ಪಾಕಿಸ್ತಾನ ಜಿಂದಾಬಾದ್ ಎಂದು ಯಾರೇ ಹೇಳಿದರೂ ಅವರನ್ನು ಭೂಮಿ ಒಳ ಹೊಕ್ಕರೂ ಬಿಡುವುದಿಲ್ಲ, ಎಫ್ಎಸ್ಎಲ್ ವರದಿ ಬರುತ್ತಿದ್ದಂತೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಶಿವರಾಜ ತಂಗಡಗಿ ಹೇಳಿದರು.
ಕೊಪ್ಪಳ (ಮಾ.06): ಪಾಕಿಸ್ತಾನ ಜಿಂದಾಬಾದ್ ಎಂದು ಯಾರೇ ಹೇಳಿದರೂ ಅವರನ್ನು ಭೂಮಿ ಒಳ ಹೊಕ್ಕರೂ ಬಿಡುವುದಿಲ್ಲ, ಎಫ್ಎಸ್ಎಲ್ ವರದಿ ಬರುತ್ತಿದ್ದಂತೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಶಿವರಾಜ ತಂಗಡಗಿ ಹೇಳಿದರು. ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಕೆಲವು ಡುಪ್ಲಿಕೇಟ್ ದೇಶಭಕ್ತರಿದ್ದಾರೆ. ಪಾಕಿಸ್ತಾನ್ ಜಿಂದಾಬಾದ್ ಎಂದ ವಿಚಾರದಲ್ಲಿ ಡುಪ್ಲಿಕೇಟ್ ದೇಶಭಕ್ತರು ಏನೇನೋ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ನಾವೂ ದೇಶ ಭಕ್ತರೇ. ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳುವವರನ್ನು ನಮ್ಮ ಸರ್ಕಾರ ಅಷ್ಟು ಸುಲಭವಾಗಿ ಬಿಡೋದಿಲ್ಲ. ಈಗಾಗಲೇ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಎಫ್ಎಸ್ಎಲ್ ವರದಿ ಬಂದ ನಂತರ ಯಾರು ಅಂದಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಆಗ ಕ್ರಮ ವಹಿಸಲಾಗುವುದು ಎಂದರು. ನಮ್ಮದು ಕಾಂಗ್ರೆಸ್ ಪಕ್ಷ, ನಮ್ಮದು ದೇಶಕ್ಕಾಗಿ ಜೀವ ಕೊಟ್ಟ ಪಕ್ಷ. ಪಾಕಿಸ್ತಾನ, ದೇವರ ಹೆಸರಿನಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಇಂಥವರಿಂದ ಐದು ದಿನ ಸದನ ಹಾಳಾಯಿತು. ಪಾಕಿಸ್ತಾನ ಜಿಂದಾಬಾದ್ ಎಂದವರನ್ನು ಸರ್ಕಾರ ರಕ್ಷಣೆ ಮಾಡುತ್ತದೆ ಎನ್ನುವಂತೆ ಮಾತನಾಡುತ್ತಾರೆ. ಆದರೆ, ಅಂಥವರನ್ನು ಬಿಡುವ ಪ್ರಶ್ನೆ ಇಲ್ಲ. ಆದರೆ, ಆ ಕುರಿತು ವರದಿ ಬಂದ ತಕ್ಷಣ ಕ್ರಮ ಎಂದರು.
undefined
ಕಾಂತರಾಜ್ ವರದಿ ಸಿಎಂ ಅಂತಿಮ ನಿರ್ಧಾರ: ಕಾಂತರಾಜ್ ವರದಿಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂತರಾಜ್ ವರದಿಯಲ್ಲಿ ಏನೇನು ಇದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಹೀಗಾಗಿ ಮೊದಲೇ ವರದಿ ಕುರಿತು ಚರ್ಚೆ ಮಾಡುವುದು ಸರಿಯಲ್ಲ.
ರಾಜಕೀಯ ಸಂಸ್ಕೃತಿ ಬದಲಾಯಿಸಿದ ಪ್ರಧಾನಿ ಮೋದಿ: ಜೆ.ಪಿ.ನಡ್ಡಾ
ಕಾಂತರಾಜ ವರದಿ ಕಸದ ಬುಟ್ಟಿಯಲ್ಲಿತ್ತು ಅದನ್ನು ಸರ್ಕಾರ ಸ್ವೀಕರಿಸಿದೆ ಎಂದು ಕಾಂಗ್ರೆಸ್ ಪಕ್ಷದವರೇ ವಿರೋಧಿಸುತ್ತಿದ್ದಾರಲ್ಲ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ತಂಗಡಗಿ, ಶಾಮನೂರು ಶಿವಶಂಕರಪ್ಪ ನಮ್ಮ ಪಕ್ಷದ ಹಿರಿಯ ಶಾಸಕರು. ಅವರು ಏನೇ ಹೇಳಲಿ ಅದರ ಬಗ್ಗೆ ಚರ್ಚೆ ಮಾಡಲು ಬಯಸುವುದಿಲ್ಲ. ಆದರೆ, ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಕಾಂತರಾಜ್ ವರದಿ ಸ್ವೀಕರಿಸಿದ್ದೇನೆ. ವರದಿಗೆ ಸಂಬಂಧಿಸಿದಂತೆ ಮುಂದಿನ ನಿರ್ಧಾರ ಸಿಎಂ ಸಿದ್ಧರಾಮಯ್ಯನವರೇ ಕೈಗೊಳ್ಳಲಿದ್ದಾರೆ ಎಂದು ಪುನರುಚ್ಚರಿಸಿದರು.