Kolar: ವರ್ತೂರು ಪ್ರಕಾಶ್ ಹಾಗೂ ಮಂಜುನಾಥ ಗೌಡ ಬಿಜೆಪಿ ಸೇರ್ಪಡೆಗೆ ವಿರೋಧ!

By Govindaraj S  |  First Published May 7, 2022, 7:53 PM IST

ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಇನ್ನು ಹಿನ್ನೆಡೆಯಲ್ಲಿದೆ. ಕೆಲವು ಕ್ಷೇತ್ರಗಳಲಂತೂ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಯಾರು ಅಂತ ದುರ್ಭಿನ್ ಹಾಕಿ ಹುಡುಕಿದ್ರು ಸಿಗೋದಿಲ್ಲ. ಈಗಿರುವ ಇಬ್ಬರು ಪ್ರಮುಖ ಮಾಜಿ ಶಾಸಕರು ಬಿಜೆಪಿ ಪಕ್ಷಕ್ಕೆ ಸೇರೋದಕ್ಕೆ ಮುಂದೇ ಬಂದ್ರು ಸಹ ಮೂಲ ಬಿಜೆಪಿ ಗರು ಮಾತ್ರ ಬೇಡವೇ ಬೇಡ ಅಂತಿದ್ದಾರೆ.


ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.

ಕೋಲಾರ (ಮೇ.07): ಜಿಲ್ಲೆಯಲ್ಲಿ ಬಿಜೆಪಿ (BJP) ಪಕ್ಷ ಇನ್ನು ಹಿನ್ನೆಡೆಯಲ್ಲಿದೆ. ಕೆಲವು ಕ್ಷೇತ್ರಗಳಲಂತೂ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಯಾರು ಅಂತ ದುರ್ಭಿನ್ ಹಾಕಿ ಹುಡುಕಿದ್ರು ಸಿಗೋದಿಲ್ಲ. ಈಗಿರುವ ಇಬ್ಬರು ಪ್ರಮುಖ ಮಾಜಿ ಶಾಸಕರು (Ex MLAs) ಬಿಜೆಪಿ ಪಕ್ಷಕ್ಕೆ ಸೇರೋದಕ್ಕೆ ಮುಂದೇ ಬಂದ್ರು ಸಹ ಮೂಲ ಬಿಜೆಪಿಗರು ಮಾತ್ರ ಬೇಡವೇ ಬೇಡ ಅಂತಿದ್ದಾರೆ. ಅದ್ಯಾಕೆ ಅನ್ನೋ ಕುತೂಹಲಕ್ಕೆ ಈ ಸ್ಟೋರಿ ನೋಡಿ. ಬಿಜೆಪಿ ಸೇರ್ಪಡೆಗೆ ಕಾರ್ಯಕರ್ತರ ಜೊತೆ ಸಭೆ ನಡೆಸುತ್ತಿರುವ ಮಾಜಿ ಶಾಸಕರುಗಳು ಸೇರ್ಪಡೆಗೂ ಮುನ್ನ ಚಿಕ್ಕ ತಿರುಪತಿಯ ಶ್ರೀ ಪ್ರಸನ್ನ ವೆಂಕಟೇಶ್ವರ ದೇವರಿಗೆ ವಿಶೇಷ ಪೂಜೆ. ಇವರು ಬೇಡವೇ ಬೇಡ ಎಂದು ಒಂದೆಡೆ ವಿರೋಧ ಮಾಡ್ತಿರುವ ಮೂಲ ಬಿಜೆಪಿಗರು. ಹೌದು! ವಿಧಾನಸಭಾ ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ ಇರುವಾಗಲೇ ಕೋಲಾರ ಜಿಲ್ಲೆಯಲ್ಲಿ ರಾಜಕೀಯ ಕೇಸರೆರೆಚಾಟ ಶುರುವಾಗಿದೆ. 

Latest Videos

undefined

ಕಳೆದ ಚುನಾವಣೆಯಲ್ಲಿ ಸೋಲುಂಡಿದ್ದ ಮಾಲೂರು ಕ್ಷೇತ್ರದ ಮಾಜಿ ಶಾಸಕ ಮಂಜುನಾಥ್ ಗೌಡ (Manjunath Gowda) ಹಾಗೂ ಕೋಲಾರ ಕ್ಷೇತ್ರದ ವರ್ತೂರು ಪ್ರಕಾಶ್ (Varthur Prakash) ಇಬ್ಬರಿಗೂ ರಾಜಕೀಯದಲ್ಲಿ ಅಳಿವು ಉಳಿವಿನ ಪ್ರಶ್ನೆ ಆಗಿದ್ದು, ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗಲು ತುದಿಗಾಲಲ್ಲಿ ನಿಂತಿದ್ದಾರೆ. ಕೋಲಾರ ಉಸ್ತುವಾರಿ ಸಚಿವರಾದ ಮುನಿರತ್ನಂ (Munirathna) ಹಾಗೂ ಸಂಸದ ಮುನಿಸ್ವಾಮಿ (Muniswamy) ಇಬ್ಬರನ್ನು ಬಳಸಿಕೊಂಡು ಸಿಎಂ ಹಾದಿಯಲ್ಲಿ ಹಿರಿಯ ನಾಯಕರಿಗೆ ದುಂಬಾಲು ಬಿದ್ದಿದ್ದಾರೆ. ಇಂದು ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (Bsavaraj Baommai) ಹಾಗೂ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (Nali Kumar Katil) ನೇತೃತ್ವದಲ್ಲಿ ಇವರಿಬ್ಬರು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗಿದ್ದು, ಜಿಲ್ಲೆಯ ಮೂಲ ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಕೋಲಾರ ಬಿಜೆಪಿಯಲ್ಲಿ ಕೋಲಾಹಲ, MP ಮುನಿಸ್ವಾಮಿ ನಡೆಗೆ ಸಿಡಿದೆದ್ದ ಮೂಲ ಬಿಜೆಪಿಗರು

