ಸಿದ್ದರಾಮಯ್ಯ ಈಗ ಮುಖ್ಯಮಂತ್ರಿ ಅದಾರ್ ಅಲ್ಲರ್ರಿ, ಅವರ ಕೆಳಗೆ ನಾವು ಕೆಲಸ ಮಾಡುತ್ತೇವೆ. ಸಿಎಂ ಹುದ್ದೆಗೆ ಪಕ್ಷದಲ್ಲೇ ಲಾಬಿ ನಡೆದಿಲ್ಲ ಎಂದು ಹೇಳಿದ್ದರು. ಅಷ್ಟರಲ್ಲೇ ಅವರ ಪರವಾಗಿ ಘೋಷಣೆ ಕೇಳಿ ಬಂದಿತು.
ಹುಬ್ಬಳ್ಳಿ(ಅ.09): ಮುಖ್ಯಮಂತ್ರಿ ಸ್ಥಾನಕ್ಕೆ ಯಾರಿಂದಲೂ ಪೈಪೋಟಿ ನಡೆಯುತ್ತಿಲ್ಲ. ಪೈಪೋಟಿ ನಡೆಯಲುಮುಖ್ಯ ಮಂತ್ರಿ ಸ್ಥಾನವೇನೂ ಖಾಲಿಯಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಲಿತ ಸಿಎಂ ಕುರಿತು ಚರ್ಚೆ ನಡೆಯುತ್ತಿಲ್ಲ. ಸಿಎಂ ಸ್ಥಾನಕ್ಕೆ ಪೈಪೋಟಿಯೂ ಇಲ್ಲ ಎಲ್ಲ ವೂ ಮಾಧ್ಯಮಗಳ ಸೃಷ್ಟಿ ಎಂದರು.
ಸತೀಶ ಜಾರಕಿಹೊಳಿ ಅವರು ರೇಸ್‌ನಲ್ಲಿದ್ದಾರಲ್ಲ ಎಂಬ ಪ್ರಶ್ನೆಗೆ, ಎಲ್ಲವೂ ಮಿಡಿಯಾ ದವರೇ ಸೃಷ್ಟಿಸಿ ದ್ದು. ಅವರೇನಾದರೂ ಮಿಡಿಯಾದವರನ್ನು ಕರೆದು ನಾನು ಸಿಎಂ ರೇಸ್‌ನಲ್ಲಿದ್ದೇನೆ ಎಂದು ಹೇಳಿದ್ದಾರೆಯೇ? ದೆಹಲಿಗೆ ಹೋಗಿ ಬಂದವರೆಲ್ಲರೂ ಲಾಬಿ ನಡೆಸುತ್ತಿದ್ದಾರೆ ಎಂಬಂತಾಗಿದೆ ಈಗ ಎಂದರು.
undefined
ಸಿಎಂ ಕುರ್ಚಿಯಲ್ಲಿ ಟಗರು ಕುಳಿತಿದೆ, ಕೆಳಗೆ ಇಳಿಸುವುದು ಅಷ್ಟು ಸುಲಭವಿಲ್ಲ: ಜಮೀರ್ ಅಹ್ಮದ್
ಎಐಸಿಸಿ ಅಧ್ಯಕ್ಷರಾಗಲಿ, ಕೆಪಿಸಿಸಿ ಅಧ್ಯಕ್ಷರಾಗಲಿ ಸಿಎಂ ಬದಲಾವಣೆ ಕುರಿತು ಹೇಳಿಯೇ ಇಲ್ಲ. ಹೈ ಕಮಾಂಡ್ ಕೂಡ ಅವರನ್ನು ರಾಜೀನಾಮೆ ನೀಡಿ ಎಂದು ತಿಳಿಸಿಲ್ಲ, ಮತ್ತೇಕೆ ಸಿಎಂ ಬದಲಾವಣೆಯ ಪ್ರಶ್ನೆ ಎಂದ ಅವರು, ಬಿಜೆಪಿಯವರು ಒಂದು ಬಾರಿಯೂ 113 ಸ್ಥಾನ ಗೆದಿಲ್ಲ ಅವರು ಅಧಿಕಾರ ಸಿಕ್ಕರೆ ಐದು ವರ್ಷ ಆಡಳಿತ ನಡೆಸಿದ ಉದಾಹರಣೆ ಯೇ ಇಲ್ಲ. ಅಧಿಕಾರ ಇದ್ದಾಗ ಪೂರ್ಣ ಮಾಡಲ್ಲ. ಅಧಿಕಾರ ಇಲ್ಲದಾಗ ಅಧಿಕಾರ ಬೇಕು ಎನ್ನುವುದು ಬಿಜೆಪಿಯವರ ಜಾಯಮಾನ ಎಂದರು.
