ಕಾಂಗ್ರೆಸ್‌ನಿಂದ ದೂರ ಉಳಿದಿದ್ಯಾಕೆ: ಬಹಿರಂಗವಾಗಿಯೇ ಕಾರಣ ಬಿಚ್ಚಿಟ್ಟ ಹಿರಿಯ ನಾಯಕ

By Suvarna NewsFirst Published Jan 29, 2021, 6:24 PM IST
Highlights

 ಕೈ ಹಿರಿಯ ನಾಯಕ ಪಕ್ಷದ ನಾಯಕ ನಡೆಗೆ ಬೇಸರಗೊಂಡಿದ್ದು, ಕಾಂಗ್ರೆಸ್‌ ಕಾರ್ಯಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಇನ್ನು ಈ ಬಗ್ಗೆ ಅವರೇ ಪ್ರತಿಕ್ರಿಯೆ ಕೊಟ್ಟಿದ್ದಾರೆ. 

ಬೆಂಗಳೂರು, (ಜ.29): ಕಾಂಗ್ರೆಸ್‌ನಿಂದ ಒಂದು ಕಾಲು ಆಚೆ ಇಟ್ಟಿರುವ ವಿಧಾನಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಜೆಡಿಎಸ್‌ನತ್ತ ಮುಖ ಮಾಡಿದ್ದಾರೆ.

ಈಗಾಗಲೇ ಜೆಡಿಎಸ್‌ ವರಿಷ್ಠ ಎಚ್‌ಡಿ ದೇವೇಗೌಡ ಅವರ ಜೊತೆ ಎರಡು ಸುತ್ತಿನ ಮಾತುಕತೆಗಳು ಮುಗಿದಿದ್ದು, ಅಧಿಕೃತವಾಗಿ ಕಾಂಗ್ರೆಸ್ ತೊರೆದು ಜೆಡಿಎಸ್‌ ಸೇರುವುದೊಂದಿಗೆ ಬಾಕಿ ಇದೆ.

ಇನ್ನು ಈ ಬಗ್ಗೆ ಇಂದು (ಶುಕ್ರವಾರ) ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಕಾಂಗ್ರೆಸ್​ನವರು ನನ್ನನ್ನ ಆಕ್ಟೀವ್​ ಮಾಡಿಕೊಳ್ಳದಿದ್ದರೆ ನಾನೇನು ಮಾಡಲಿ. ನಾನೇ ಹೋಗಿ ನನ್ನನ್ನ ಆಕ್ಟೀವ್​ ಮಾಡಿಕೊಳ್ಳಿ ಅಂತಾ ಕೇಳಬೇಕಾ?. ಎಲ್ಲಿ ಕರೆ ಇರುತ್ತೋ, ಅಲ್ಲಿಗೆ ನಾವು ಹೋಗ್ತೇವೆ, ಕರೆ ಇಲ್ಲದ ಕಡೆ ಸುಮ್ಮನೆ ಇರುತ್ತೇವೆ. ಅದಕ್ಕಾಗಿಯೇ ನಾನು ಕಾಂಗ್ರೆಸ್​ ಪಕ್ಷದ ಸಭೆಗಳಲ್ಲಿ ಭಾಗವಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್‌ ಸೇರಲು ಕಾಂಗ್ರೆಸ್ ಹಿರಿಯ ನಾಯಕ ಉತ್ಸುಕ: ದೇವೇಗೌಡ್ರನ್ನ ಭೇಟಿಯಾಗಿ ಮಾತುಕತೆ

ಇದೇ ವೇಳೆ ಬಿಜೆಪಿ ಜೊತೆ ಜೆಡಿಎಸ್​‌ ಹೊಂದಾಣಿಕೆ ವಿಚಾರವಾಗಿ ಮಾತನಾಡಿದ ಇಬ್ರಾಹಿಂ ಈಗ ಬಿಜೆಪಿ- ಜೆಡಿಎಸ್​‌ ನಡುವೆ ಅಡ್ಜೆಸ್ಟ್​ಮೆಂಟ್​ ಆಗಿದೆ. ಪ್ರಜಾಪ್ರಭುತ್ವದಲ್ಲಿ ಅಡ್ಜೆಸ್ಟ್​ಮೆಂಟ್​ ನಡೆಯುತ್ತಿರುತ್ತದೆ, ಕೆಲವು ಕಡೆ ಮುನಿಸಿಪಾಲಿಟಿಯಲ್ಲಿ ಬಿಜೆಪಿ, ಕಾಂಗ್ರೆಸ್​ ಜೊತೆ ಸೇರಿದೆ. ಮತ್ತೆ ಕೆಲವು ಕಡೆ ಜೆಡಿಎಸ್​‌, ಬಿಜೆಪಿ ಮೈತ್ರಿ ಮಾಡಿಕೊಂಡಿವೆ. ಸೈದ್ಧಾಂತಿಕ ತಳಹದಿಯಲ್ಲಿ ಧಕ್ಕೆ ಬಂದಿದೆಯಾ ಎಂಬುದನ್ನ ನೋಡಬೇಕು. ನಾನು ಜಾತಿ, ಕ್ಷೇತ್ರ ರಾಜಕಾರಣ ಮಾಡಿದವನಲ್ಲ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ತತ್ವ ಮೇಲೆ ಇದ್ದೇನೆ ಎಂದರು.

click me!