ಕರ್ನಾಟಕದಲ್ಲಿ ಕಾಂಗ್ರೆಸ್- ಸರ್ಕಾರದ ನಡುವೆ ಸಮನ್ವಯತೆಯೇ ಇಲ್ಲ..!

By Kannadaprabha News  |  First Published Jul 13, 2024, 10:05 AM IST

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಿರೀಕ್ಷಿತ ಸ್ಥಾನ ಗಳಿಸದ ಹಿನ್ನೆಲೆಯಲ್ಲಿ ಫಲಿತಾಂಶವನ್ನು ಪರಾಮರ್ಶಿಸಲು ಮಧುಸೂದನ್ ಅಧ್ಯಕ್ಷತೆಯಲ್ಲಿ ಎಐಸಿಸಿ ಸತ್ಯಶೋಧನಾ ಸಮಿತಿ ರಾಜ್ಯಕ್ಕೆ ಆಗಮಿಸಿದೆ. ಸತತ ಎರಡನೇ ದಿನವಾದ ಶುಕ್ರವಾರವೂ ವಿವಿಧ ಹಂತದ ನಾಯಕರೊಂದಿಗೆ ಸರಣಿ ಸಭೆ ನಡೆಸಿದ ಮಿಸ್ತ್ರಿ ಅವರು ಸೋಲಿಗೆ ಕಾರಣಗಳನ್ನು ಕೇಳಿ ವಿವರಣೆ ಪಡೆದರು.


ಬೆಂಗಳೂರು(ಜು.13):  ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದ ನಡುವೆ ತೀವ್ರ ಸಮನ್ವಯ ಕೊರತೆಯಿದೆ. ಇದರಿಂದ ಪಕ್ಷ ಉಂಟಾಗುತ್ತಿದ್ದು, ಇದರಿಂದ ಸರ್ಕಾರ ಎರಡಕ್ಕೂ ನಷ್ಟ ಉಂಟಾಗುತ್ತಿದ್ದು ಎರಡರ ನಡುವೆ ಸಮನ್ವಯ ಸಾಧಿಸಲು ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಎಐಸಿಸಿ ಸತ್ಯಶೋಧನಾ ಸಮಿತಿ ಎದುರು ರಾಜ್ಯ ಕಾಂಗ್ರೆಸ್ ನಾಯಕರು ಮನವಿ ಮಾಡಿದ್ದಾರೆ. 

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಿರೀಕ್ಷಿತ ಸ್ಥಾನ ಗಳಿಸದ ಹಿನ್ನೆಲೆಯಲ್ಲಿ ಫಲಿತಾಂಶವನ್ನು ಪರಾಮರ್ಶಿಸಲು ಮಧುಸೂದನ್ ಅಧ್ಯಕ್ಷತೆಯಲ್ಲಿ ಎಐಸಿಸಿ ಸತ್ಯಶೋಧನಾ ಸಮಿತಿ ರಾಜ್ಯಕ್ಕೆ ಆಗಮಿಸಿದೆ. ಸತತ ಎರಡನೇ ದಿನವಾದ ಶುಕ್ರವಾರವೂ ವಿವಿಧ ಹಂತದ ನಾಯಕರೊಂದಿಗೆ ಸರಣಿ ಸಭೆ ನಡೆಸಿದ ಮಿಸ್ತ್ರಿ ಅವರು ಸೋಲಿಗೆ ಕಾರಣಗಳನ್ನು ಕೇಳಿ ವಿವರಣೆ ಪಡೆದರು.

Latest Videos

undefined

ಕಾಂಗ್ರೆಸ್‌ನಲ್ಲಿ ಹೊಂದಾಣಿಕೆ ರಾಜಕಾರಣ: ಡಿ.ಕೆ.ಶಿವಕುಮಾರ್ ಹೇಳಿದ್ದಿಷ್ಟು

ಶುಕ್ರವಾರ ಬೆಳಗ್ಗೆಯಿಂದ ಕ್ರಮವಾಗಿ ಕೆಪಿಸಿಸಿ ಪದಾಧಿಕಾರಿಗಳು, 2024ರ ಲೋಕಸಭಾ ಅಭ್ಯರ್ಥಿ ಗಳು, 2023ರ ವಿಧಾನಸಭೆ ಅಭ್ಯರ್ಥಿಗಳು, ಮುಂಚೂಣಿಘಟಕ, ವಿಭಾಗಗಳ ಅಧ್ಯಕ್ಷರು, ನಿಗಮ-ಮಂಡಳಿ ಅಧ್ಯಕ್ಷರುಹಾಗೂಕೆಪಿಸಿಸಿ ಕಾರ್ಯಾಧ್ಯಕ್ಷರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿದರು.

