ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!

Kannadaprabha News   | Kannada Prabha
Published : Dec 20, 2025, 05:12 AM IST
Priyanka Gandhi

ಸಾರಾಂಶ

ಗುರುವಾರವಷ್ಟೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಆತ್ಮೀಯ ಸಂವಾದ ನಡೆಸಿ, ಗಡ್ಕರಿ ಅವರ ಮನೆಯಿಂದ ತಂದಿದ್ದ ಆಹಾರವನ್ನು ಸವಿದಿದ್ದ ಪ್ರಿಯಾಂಕಾ ಗಾಂಧಿ ಅವರು, ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆತ್ಮೀಯ ಮಾತುಕತೆ ನಡೆಸಿದರು.

ನವದೆಹಲಿ: ಗುರುವಾರವಷ್ಟೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಆತ್ಮೀಯ ಸಂವಾದ ನಡೆಸಿ, ಗಡ್ಕರಿ ಅವರ ಮನೆಯಿಂದ ತಂದಿದ್ದ ಆಹಾರವನ್ನು ಸವಿದಿದ್ದ ಪ್ರಿಯಾಂಕಾ ಗಾಂಧಿ ಅವರು, ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆತ್ಮೀಯ ಮಾತುಕತೆ ನಡೆಸಿದರು.

ಸಂಸತ್‌ ಚಳಿಗಾಲದ ಅಧಿವೇಶನದ ಕೊನೆಯ ದಿನ

ಶುಕ್ರವಾರ ಸಂಸತ್‌ ಚಳಿಗಾಲದ ಅಧಿವೇಶನದ ಕೊನೆಯ ದಿನವಾಗಿದ್ದರಿಂದ ಪ್ರಧಾನಿ ಮೋದಿ, ಸ್ಪೀಕರ್‌ ಓಂ ಬಿರ್ಲಾ ಮತ್ತು ಸಚಿವರು ಕೆಲಕಾಲ ಒಂದೆಡೆ ಕುಳಿತು ಉಭಯ ಕುಶಲೋಪರಿ ವಿಚಾರಿಸುತ್ತಿದ್ದರು. ಈ ವೇಳೆ ವಯನಾಡು ಸಂಸದೆಯಾದ ಪ್ರಿಯಾಂಕಾ ಅವರು ತಮ್ಮ ರಾಜಕೀಯ ವೈರುಧ್ಯವನ್ನು ಬದಿಗೊತ್ತಿ ಮೋದಿ ಹಾಗೂ ರಾಜನಾಥ ಸಿಂಗ್‌ ಅವರೊಂದಿಗೆ ಸಂತೋಷದಿಂದ ಮಾತನಾಡಿದರು.

ಮಲಯಾಳಿ ಕಲಿಯುತ್ತಿರುವುದಾಗಿ ಹೇಳಿದ ಪ್ರಿಯಾಂಕಾ

ಮೋದಿ ಅವರಿಗೆ ಪ್ರಿಯಾಂಕಾ, ತಾವು ಮಲಯಾಳಿ ಕಲಿಯುತ್ತಿರುವುದಾಗಿ ಹೇಳಿದರು. ಇನ್ನು ಮೋದಿ ಅವರು ತಮ್ಮ 3 ದೇಶಗಳ ಪ್ರವಾಸದ ಅನುಭವ ಹೇಳಿದರು.

ಇದೇ ವೇಳೆ, ರಾಜನಾಥ್‌ ಅವರಿಗೆ ಪ್ರಿಯಾಂಕಾ ತಮ್ಮ ವಯನಾಡಿನ ಅನುಭವ ಹೇಳಿದ್ದಲ್ಲದೆ, ಅಲ್ಲಿನ ಗಿಡಮೂಲಿಕೆಗಳನ್ನು ಬಳಸಿದ್ದರಿಂದ ಅಲರ್ಜಿ ಕಮ್ಮಿ ಆಗಿದೆ ಎಂದು ವಿವರಿಸಿದರು.

ಇದೇ ವೇಳೆ ಸ್ಪೀಕರ್‌ ಓಂ ಬಿರ್ಲಾ ಸೇರಿದಂತೆ ಕೇಂದ್ರ ಸಚಿವರು, ಸಂಸದರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಸತ್‌ ಅಧಿವೇಶನ ಅಂತ್ಯ : ಶೇ.100ಕ್ಕೂ ಹೆಚ್ಚು ಉತ್ಪಾದಕತೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