ಹೌದು! ಕೋಲಾರ ಜಿಲ್ಲೆಯಲ್ಲಿ ಮೊದಲಿನಿಂದಲೂ ಕಾಂಗ್ರೆಸ್ ಹಾಗೂ ಜೆಡಿಎಸ್ ನದ್ದೇ ಹೆಚ್ಚಿನ ಪ್ರಾಬಲ್ಯ ಇರೋದ್ರಿಂದ ಬಿಜೆಪಿ ಪಕ್ಷದಲ್ಲಿ ಟಿಕೆಟ್ ಕೇಳೋರು ಸಹ ಇರ್ಲಿಲ್ಲ. ಆದರೆ ಕಾಲ ಬದಲಾದಂತೆ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರಿಕ್ಕೆ ಬಂದ ಬಳಿಕ ಜಿಲ್ಲೆಯಲ್ಲೂ ಬಿಜೆಪಿ ಪಕ್ಷದ ಗಾಳಿ ಬೀಸಲು ಪ್ರಾರಂಭವಾಗಿದೆ. ಅಧಿಕಾರ ಇಲ್ಲದೆ ಇರುವ ಸಮಯದಿಂದಲೂ ಅದೆಷ್ಟೋ ಜನರು ಬಿಜೆಪಿ ಪಕ್ಷಕ್ಕಾಗಿ ದುಡಿದಿದ್ದಾರೆ. ಈಗ ಅದರಲ್ಲಿ ಕೆಲವರು ಮಾಲೂರು ಹಾಗೂ ಕೋಲಾರ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳು ಆಗಿದ್ದು, ಇವರಿಬ್ಬರು ದಿಢೀರನೆ ಸೇರಿಸಿಕೊಂಡ್ರೆ ಏನು ಅರ್ಥ,ಅಧಿಕಾರ ಇಲ್ಲದೆ ಇರೋ ಸಮಯದಿಂದಲೂ ನಾವು ಅವಮಾನಗಳನ್ನು ಸಹಿಸಿಕೊಂಡು ದುಡಿದಿದ್ದೇವೆ. ಇವರಿಬ್ಬರು ರಾಜಕೀಯ ನೆಲೆ ಬೇಕಾಗಿದೆ. ಅಧಿಕಾರದ ಆಸೆಗಾಗಿ ಮಂಜುನಾಥ್ ಗೌಡ ಹಾಗೂ ವರ್ತೂರು ಪ್ರಕಾಶ್ ಬಿಜೆಪಿ ಪಕ್ಷಕ್ಕೆ ಸೇರ್ತಿದ್ದಾರೆ. 

ಮಾಜಿ ಸಚಿವ ಬಿಜೆಪಿ ಸೇಪ೯ಡೆಯ ಬಹಿರಂಗ ಸಭೆಗೆ ಬಂದವರಿಗೆ ಚಿಕನ್-ಮಟನ್ ಬಿರಿಯಾನಿ

ಅವರನ್ನು ಸೇರಿಸಿಕೊಂಡು ಟಿಕೆಟ್ ನೀಡಿದರೆ ನಾವು ತಕ್ಕ ಪಾಠ ಕಲಿಸುತ್ತೇವೆ ಎಂದು ರಾಜ್ಯ ಹಾಗೂ ಜಿಲ್ಲೆಯ ಬಿಜೆಪಿ ನಾಯಕರಿಗೆ ಮೂಲ ಬಿಜೆಪಿಗರು ಎಚ್ಚರಿಕೆ ನೀಡ್ತಿದ್ದಾರೆ. ಒಟ್ಟಿನಲ್ಲಿ ಪಕ್ಷೇತರವಾಗಿ ಸ್ಪರ್ಧಿಸುತ್ತಿದ್ದ ವರ್ತೂರು ಪ್ರಕಾಶ್ ಹಾಗೂ ಜೆಡಿಎಸ್ ಪಕ್ಷದಿಂದ ಸ್ಪರ್ದಿಸುತ್ತಿದ್ದ ಮಂಜುನಾಥ್ ಗೌಡ ಇಬ್ಬರಿಗೂ ರಾಜಕೀಯ ಸ್ಥಾನಮಾನ ಬೇಕಾಗಿದೆ. ಇವರಿಬ್ಬರಿಗೂ ಈ ಬಾರಿಯ ಚುನಾವಣೆ ಅಳಿವು ಉಳಿವಿನ ಪ್ರಶ್ನೆ ಆಗಿದ್ದು, ಹೇಗಾದ್ರು ಮಾಡಿ ಬಿಜೆಪಿ ಪಕ್ಷದಿಂದ ಟಿಕೆಟ್ ಪಡೆದು ಗೆಲ್ಲಬೇಕು ಅಂತ ತೀರ್ಮಾನಿಸಿದ್ದಾರೆ. ಆದ್ರೆ ಇಬರಿಬ್ಬರಿಗೂ ಸೇರ್ಪಡೆಯ ಮುನ್ನವೇ ಅಡಚಣೆ ಎದುರಾಗಿದ್ದು, ಒಂದು ವೇಳೆ ಇವರಿಬ್ಬರು ಬಿಜೆಪಿ ಪಕ್ಷದ ಅಭ್ಯರ್ಥಿಗಳಾದ್ರೆ ಮೂಲ ಬಿಜೆಪಿಗರೇ ಚುನಾವಣೆಯಲ್ಲಿ ಉಲ್ಟಾ ಹೊಡೆಯೊದ್ರಲ್ಲಿ ಅನುಮಾನವಿಲ್ಲ.

click me!