂತ್ರಿ ಅವರು ಬೆಂಗಳೂರಿನಲ್ಲಿ ಓಡಾಡಲು ಸಣ್ಣ ಹೆಲಿಕಾಪ್ಟರ್‌ ನೋಡಿಕೊಳ್ಳಬೇಕು ಎಂದು ಟೀಕಿಸಿದರು.

ಬಲಪ್ರದರ್ಶಿಸಲು ಡಿನ್ನರ್‌ ಪಾಲಿಟಿಕ್ಸ್

ಹೆಲಿಕಾಪ್ಟರ್‌ ಗೆ 47 ಕೋಟಿ ರು. ಕೊಡುವ ಮುಖ್ಯಮಂತ್ರಿಗೆ ಕಬ್ಬುಬೆಳೆಗಾರರಿಗೆ ಹಣ ನೀಡುವ ಉದಾರತೆ ಇಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕನ್ನಡ ನಾಮಫಲಕ ಅಳವಡಿಕೆ ಕಡ್ಡಾಯ ನಿಯಮ ಶೀಘ್ರ ಜಾರಿ: ಸಚಿವ ಶಿವರಾಜ ತಂಗಡಗಿ
25000 ಕೋಟಿ ದಲಿತರ ಹಣ ಗ್ಯಾರಂಟಿಗೆ ಬಳಕೆ: ಸಚಿವ ಎಚ್‌.ಸಿ.ಮಹದೇವಪ್ಪ