
ರಾಮನಗರ[ಫೆ.17]: ಈ ಜಿಲ್ಲೆ ಜೆಡಿಎಸ್ನ ಭದ್ರಕೋಟೆ. ಇಲ್ಲಿನ ಜನರು ಜಾತ್ಯತೀತ ಮನೋಭಾವ ಉಳ್ಳವರು. ಗಣವೇಷಧಾರಿಗಳಾಗಿ ಕೈಯಲ್ಲಿ ಲಾಠಿ ಹಿಡಿದು ಎಷ್ಟೇ ಪ್ರಯತ್ನಿಸಿದರೂ ಇಲ್ಲಿನ ಜನರ ಮನಸ್ಥಿತಿ ಬದಲಾಯಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಭಾವಿ ಪತ್ನಿಯ ಕೈಬರಹ ಶೇರ್, ನಿಖಿಲ್‌ರಿಂದ ಮತ್ತೊಂದು ವಿಷಯ ಕ್ಲಿಯರ್!
ತಾಲೂಕಿನ ಕೈಲಾಂಚ ಗ್ರಾಮದ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಮಹಾದ್ವಾರವನ್ನು ಭಾನುವಾರ ದಂಪತಿ ಸಮೇತ ಉದ್ಘಾಟಿಸಿದ ಅವರು, ಆರ್‌ಎಸ್‌ಎಸ್‌ನ ಕೆಲವರು ಬಾಡಿಗೆ ಜನರನ್ನು ಕರೆತಂದು, ಗಣವೇಷಧಾರಿಗಳಾಗಿ ಪಥ ಸಂಚಲನ ನಡೆಸಿದ್ದಾರೆ. ಈ ಮೂಲಕ ಬೇರೆ ಪಕ್ಷಗಳೆಲ್ಲವನ್ನು ನಾಮಾವಶೇಷ ಮಾಡಿಬಿಡುತ್ತೇವೆ ಎಂದಿದ್ದಾರೆ.
ಬೇರೆಯವರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದರೆ 144 ಸೆಕ್ಷನ್ ಜಾರಿ ಮಾಡುತ್ತಾರೆ. ಆದರೆ, ಆರ್‌ಎಸ್‌ಎಸ್‌ನವರು ರಾಮನಗರದಲ್ಲಿ ಪಥ ಸಂಚಲನ ನಡೆಸಿದರೆ ಅವರಿಗೆ ಅವಕಾಶ ನೀಡಿ ಪೊಲೀಸ್ ಬಂದೋಬಸ್್ತ ನೀಡುತ್ತಾರೆ. ನಮ್ಮದು ಕಾರ್ಯಕರ್ತರ ಗಟ್ಟಿಕೋಟೆ, ಯಾರೇ ಮಹಾನ್ ನಾಯಕರು ಬಂದರೂ ಅದನ್ನು ಅಲುಗಾಡಿಸಲು ಸಾಧ್ಯವಾಗದು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.