ಚಿಕ್ಕಮಗಳೂರಿನಲ್ಲಿ ಜನಸ್ನೇಹಿ ಆಡಳಿತ ನೀಡುವೆ: ಶಾಸಕ ಎಚ್‌.ಡಿ.ತಮ್ಮಯ್ಯ

By Kannadaprabha News  |  First Published May 18, 2023, 1:00 AM IST

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವ ಉಳಿಸಲು ಸೌಹಾರ್ದತೆ, ಜನಸ್ನೇಹಿ ಆಡಳಿತ ನೀಡಲಾಗುವುದು ಎಂದು ನೂತನ ಶಾಸಕ ಎಚ್‌.ಡಿ. ತಮ್ಮಯ್ಯ ಭರವಸೆ ನೀಡಿದರು. 


ಚಿಕ್ಕಮಗಳೂರು (ಮೇ.18): ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವ ಉಳಿಸಲು ಸೌಹಾರ್ದತೆ, ಜನಸ್ನೇಹಿ ಆಡಳಿತ ನೀಡಲಾಗುವುದು ಎಂದು ನೂತನ ಶಾಸಕ ಎಚ್‌.ಡಿ. ತಮ್ಮಯ್ಯ ಭರವಸೆ ನೀಡಿದರು. ಶಾಸಕರಾದ ನಂತರ ಮೊದಲ ಬಾರಿಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾನ್ಯ ಜನರು ತಮ್ಮ ಕೆಲಸಗಳಿಗಾಗಿ ಯಾವುದೇ ಕಚೇರಿಗೆ ಬಂದರು ಲಂಚಮುಕ್ತ ರಾಗಿ ಕೆಲಸ ಮಾಡಬೇಕೆಂದರು. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಎಲ್ಲಾ ಇಲಾಖೆಗಳು ಭ್ರಷ್ಠಾಚಾರದಲ್ಲಿ ನಡೆಯುತ್ತಿದ್ದು, ಇನ್ನು ಮುಂದೆ ಇದಕ್ಕೆಲ್ಲಾ ವಿರಾಮ ಹಾಕಬೇಕು. ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿ ಜನರ ಕೆಲಸಗಳಿಗೆ ಸ್ಪಂದಿಸಿ ಶೀಘ್ರ ವಿಲೇವಾರಿ ಮಾಡಬೇಕೆಂದು ತಿಳಿಸಿದರು.

ಅಂತರ್ಜಲ ವೃದ್ಧಿಗೆ ಸಕಲ ವ್ಯವಸ್ಥೆ ಕೈಗೊಳ್ಳಲಾಗುವುದು. ನೀರಾವರಿ ಯೋಜನೆಗಳನ್ನು ಶೀಘ್ರವೇ ತಂದು ಬಯಲು ಭಾಗದಲ್ಲಿ ಅನುಷ್ಠಾನ ಮಾಡಿ ಒಂದು ವರ್ಷದಲ್ಲಿ ಪೂರ್ಣ ಗೊಳಿಸುವಂತೆ ಅಧಿಕಾರಿಗಳು ಮತ್ತು ಸರ್ಕಾರದ ಮೇಲೆ ಒತ್ತಡ ಹಾಕುತ್ತೇನೆ. ಜಿಲ್ಲಾ ಕೇಂದ್ರದಲ್ಲಿ ಸುಮಾರು 5 ಎಕರೆ ಪ್ರದೇಶವನ್ನು ಗುರುತು ಮಾಡಿ ಡಾ.ಬಿ.ಆರ್‌ ಅಂಬೇಡ್ಕರ್‌ ಭವನ ನಿರ್ಮಾಣ ಮಾಡುವ ಜೊತೆಗೆ ಬುದ್ಧ ವಿಹಾರ ನಿರ್ಮಾಣ ಭರವಸೆ ನೀಡಿದ ತಮ್ಮಯ್ಯ ಅವರು, ಬುದ್ಧ, ಬಸವಣ್ಣ, ಅಂಬೇಡ್ಕರ್‌, ಸಂತ ಶಿಶುನಾಳ ಶರೀಫ, ಕನಕದಾಸ ಮುಂತಾದವರ ತತ್ವ ಆದರ್ಶಗಳ ಪುಸ್ತಕಗಳ ಸಂಗ್ರಹಾಲಯದ ಮ್ಯೂಸಿಯಂನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

