
ಶ್ರೀನಗರ ( ನ. 18) ಬ್ಲಾಕ್ ಡೆವಲಪ್ ಮೆಂಟ್ ಕೌನ್ಸಿಲ್ ಅಧ್ಯಕ್ಷ ಸೇರಿದಂತೆ ಏಳು ಜನ ನಾಯಕರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಜಮ್ಮು ಕಾಶ್ಮೀರದ ಕಾಂಗ್ರೆಸ್ ಉಪಾಧ್ಯಕ್ಷ, ಮಾಜಿ ಸಚಿವ ರಮಣ್ ಭಲ್ಲಾ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಮಾಜಿ ಹೆಚ್ಚುವರಿ ಉಪ ಆಯುಕ್ತ ಅಬ್ದುಲ್ ಕಯೂಮ್ ಮಿರ್, ಥಾನಮಂಡಿ ಬಿಡಿಸಿ ಅಧ್ಯಕ್ಷ ರೋಜಿ ಜಾಫರ್ ಮಿರ್, ಸರ್ ಪಂಚ್ ಗುಲ್ಜಾರ್ ಹುಸೇನ್, ಸರ್ ಪಂಚ್ ಮೆಹಮೂದ್ ಅಹ್ಮದ್, ಸರ್ ಪಂಚ್ ಖಲೀಲ್ ಅಹ್ಮದ್, ಸರ್ ಪಂಚ್ ಹುಸೇನ್, ವಕೀಲ ಶಾದ್ ಕಾಂಗ್ರೆಸ್ ಜಾಯಿನ್ ಆಗಿದ್ದಾರೆ.
ಹೈಕಮಾಂಡ್ ಕೊಟ್ಟ ಮಹತ್ವದ ಜವಾಬ್ದಾರಿ ತೆಗೆದುಕೊಂಡ ಸುಧಾಕರ್
ಕಾಂಗ್ರೆಸ್ಸಿನ ನೀತಿಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಅವರು ಸಂಪೂರ್ಣ ನಂಬಿಕೆ ಇಟ್ಟು ಪಕ್ಷ ಸೇರಿದ್ದಾರೆ ಎಂದು ಅಲ್ಲಿನ ವಕ್ತಾರ ತಿಳಿಸಿದ್ದಾರೆ. ಈ ವೇಳೆ ಮಾತನಾಡಿದ ರಮಣ್ ಭಲ್ಲಾ ಬಿಜೆಪಿ ಮೇಲೆ ವಾಗ್ದಾಳಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿಕೊಂಡು ಬರುತ್ತೇವೆ ಎಂದು ತಿಳಿಸಿದ್ದಾರೆ.
ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿ ಬದಲಾದ ನಂತರ ಅನೇಕ ರಾಜಕಾರಣದ ಬದಲಾವಣೆಗಳು ನಡೆಯುತ್ತಲೇ ಇವೆ. ಜಮ್ಮು ಮತ್ತು ಕಾಶ್ಮೀರದ ಸಾಮಾಜಿಕವಾಗಿ ಬದಲಾಗಿರುವುದನ್ನು ಅಲ್ಲಿಯ ನಾಗರಿಕರೆ ಒಪ್ಪಿಕೊಳ್ಳುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.