ದೇವರನ್ನು ನಂಬಿಕೊಂಡಿರುವ ನಮ್ಮ ಕುಟುಂಬಕ್ಕೆ ದೇವರ ಅನುಗ್ರಹದಿಂದ ಶುಭ ಸುದ್ದಿ ಬಂದಿದೆ. ನಮ್ಮ ಕುಟುಂಬದ ಎಲ್ಲಾ ಸದಸ್ಯರೂ ದೇವರನ್ನು ನಂಬಿರುವಾಗ ಶ್ರೀ ಗಣೇಶ ಇವತ್ತು ಪ್ರಜ್ವಲ್ ರೇವಣ್ಣನಿಗೆ ಒಂದು ಒಳ್ಳೆಯ ಸುದ್ದಿ ಕೊಟ್ಟಿದ್ದಾನೆ ಎಂದು ಶಾಸಕ ಎಚ್.ಡಿ.ರೇವಣ್ಣ ಅವರು ಸುಪ್ರೀಂಕೋರ್ಟ್‌ನಲ್ಲಿ ಮಧ್ಯಂತರ ತಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.
ಹೊಳೆನರಸೀಪುರ (ಸೆ.20): ದೇವರನ್ನು ನಂಬಿಕೊಂಡಿರುವ ನಮ್ಮ ಕುಟುಂಬಕ್ಕೆ ದೇವರ ಅನುಗ್ರಹದಿಂದ ಶುಭ ಸುದ್ದಿ ಬಂದಿದೆ. ನಮ್ಮ ಕುಟುಂಬದ ಎಲ್ಲಾ ಸದಸ್ಯರೂ ದೇವರನ್ನು ನಂಬಿರುವಾಗ ಶ್ರೀ ಗಣೇಶ ಇವತ್ತು ಪ್ರಜ್ವಲ್ ರೇವಣ್ಣನಿಗೆ ಒಂದು ಒಳ್ಳೆಯ ಸುದ್ದಿ ಕೊಟ್ಟಿದ್ದಾನೆ ಎಂದು ಶಾಸಕ ಎಚ್.ಡಿ.ರೇವಣ್ಣ ಅವರು ಸುಪ್ರೀಂಕೋರ್ಟ್‌ನಲ್ಲಿ ಮಧ್ಯಂತರ ತಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಪಟ್ಟಣದ ತಮ್ಮ ನಿವಾಸದಲ್ಲಿ ಮಾಧ್ಯಮದ ಜತೆ ಮಾತನಾಡಿ, ಇವತ್ತು ಬಂದಿರುವ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಸ್ವಾಗತ ಮಾಡುತ್ತೇವೆ, ಏನಿದೆ ಅಂತಾ ಇನ್ನೂ ಡಿಟೇಲ್ ಆಗಿ ಗೊತ್ತಿಲ್ಲ ನನಗೆ, ಶ್ರೀ ಗಣೇಶ ಇವತ್ತು ಪ್ರಜ್ವಲ್ ರೇವಣ್ಣನಿಗೆ ಒಂದು ಒಳ್ಳೆಯ ಸುದ್ದಿ ಕೊಟ್ಟಿದೆ ಎಂದರು.
ದೇವೇಗೌಡರು ರಾಜ್ಯದ ನೀರಾವರಿ ಮಂತ್ರಿಯಾಗಿ ಅವರದ್ದು ಏನು ಕೊಡುಗೆ ಇದೆ ಅನ್ನೋದನ್ನ ಕಾಲವೇ ತೀರ್ಮಾನ ಮಾಡುವ ದಿನ ಬರುತ್ತೆ. ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ ಏನು ಹೋರಾಟ ಮಾಡಿದ್ದು, ಇವತ್ತು ಕೆಲವರು ಪ್ರಧಾನಮಂತ್ರಿ ಬಳಿ ಹೋಗಿ ದೇವೇಗೌಡರು ಮಾತನಾಡಲಿ ಎನ್ನುತ್ತಾರೆ, ಆದರೆ ಟ್ರಿಬ್ಯೂನಲ್ ಮಾಡುವಂತೆ ಜಡ್ಜ್‌ಮೆಂಟ್ ಬಂದಾಗ ಕಾಂಗ್ರೆಸ್‌ನವರು ಸ್ವಾಗತ ಮಾಡಿದ್ರು ಎಂದು ಹಿಂದಿನ ಸಂಗತಿಯನ್ನು ಮೆಲುಕು ಹಾಕಿದರು.