Tap to resize

Latest Videos

undefined

ದತ್ತರವರ ನೇತೃತ್ವದಲ್ಲಿ ಕಾರ್ಯಕರ್ತರ ಸಜ್ಜುಗೊಳಿಸಲು ಸಂಸದ ಪ್ರಜ್ವಲ್‌ ಕರೆ

ಡೀಮ್ಡ್‌ ಅರಣ್ಯ ರದ್ದುಗೊಳಿಸುವಂತೆ ಸಮಗ್ರ ಅಧ್ಯಯನ ನಡೆಸಿ ಸರ್ಕಾರ ರಚನೆಯಾದ ಬಳಿಕ ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಸರ್ವ ಪಕ್ಷಗಳ ಮುಖಂಡರ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿ ಕರೆದುಕೊಂಡು ಹೋಗಿ ಈ ಕುರಿತು ಪುನರಾವಲೋಕನ ಸಭೆ ನಡೆಸುವಂತೆ ಮನವಿ ಮಾಡಲಾಗುವುದು ಎಂದರು. ತಾವು ಹಿಂದೆ ನಗರಸಭೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕೈಗೊಂಡ ಕಾಮಗಾರಿಗಳ ಗುಣಮಟ್ಟದ ಬಗ್ಗೆ, ಮಾಜಿ ಶಾಸಕರ ಅವಧಿಯಲ್ಲಿ ನಡೆದಿರುವ ಎಲ್ಲಾ ಕಾಮಗಾರಿಗಳನ್ನು ಸಮಗ್ರ ತನಿಖೆ ನಡೆಸಲು ಒತ್ತಾಯಿಸುತ್ತೇನೆ, ಬಸವನಹಳ್ಳಿ ಕೆರೆ ಅಭಿವೃದ್ಧಿಯಲ್ಲಿ ನಡೆದಿರುವ ಅವ್ಯವಹಾರ ಬಯಲಿಗೆ ತಂದು ಸಾರ್ವಜನಿಕರಿಗೆ ಕೊಟ್ಟಮಾತನ್ನು ಉಳಿಸುತ್ತೇನೆಂದರು. 

ಕಳಪೆ ಕಾಮಗಾರಿಗಳಿಗೆ ಅವಕಾಶ ಇಲ್ಲ, ಈ ರೀತಿಯ ಕಾಮಗಾರಿ ಮಾಡಿರುವುದು ಕಂಡು ಬಂದರೆ ಎಷ್ಟೇ ಪ್ರಭಾವಿ ಇದ್ದರೂ ಕಠಿಣ ಕ್ರಮ ಜರುಗಿಸಲಾಗುವುದು ಎಂದ ಅವರು, ಸರ್ವಋುತು ರಸ್ತೆ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು. ಶಿಥಲೀಕರಣ ಘಟಕ ಸ್ಥಾಪಿಸಿ ರೈತರ ಉತ್ಪನ್ನಗಳ ರಕ್ಷಣೆಗೆ ಮುಂದಾಗುತ್ತೇವೆ. ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಲಹಾ ಸಭೆ ಕರೆದು ಚರ್ಚಿಸಿ ಕ್ಷೇತ್ರದ ಜನತೆ ಬದಲಾವಣೆ ಬಯಸಿ ದ್ದು, ಮತದಾರರ ನಿರೀಕ್ಷೆಯಂತೆ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ಬೆಂಬಲ ವ್ಯಕ್ತಪಡಿಸಿದ ಪ್ರಗತಿಪರ ಸಂಘಟನೆಗಳು, ಸಿಪಿಐ, ರೈತ ಸಂಘ, ದಲಿತ ಸಂಘಟನೆ, ಜೆಡಿಎಸ್‌ ಸೇರಿದಂತೆ ಪ್ರತ್ಯಕ್ಷ, ಪರೋಕ್ಷವಾಗಿ ಬೆಂಬಲಿಸಿದೆ. ಈ ಜಯಕ್ಕೆ ಕಾರಣರಾದ ಪಕ್ಷದ ಎಲ್ಲಾ ನಾಯಕರಿಗೆ ಅಭಿನಂದಿಸಿದರು.

ಭರವಸೆ ಈಡೇ​ರಿ​ಸುವ ಹೊಣೆ ಕಾಂಗ್ರೆಸ್‌ ಮೇಲಿ​ದೆ: ಕಾಗೋಡು ತಿಮ್ಮ​ಪ್ಪ

ನಾನು ಸಾಮಾನ್ಯ ಅಭ್ಯರ್ಥಿ ಕ್ಷೇತ್ರದಲ್ಲಿ ನೇರ ಸಂಪರ್ಕ ಇಟ್ಟುಕೊಂಡಿರುತ್ತೇವೆ ಜನ ಸಾಮಾನ್ಯರು ತಮ್ಮ ಕೆಲಸಗಳಿಗಾಗಿ ನನ್ನ ದೂರವಾಣಿ ಸಂಪರ್ಕಿಸಿದರೆ ಸ್ಪಂದಿಸುತ್ತೇನೆ. ಈವರೆಗೆ ನಾನು ಯಾವುದೇ ಗುತ್ತಿಗೆದಾರನಾಗಿ ಕೆಲಸ ಮಾಡಿಲ್ಲ ಮುಂದೆಯೂ ಮಾಡುವುದಿಲ್ಲ. ಬಿಜೆಪಿ ಶಾಸಕರ ಅವಧಿಯಲ್ಲಿ ಆಗಿರುವ ಕಾಮಗಾರಿಗಳಂತೆ ಆಗಬಾರದು ಗುಣಮಟ್ಟದ ಕಾಮಗಾರಿಗೆ ಆದ್ಯತೆ ಕೊಡುತ್ತೇನೆ ಎಂದರು. ಸುದ್ಧಿಗೋಷ್ಠಿಯಲ್ಲಿ ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಜಿಲ್ಲಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಎಂ.ಎಲ್‌ ಮೂರ್ತಿ, ಜಿಪಂ ಮಾಜಿ ಆಧ್ಯಕ್ಷ ಕೆ. ಮಹಮ್ಮದ್‌, ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಪಿ. ಮಂಜೇಗೌಡ, ಬಿ.ಎಚ್‌. ಹರೀಶ್‌, ಮಲ್ಲೇಶ್‌ಸ್ವಾಮಿ, ತನೂಜ್‌ ಕುಮಾರ್‌, ರೂಬಿನ್‌ ಮೊಸಸ್‌, ರವೀಶ್‌ ಬಸಪ್ಪ ಉಪಸ್ಥಿತರಿದ್ದರು.

click me!