ಈ ವೇಳೆ ಹಲವರು ಪಕ್ಷ ಹಾಗೂ ಸರ್ಕಾರದ ನಡುವೆ ಸಮನ್ವಯ ಕೊರತೆ ಉಂಟಾಗಿರುವುದು ನೀರಸ ಫಲಿತಾಂಶಕ್ಕೆ ಕಾರಣ. ಸರ್ಕಾರವು ಪಕ್ಷದ ಕಾರ್ಯಕರ್ತರನ್ನು ಸೂಕ್ತವಾಗಿ ನಡೆಸಿಕೊಂಡಿಲ್ಲ, ಇದರಿಂದ ಗ್ಯಾರಂಟ ಯೋಜನೆ ಜಾರಿಯಾಗಿದ್ದರೂ ಇವುಗಳನ್ನು ಮನೆ-ಮನೆಗೆ ತಲುಪಿಸಿ ಇದು ಸರ್ಕಾರದ ಸಾಧನೆ ಎಂದು ಬಿಂಬಿಸಲು ಪಕ್ಷದ ಕಾರ್ಯಕರ್ತರು ಹಿಂದೇಟು ಹಾಕಿದರು. ಹೀಗಾಗಿ ಸಮನ್ವಯತೆ ಸಾಧಿಸಲು ಪ್ರತ್ಯೇಕ ವ್ಯವಸ್ಥೆಯನ್ನು ಮಾಡಬೇಕು ಎಂದು ಮನವಿ ಸಲ್ಲಿಸಿದರು ಎನ್ನಲಾಗಿದೆ.

ಹಳೆ ಮೈಸೂರಲ್ಲಿ ಸಿದ್ದು ಪರ 'ಅಹಿಂದ' ರ್‍ಯಾಲಿ?: ಸಿಎಂ ಬದಲಾವಣೆ ಚರ್ಚೆಗೆ ಇತಿಶ್ರೀ ಹಾಡುವ ಉದ್ದೇಶ?

ಇನ್ನು ಹೊಂದಾಣಿಕೆ ರಾಜಕೀಯ, ಸಚಿವರ ನಿರ್ಲಕ್ಷ, ಶಾಸಕರು ವಿಧಾನಸಭೆ ಚುನಾವಣೆಯಲ್ಲಿ ಮಾಡಿದಷ್ಟು ಗಂಭೀರವಾಗಿ ಕೆಲಸ ಮಾಡದಿರುವುದು ಸೇರಿದಂತೆ ಹಲವು ಕಾರಣಗಳನ್ನು ರಾಜ್ಯ ನಾಯಕರು ಸಮಿತಿ ಮುಂದಿಟ್ಟರು ಎಂದು ಹೇಳಲಾಗಿದೆ.

20ಕ್ಕೂ ಹೆಚ್ಚು ಸಚಿವರ ಖಾತೆ ಬದಲಿಸಿ: ಇನ್ನು ಕೆಲ ಸಚಿವರು ತಮಗೆ ನೀಡಿರುವ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸುತ್ತಿಲ್ಲ.ಇದರಿಂದ ಸರ್ಕಾರಕ್ಕೆ ಕೆಟ್ಟಹೆಸರು ಬರುತ್ತಿದೆ. ಲೋಕಸಭೆ ಚುನಾವಣೆಯಲ್ಲಿನ ಪಕ್ಷದ ಸೋಲಿನ ಬಳಿಕವೂ ಸಚಿವರ ಕಾರ್ಯವೈಖರಿ ಬದಲಾಗಿಲ್ಲ. ಹೀಗಾಗಿ 20ಕ್ಕೂ ಹೆಚ್ಚು ಸಚಿವರ ಖಾತೆಗಳನ್ನು ಅದಲು-ಬದಲು ಮಾಡಿ, ಸಚಿವರಿಗೆ ಚುರುಕು ಮುಟ್ಟಿಸದಿದ್ದರೆ ಪಕ್ಷ ಹಾಗೂ ಸರ್ಕಾರಕ್ಕೆ ಹಾನಿ ಕಟ್ಟಿಟ್ಟ ಬುತ್ತಿ ಎಂದು ಹಳೆ ಮೈಸೂರು ಭಾಗದ ಕೆಲ ಶಾಸಕರು ದೂರಿದ್ದಾರೆ ಎನ್ನಲಾಗಿದೆ.

click me!