PM Modi Mysuru Visit: ಕೈ ಅಭ್ಯರ್ಥಿಗಳ ಗೆಲುವಿಗೆ ರಾಜ್ಯ ಕಾಂಗ್ರೆಸ್‌ನಿಂದ ನೂರಾರು ಕೋಟಿ ಕಪ್ಪುಹಣ, ಮೋದಿ ಆರೋಪ

By Suvarna News  |  First Published Apr 14, 2024, 6:24 PM IST

ದೇಶದಾದ್ಯಂತ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಕರ್ನಾಟಕ ಕಾಂಗ್ರೆಸ್‌ ನಿಂದ ನೂರಾರು ಕೋಟಿ ಕಪ್ಪು ಹಣ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.


ಮೈಸೂರು (ಏ.14): ಮೈಸೂರಿನಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಪ್ರಧಾನಿ ಮೋದಿ  ರಾಜ್ಯ ಸರ್ಕಾರದ ವಿರುದ್ಧ ಕಪ್ಪುಹಣದ ಗಂಭೀರ ಆರೋಪ ಮಾಡಿದ್ದಾರೆ. ದೇಶದಾದ್ಯಂತ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಕರ್ನಾಟಕ ಕಾಂಗ್ರೆಸ್‌ ನಿಂದ ನೂರಾರು ಕೋಟಿ ಕಪ್ಪು ಹಣ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ಕರ್ನಾಟಕ ಲೂಟಿ ಆಗೋದನ್ನು ತಪ್ಪಿಸಲೆಂದೇ ಮೊದಿಯೊಂದಿಗೆ ಹೋಗಲು ಕುಮಾರಸ್ವಾಮಿಗೆ ಹೇಳಿದೆ: ಹೆಚ್.ಡಿ.ದೇವೇಗೌಡ

Tap to resize

Latest Videos

ಕಾಂಗ್ರೆಸ್‌ಗೆ ಕರ್ನಾಟಕ ಎಟಿಎಂ ಇದ್ದಂತೆ ಆಗಿದೆ. ರಾಜ್ಯ ಕಾಂಗ್ರೆಸ್ ನಿಂದ ದೇಶದಾದ್ಯಂತ ಇರುವ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ಸಲುವಾಗಿ ನೂರಾರು ಕೋಟಿ ಕಪ್ಪು ಹಣ ನೀಡಿದೆ ಎಂದು ಮೋದಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್‌ ದೇಶವನ್ನು ಲೂಟಿ ಮಾಡಿದೆ. ಕರ್ನಾಟಕ ಕಾಂಗ್ರೆಸ್ ಪಕ್ಷ  ರಾಜ್ಯವನ್ನು ಲೂಟಿ ಮಾಡ್ತಾ ಇದೆ. ಖಜಾನೆ ಖಾಲಿ ಆಗ್ತಾ ಇದೆ. ರೈತರಿಗೆ ವಿದ್ಯುತ್ ಇಲ್ಲ. ಕಿಸಾನ್ ಸಮ್ಮಾನ್ ನಡಿ 4 ಸಾವಿರ ಬಂದ್ ಮಾಡಿದ್ದಾರೆ. ಬೆಂಗಳೂರು ಐಟಿ ಹಬ್ ಆದ್ರೆ ನೀರಿನ ಘೋನಗೋರ ಅಭಾವ ಅನುಭವಿಸುತ್ತಿದೆ. ಚುನಾವಣೆಗಾಗಿ ಇತರೆಡೆಗೆ ಬ್ಲಾಕ್ ಮನಿ ಹಂಚಿಕೆಯಾಗಿದೆ. ನೂರಾರು ಕೋಟಿ ರಾಜ್ಯದಿಂದ ಹೋಗಿದೆ ಎಂದು ಆರೋಪಿಸಿದರು.

ಇದೇ ಕಾರ್ಯಕ್ರಮದಲ್ಲಿ ಮೋದಿ ಜೊತೆಗೆ ವೇದಿಕೆ ಹಂಚಿಕೊಂಡಿದ್ದ ಮಾಜಿ ಪ್ರಧಾನಿ ದೇವೇಗೌಡ ಕೂಡ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಹೆಸರಲ್ಲಿ ಕೋಟಿ ಕೋಟಿ ಬಾಚುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು  ಕಾಂಗ್ರೆಸ್ ವಿರುದ್ಧ ಮಾಡಿದ್ದರು.

ತುಕ್ಡೆ ತುಕ್ಡೆ ಗ್ಯಾಂಗ್ ಜೊತೆ ಸೇರಿ ಕಾಂಗ್ರೆಸ್ ಕೂಟ ಕಟ್ಟಿದೆ. ಕಾಂಗ್ರೆಸ್ ದೇಶ ಒಡೆಯೊದ್ರಲ್ಲಿ ನಿಸ್ಸಿಮರು.  ವಿಶ್ವದಲ್ಲಿ ಭಾರತದ ಗೌರವ ಹೆಚ್ಚಾಗಬೇಕಾ? ಬೇಡವಾ? ಆದರೆ ಕಾಂಗ್ರೆಸ್ ನಾಯಕ ವಿದೇಶಕ್ಕೆ ಹೋಗಿ ಏನ್ ಮಾಡ್ತಾ ಇದ್ದಾರೆ? ಸರ್ಜಿಕಲ್ ಸ್ಟ್ರೈಕ್ ಆದಾಗ ಕಾಂಗ್ರೆಸ್ ದಾಖಲೆ ಕೇಳಿತ್ತು. ಕರ್ನಾಟಕದಲ್ಲಿ ಕಾಂಗ್ರೆಸ್ ತುಷ್ಟಿಕರಣ ಮಾಡ್ತಾ ಇದೆ. ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ. ಜನವರಿ 22 ಕ್ಕೆ 500 ವರ್ಷ ಗಳ ಕನಸು ನನಸಾಯಿತು. ಆದರೆ ಕಾಂಗ್ರೆಸ್ ರಾಮಮಂದಿರ ಪ್ರಾಣ ಪ್ರತಿಷ್ಠಿಗೆ ಹೋಗದೆ ನಮ್ಮ ಅಸ್ಮಿತೆಗೆ ಅಪಮಾನ ಮಾಡಿದ್ರು. ಇಂಡಿ ಅಲೈನ್ಸ್ ಹಿಂದೂ ಸಂಸ್ಕ್ರತಿ ವಿನಾಶ ಮಾಡುವ ಪ್ರಯತ್ನ ಮಾಡಿತು. ಎಲ್ಲಿ ತನಕ ಮೋದಿ ಇರ್ತಾರೆ. ಅಲ್ಲಿ ತನಕ ಹಿಂದೂ ಸಂಸ್ಕ್ರತಿಗೆ ಧಕ್ಕೆ ಮಾಡಲು ಸಾಧ್ಯವಿಲ್ಲ. 

click me!