ರಾಜ್ಯದ ಜನರಿಗೆ ನೀಡಿದ 5 ಗ್ಯಾರಂಟಿಗಳ ಜೊತೆಗೆ ತಾನು ಅಧಿಕಾರಕ್ಕೆ ಮಾಜಿ ಬಂದಾಗಲೆಲ್ಲ ಬರಗಾಲ ಗ್ಯಾರಂಟಿ ಎಂಬ ಸಂದೇಶವನ್ನು ಕಾಂಗ್ರೆಸ್ ನೀಡಿದೆ. ಮುಂಬರುವ ದಿನಗಳಲ್ಲಿ ದೇಶದ ಪ್ರಧಾನಿಯಾಗಿ ಮೋದಿಯವರು ಅಧಿಕಾರಕ್ಕೆ ಬರುವುದು ಗ್ಯಾರಂಟಿ, ಆ ಸಂದರ್ಭದಲ್ಲಿ ಖುದು ನಾನೇ ಅವರ ಜತೆಗೆ ಮಾತನಾಡಿ ರಾಜ್ಯದ ಜನರ ಹಿತಕಾಯುವ ಕೆಲಸ ಮಾಡುತ್ತೇನೆ ಎಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
ತುರುವೇಕೆರೆ(ತುಮಕೂರು)(ಏ.14): ನಾನು ನನ್ನ ಪಕ್ಷದ ಉಳಿವಿಗಾಗಿ ಮೈತ್ರಿ ಮಾಡಿಕೊಂಡಿಲ್ಲ, ರಾಜ್ಯದ ಜನರ ಹಿತದೃಷ್ಟಿಯಿಂದ ಬಿಜೆಪಿ ಜತೆಗೆ ಕೈಜೋಡಿಸಿದ್ದೇನೆ. ಇನ್ನು ಏಳೆಂಟು ತಿಂಗಳಲ್ಲಿ ರಾಜ್ಯದಲ್ಲಿ ನಿಮ್ಮ ಸರ್ಕಾರ ಬರಲಿದೆ. ಅಂದರೆ ರೈತ ಪರ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಶನಿವಾರ ವಿ.ಸೋಮಣ್ಣ ಪರ ಮತಯಾಚನೆ ಮಾಡಿದ ಅವರು, ರಾಜ್ಯದ ಜನರಿಗೆ ನೀಡಿದ 5 ಗ್ಯಾರಂಟಿಗಳ ಜೊತೆಗೆ ತಾನು ಅಧಿಕಾರಕ್ಕೆ ಮಾಜಿ ಬಂದಾಗಲೆಲ್ಲ ಬರಗಾಲ ಗ್ಯಾರಂಟಿ ಎಂಬ ಸಂದೇಶವನ್ನು ಕಾಂಗ್ರೆಸ್ ನೀಡಿದೆ. ಮುಂಬರುವ ದಿನಗಳಲ್ಲಿ ದೇಶದ ಪ್ರಧಾನಿಯಾಗಿ ಮೋದಿಯವರು ಅಧಿಕಾರಕ್ಕೆ ಬರುವುದು ಗ್ಯಾರಂಟಿ, ಆ ಸಂದರ್ಭದಲ್ಲಿ ಖುದು ನಾನೇ ಅವರ ಜತೆಗೆ ಮಾತನಾಡಿ ರಾಜ್ಯದ ಜನರ ಹಿತಕಾಯುವ ಕೆಲಸ ಮಾಡುತ್ತೇನೆ ಎಂದರು.
ಅಧಿಕಾರಕ್ಕಾಗಿ ಊರೂರು ಅಲೆಯುವ ಸೋಮಣ್ಣ: ಸಚಿವ ಪರಮೇಶ್ವರ್
ರೈತರು ಭಿಕ್ಷುಕರಲ್ಲ:
ಈ ಕಾಂಗ್ರೆಸ್ ಸರ್ಕಾರ ಬರಗಾಲದ ಪರಿಹಾರವಾಗಿ ಕೇವಲ 2 ಸಾವಿರ ರು. ನೀಡಿದೆ. ಈ ವಿಚಾರದಲ್ಲೂ ನೂರಕ್ಕೆ ನೂರರಷ್ಟು ಗುರಿಸಾಧನೆಯಾಗಿಲ್ಲ. ಆದರೆ ಸರ್ಕಾರ 5 ಗ್ಯಾರಂಟಿಗಳನ್ನು ಜಾರಿಗೊಳಿಸಿದೆ ಎಂದು ಪ್ರಚಾರ ಮಾಡಲು ಸುಮಾರು 300 ಕೋಟಿ ರು.ಗಳನ್ನು ವ್ಯಯ ಮಾಡಿದ್ದಾರೆ. ಅಂದರೆ ರೈತರಿಗೆ ಕೊಡಲು ಹಣ ಇಲ್ಲ ಎನ್ನುವ ಈ ಸರ್ಕಾರ, ಜನರ ತೆರಿಗೆ ಹಣವನ್ನು ಸುಖಾಸುಮ್ಮನೆ ವ್ಯಯ ಮಾಡುತ್ತಿದೆ ಎಂದು ಕಿಡಿಕಾರಿದರು.
ಮಹಾನ್ ನಾಯಕ:
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕೊಬ್ಬರಿಯ ಪ್ರತಿ ಕ್ವಿಂಟಲ್ ಕೊಬ್ಬರಿಗೆ 15 ಸಾವಿರ ರು.ಗಳ ಸೂಕ್ತ ಬೆಲೆ ಕೊಡಿಸುವ ಭರವಸೆಯನ್ನು ಕನಕಪುರದ ಮಹಾನ್ ನಾಯಕ ಹೇಳಿ ಹೋಗಿದ್ದರು. ಆದರೆ ಅಧಿಕಾರಕ್ಕೆ ಬಂದು ಎಂಟತ್ತು ತಿಂಗಳು ಆಗುತ್ತಾ ಬಂದರೂ ಈವರೆಗೂ ಕೊಬ್ಬರಿಬಗ್ಗೆ ಮಾತೇ ಇಲ್ಲ ಎಂದು ಡಿ.ಕೆ.ಶಿವಕುಮಾರ್ ರವರನ್ನು ತಿವಿದರು.