ಚೈತ್ರಾ ಕುಂದಾಪುರ ವಿರುದ್ಧ ಮತ್ತೊಂದು ಕೇಸ್: ಬಟ್ಟೆ ಅಂಗಡಿ ಹಾಕಿಸಿಕೊಡುತ್ತೇನೆಂದು 5 ಲಕ್ಷ ವಂಚನೆ
ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಸಮಿತಿಯ ತೀರ್ಪಿನ ವಿಚಾರ ಕುರಿತಂತೆ ಮಾತನಾಡಿ, ಇದು ನಮ್ಮ ದುರಾದೃಷ್ಟ, ಕಳೆದ ಎರಡು ತಿಂಗಳಿನಿಂದ ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ, ನಮ್ಮ ರೈತರ ಬೆಳೆಗಳಿಗೆ ಏನು ಮಾಡುತ್ತಾರೋ ಗೊತ್ತಿಲ್ಲ ಮತ್ತು ನಮ್ಮ ಜಿಲ್ಲೆಯಲ್ಲಿ ಶೇ. ೮೫ರಿಂದ ೯೦ರಷ್ಟು ಬೆಳೆ ನಾಶವಾಗಿದೆ ಎಂದು ಬೇಸರದಿಂದ ನುಡಿದರು. ನೀರಾವರಿ ಪ್ರದೇಶದಲ್ಲೂ ಬೆಳೆ ನಾಶವಾಗಿದೆ, ಮೊದಲು ರೈತರಿಗೆ ಪರಿಹಾರ ಕೊಡಿ ಎಂಬುದರ ಬಗ್ಗೆ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದರು.
ಸುಪ್ರೀಂ ಕೋರ್ಟ್ ಆದೇಶ ನೀಡಿದರೆ ನಾವೇನು ಮಾಡಬೇಕು: ಬೊಮ್ಮಾಯಿ ವಿರುದ್ಧ ಡಿಕೆಶಿ ಗರಂ
ಗ್ಯಾರಂಟಿ ಬದಲು ಮೊದಲು ರೈತರಿಗೆ ಪರಿಹಾರ ನೀಡಿ, ಅವರನ್ನು ಉಳಿಸಿಕೊಳ್ಳಬೇಕಿದೆ. ಎರಡು ತಿಂಗಳಿಂದ ನೀರು ಬಿಟ್ಟು, ಸರ್ವ ಸದಸ್ಯರ ಸಭೆಯನ್ನು ಕರೆಯುತ್ತಾರೆ. ಸ್ಥಳೀಯ ಶಾಸಕರಿಗೆ 24 ಗಂಟೆ ಏನು ಆಗಿದೆ ಅಂತ ಗೊತ್ತಿರುತ್ತೆ. ಆದರೆ ಮಾಜಿ ಮುಖ್ಯಮಂತ್ರಿಗಳನ್ನು ಮಾತ್ರ ಕರೆಯುತ್ತಾರೆ, ಪಾಪ ಅವರ ಪರಿಸ್ಥಿತಿ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು. ಕೂಡಲೇ ವಿಧಾನಸಭೆ ಅಧಿವೇಶನ ಕರೆದು ಒಂದು ರೆಸ್ಯೂಲೇಷನ್ ಮಾಡಬೇಕಾಗುತ್ತೆ ಮತ್ತು ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಬೇಕು. ಸೆ.21ರಂದು ನ್ಯಾಯಾಲಯಕ್ಕೂ ಇಲ್ಲಿನ ಪರಿಸ್ಥಿತಿ ಬಗ್ಗೆ ತಿಳಿಸಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದರು.