ಬನಿಯನ್‌ ಪ್ರೊಟೆಸ್ಟ್‌ಗೆ ನೇಪಾಳಜೆನ್‌-ಝೀ ಪ್ರೇರಣೆ : ಪೊಲೀಸ್‌!

Sujatha NR   | Kannada Prabha
Published : Feb 22, 2026, 05:53 AM IST
CONGRESS PROTEST

ಸಾರಾಂಶ

ಶುಕ್ರವಾರ ದೆಹಲಿಯ ಎಐ ಶೃಂಗಸಭೆ ವೇಳೆ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್‌ ಕಾರ್ಯಕರ್ತರು, ನೇಪಾಳದಲ್ಲಿ ಕಳೆದ ವರ್ಷ ನಡೆದ ಜೆನ್‌ಝೀ ದಂಗೆಯನ್ನೇ ಪ್ರೇರಣೆಯಾಗಿ ಪಡೆದಿದ್ದರು ಎಂದು ದೆಹಲಿ ಪೊಲೀಸರು ಗಂಭೀರ ಆರೋಪ ಮಾಡಿದ್ದಾರೆ.

ನವದೆಹಲಿ: ಶುಕ್ರವಾರ ದೆಹಲಿಯ ಎಐ ಶೃಂಗಸಭೆ ವೇಳೆ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್‌ ಕಾರ್ಯಕರ್ತರು, ನೇಪಾಳದಲ್ಲಿ ಕಳೆದ ವರ್ಷ ನಡೆದ ಜೆನ್‌ಝೀ ದಂಗೆಯನ್ನೇ ಪ್ರೇರಣೆಯಾಗಿ ಪಡೆದಿದ್ದರು ಎಂದು ದೆಹಲಿ ಪೊಲೀಸರು ಗಂಭೀರ ಆರೋಪ ಮಾಡಿದ್ದಾರೆ.ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರ ಪೈಕಿ ನಾಲ್ವರನ್ನು ಶುಕ್ರವಾರ ಬಂಧಿಸಲಾಗಿತ್ತು.

ಇದು ನೇಪಾಳದಲ್ಲಿ ನಡೆದ ಜೆನ್‌ ಝೀ ಪ್ರತಿಭಟನೆಯಿಂದ ಸ್ಫೂರ್ತಿ

ಅವರನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಪೊಲೀಸರು, ‘ಇದು ನೇಪಾಳದಲ್ಲಿ ನಡೆದ ಜೆನ್‌ ಝೀ ಪ್ರತಿಭಟನೆಯಿಂದ ಸ್ಫೂರ್ತಿ ಪಡೆದ ದೊಡ್ಡ ಪಿತೂರಿಯಾಗಿದೆ. ಆರೋಪಿಗಳು ಈ ವೇಳೆ ದೇಶವಿರೋಧಿ ಹಾಗೂ ಮೋದಿ ವಿರೋಧಿ ಘೋಷಣೆ ಕೂಗಿದ್ದಾರೆ. ಮೋದಿ ವಿರುದ್ಧ ಘೋಷಣೆ ಇರುವ ಉಡುಪು ಧರಿಸಿದ್ದಾರೆ. ಆರೋಪಿಗಳ ವಿಚಾರಣೆ ಜತೆಗೆ ಡಿಜಿಟಲ್‌ ಸಾಕ್ಷ್ಯಗಳ ಕುರಿತು ಕೂಡ ತನಿಖೆ ಮಾಡಬೇಕು. ಹಾಗಾಗಿ ಬಂಧಿತರನ್ನು ಕಸ್ಟಡಿಗೆ ನೀಡಿ’ ಎಂದು ಮನವಿ ಮಾಡಿದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯ 5 ದಿನಗಳ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿತು.

ಕಳೆದ ವರ್ಷ ನೇಪಾಳದಲ್ಲಿ ಜೆನ್‌ ಝೀ (ಯುವಕರು) ಕೂಡ ಇದೇ ರೀತಿ ಸಂಸತ್ತು ಹಾಗೂ ಸಚಿವರ ಕಚೇರಿಗಳಿಗೆ ನುಗ್ಗಿ ಪ್ರತಿಭಟನೆ ನಡೆಸಿದ್ದರು.

ಬಿಜೆಪಿ ಪ್ರತಿಭಟನೆ

ಬೆಂಗಳೂರು: ದೆಹಲಿಯ ಎಐ ಶೃಂಗದಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ ಖಂಡಿಸಿ, ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಶನಿವಾರ ರಾಜ್ಯವ್ಯಾಪಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್‌ ಕೃತ್ಯವನ್ನು ದೇಶವಿರೋಧಿ ಕೃತ್ಯ ಎಂದು ಬಣ್ಣಿಸಿದ ಕಾರ್ಯಕರ್ತರು ಬೆಂಗಳೂರು, ಹುಬ್ಬಳ್ಳಿ- ಧಾರವಾಡ, ಬಳ್ಳಾರಿ, ಶಿವಮೊಗ್ಗ, ಮೈಸೂರು, ರಾಯಚೂರು, ಹಾವೇರಿ ಮೊದಲಾದ ಕಡೆ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕುವ ಯತ್ನ ಮಾಡಿದರು. ಈ ವೇಳೆ ಪೊಲೀಸರು

ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಏನಾಗಬೇಕೋ ಸೂಕ್ತ ಟೈಮಲ್ಲಿ ಆಗುತ್ತೆ : ಡಿಕೆ ಶಿವಕುಮಾರ್‌
ಶಿವಾಜಿ ಮೆರವಣಿಗೆಗೆ ಎಸೆದರು ಸ್ಟೋನ್; ಬಾಗಲಕೋಟೆಗೆ ಪ್ರಮೋದ್ ಮುತಾಲಿಕ್ ಎಂಟ್ರಿ ಬ್ಯಾನ್; ಜಿಲ್ಲಾಧಿಕಾರಿ ಆದೇಶ!