ಇಡಿ ಸುಳಿಗೆ ಸಿಲುಕಿ 50 ದಿನಗಳ ಬಳಿಕ ಬೆಂಗಳೂರಿಗೆ ಆಗಮಿಸಿರುವ ಡಿಕೆ ಶಿವಕುಮಾರ್ ಅವರನ್ನು ಸಿದ್ದರಾಮಯ್ಯ ಭೇಟಿ ಮಾಡುತ್ತಾರೆ ಅನ್ಕೊಂಡಿದ್ರು. ಆದ್ರೆ, ಅಚ್ಚರಿ ಎಂಬಂತೆ ಸಿದ್ದರಾಮಯ್ಯ ಅವರು ಗದಗನಿಂದ ನೇರವಾಗಿ ಬೆಂಗಳೂರಿನ ಸದಾಶಿವನಗರದಲ್ಲಿರವ ಪರಮೇಶ್ವರ್ ಅವರ ಮನೆ ದಿಢೀರ್ ಭೇಟಿ ನೀಡಿದ್ದು ಅಚ್ಚರಿಗೆ ಕಾರಣವಾಗಿದೆ.
ಬೆಂಗಳೂರು, [ಅ.26]: ಕಾಂಗ್ರೆಸ್ ಪಕ್ಷ 2013ರಲ್ಲಿ ಅಧಿಕಾರ ಹಿಡಿದಾಗಿನಿಂದಲೂ ಸಿದ್ದರಾಮಯ್ಯ ಮತ್ತು ಜಿ. ಪರಮೇಶ್ವರ್ ಮಧ್ಯೆ ಶೀತಲ ಸಮರ ನಡೆಯುತ್ತಲೇ ಇದೆ ಎನ್ನುವುದು ಜಗಜ್ಜಾಹೀರು.
ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಡಾ.ಜಿ. ಪರಮೇಶ್ವರ್ ಮತ್ತು ಸಿದ್ದು ನಡುವಿನ ಆಂತರಿಕ ತಿಕ್ಕಾಟ ವಿಪಕ್ಷ ನಾಯಕ ಸ್ಥಾನದಿಂದಾಗಿ ಮತ್ತೆ ಪ್ರಾರಂಭವಾಗಿದ್ದು, ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೆ ಬಣ ರಾಜಕೀಯ ಉದಯಿಸುವ ಸುಳಿವು ದೊರೆತಿತ್ತು.
ಸಿದ್ದು, ಪರಂ ನಡುವೆ ಮುನಿಸು ಇದ್ದದ್ದು ನಿಜ: ಮಾಜಿ ಕೇಂದ್ರ ಸಚಿವ
ಇತ್ತೀಚೆಗೆ ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ಅವರಿಗೆ ಸೋನಿಯಾ ಗಾಂಧಿ ಅವರನ್ನು ಭೇಟಿ ಆಗಲು ಸಾಧ್ಯವಾಗಿರಲಿಲ್ಲ, ಆದರೆ ಆ ನಂತರ ತೆರಳಿದ್ದ ಪರಮೇಶ್ವರ್ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದು ಬಣ ರಾಜಕೀಯಕ್ಕೆ ಪೂರಕವಾಗಿತ್ತು.
ಅಷ್ಟೇ ಅಲ್ಲದೇ ಇತ್ತೀಚೆಗೆ ವಿಪಕ್ಷ ನಾಯಕನ ಆಯ್ಕೆ ಸಂಬಂಧ ಕರೆಯಲಾಗಿದ್ದ ಕಾಂಗ್ರೆಸ್ ಶಾಸಕಾಂಗ ಸಭೆಗೆ ಪರಮೇಶ್ವರ್ ಗೈರಾಗುವ ಮೂಲಕ ಸಿದ್ದರಾಮಯ್ಯ ಅವರ ಮೇಲಿನ ಸಿಟ್ಟು ಹೊರಹಾಕಿದ್ದರು.
ಸಿಎಂ ಕನಸು ಕಂಡ ಡಿಸಿಎಂ ಪರಮೇಶ್ವರ್‌ಗೆ ಸಿದ್ದರಾಮಯ್ಯ ಟಾಂಗ್
ಆದ್ರೆ, ಇದೀಗ ಅಚ್ಚರಿ ಎಂಬಂತೆ ಇಂದು [ಶನಿವಾರ] ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾಜಿ ಉಪಮುಖ್ಯಮಂತ್ರಿ ಪರೇಶ್ವರ್ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಇಡಿ ಸುಳಿಗೆ ಸಿಲುಕಿ 50 ದಿನಗಳ ಬಳಿಕ ಬೆಂಗಳೂರಿಗೆ ಆಗಮಿಸಿರುವ ಡಿಕೆ ಶಿವಕುಮಾರ್ ಅವರನ್ನು ಸಿದ್ದರಾಮಯ್ಯ ಭೇಟಿ ಮಾಡುತ್ತಾರೆ ಅನ್ಕೊಂಡಿದ್ರು. ಆದ್ರೆ, ಅಚ್ಚರಿ ಎಂಬಂತೆ ಸಿದ್ದರಾಮಯ್ಯ ಅವರು ಗದಗನಿಂದ ನೇರವಾಗಿ ಬೆಂಗಳೂರಿನ ಸದಾಶಿವನಗರದಲ್ಲಿರವ ಪರಮೇಶ್ವರ್ ಅವರ ಮನೆ ದಿಢೀರ್ ಭೇಟಿ ನೀಡಿ ಸ್ವಲ್ಪ ಹೊತ್ತು ಮಾತುಕತೆ ನಡೆಸಿ ವಾಪಸ್ ಆದರು.
ಪರಮೇಶ್ವರ್ ಅವರ ಮನೆ ಹಾಗೂ ಶಿಕ್ಷಣ ಸಂಸ್ಥೆ ಮೇಲೆ ಇಡಿ ದಾಳಿ ನಡೆದಿತ್ತು. ಇದರಿಂದ ಅವರಿಗೆ ಧೈರ್ಯ ತುಂಬಲು ಹೋಗಿದ್ದಾರೆ ಎನ್ನಲಾಗಿದೆ. ಇನ್ನೊಂದು ಪ್ರಮುಖವಾಗಿ ಗಮನಿಸಬೇಕಾದ ಅಂಶ ಅಂದ್ರೆ, ವಿಪಕ್ಷ ನಾಯಕರಾದ ಬಳಿಕ ಸಿದ್ದರಾಮಯ್ಯವರಿಗೆ ಹೈಕಮಾಂಡ್ ಬೈ ಎಲೆಕ್ಷನ್ ಟಾಸ್ಕ್ ಕೊಟ್ಟಿದೆ.
ಈ ಒಂದು ಟಾಸ್ಕ್ ನಲ್ಲಿ ಯಶಸ್ವಿಯಾಗಿ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಸಿದ್ದರಾಮಯ್ಯ ಅವರು ನಾಯಕರ ಸಹಾಯಕ್ಕಾಗಿ ಈ ಭೇಟಿ ಎನ್ನಬಹುದು.
ಒಂದಂತೂ ಸತ್ಯ ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ನಡುವೆ ಕಳೆದ 6-7 ವರ್ಷಗಳಿಂದಲೂ ರಾಜಕೀಯ ವೈಷಮ್ಯವೊಂದು ಗುಪ್ತಗಾಮಮಿನಿಯಾಗಿ ಹರಿಯುತ್ತಲೇ ಇದೆ.