ರಾಜ್ಯದಲ್ಲಿ ನಮ್ಮ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ನಮ್ಮ ಪಕದಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು. ಜಾತಿ ಜನಗಣತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ಈಗಾಗಲೇ ಸಿಎಂ ಹೇಳಿದ್ದಾರೆ. ಸಚಿವ ಸಂಪುಟದಲ್ಲಿ ಈ ಕುರಿತು ಸುದೀರ್ಘವಾಗಿ, ಮುಕ್ತವಾಗಿ ಚರ್ಚೆ ನಡೆಯುತ್ತದೆ. ಆ ಬಳಿಕ ಏನು ಮಾಡಬೇಕು ಎಂಬುದನ್ನು ನಿರ್ಧಾರವಾಗಲಿದೆ ಎಂದರು.
ಹರ್ಯಾಣ ಹಿನ್ನಡೆಗೆ ಆತ್ಮಾವಲೋಕನ
ಹುಬ್ಬಳ್ಳಿ ಜಮ್ಮು ಕಾಶ್ಮೀರದಲ್ಲಿ ಬಹಳ ವರ್ಷದ ನಂತರ ಚುನಾವಣೆ ನಡೆದಿತ್ತು. ಅಲ್ಲಿ ನಿರೀಕ್ಷೆಯಂತೆ ಪಕ್ಷ ಅಧಿಕಾರಕ್ಕೆ ಬಂದಿದೆ. ಅಲ್ಲಿನ ಜನ ಪ್ರಜಾಪ್ರಭುತ್ವವನ್ನು ಉಳಿಸಿದ್ದಾರೆ ಎಂದರು. ಎಕ್ಸಿಟ್ ಪೋಲ್ ಬಗ್ಗೆ ನನಗೆ ನಂಬಿಕೆ ಇಲ್ಲ. ಕರ್ನಾಟಕದಲ್ಲೂ ಎಕ್ಸಿಟ್ ಪೋಲ್ ಹರಿಯಾಣದಲ್ಲಿ ನಮಗೆ ಹಿನ್ನಡೆಯಾಗಿದೆ. ಏಕೆ ಹೀಗಾಯಿತು ಎಂಬುದನ್ನು ವರಿಷ್ಠರು ಪರಿಶೀಲಿಸುತ್ತಾರೆ ಎಂದಿರುವ ಡಿಸಿಎಂ ಡಿ.ಕೆ. ಶಿವಕುಮಾರ, ಜಮ್ಮು ಕಾಶ್ಮೀರ ಮತದಾರರು ಪ್ರಜಾಪ್ರಭುತ್ವ ಉಳಿಸಿದ್ದಾರೆ ಎಂದು ಹೇಳಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹರಿಯಾಣದಲ್ಲಿ ಅಧಿಕಾರಕ್ಕೆ ಬರುವ ನಿರೀಕ್ಷೆಯಿತ್ತು. ಆದರೆ ಹುಸಿಯಾಗಿದೆ. ಹರಿಯಾಣ ದೆಹಲಿಗೆ ಸಮೀಪವಾದ ರಾಜ್ಯ ರಾಜಕೀಯವಾಗಿ ಸಾಕಷ್ಟು ಮಹತ್ವ ಇದೆ. ನಮಗೆ ಅಧಿಕಾರ ಸಿಗುತ್ತದೆ ಎಂಬ ಭಾವನೆ ಇತ್ತು. ಆದರೆ ನಮ್ಮ ವಿರುದ್ಧ ಮತದಾರರು ಮತ ಚಲಾಯಿಸಿದ್ದಾರೆ. ಏಕೆ ಹೀಗಾಯಿತು. ಎಲ್ಲಿ ತಪ್ಪಿದ್ದೇವೆ ಎಂಬುದರ ಕುರಿತು ಆತಾವಲೋಕನ ನಡೆಸಲಾಗುತ್ತಿದೆ ಎಂದರು. ಸುಳ್ಳಾಗಿತ್ತು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಮುಖ್ಯಮಂತ್ರಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಪಕ್ಷದಲ್ಲಿ ಯಾವುದೇ ಚರ್ಚೆಯೂ ಆಗುತ್ತಿಲ್ಲ. ಯಾರುಲಾಬಿಯನ್ನೂ ನಡೆಸುತ್ತಿಲ್ಲ.ಸಿದ್ದರಾಮಯ್ಯ ನಮ್ಮ ಮುಖ್ಯ ಮಂತ್ರಿ. ಅವರ ಕೆಳಗೆ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು. ನಿಮಗೇ ನಾದರೂ ಮುಖ್ಯಮಂತ್ರಿಯಾಗುವ ಅವಕಾಶವಿದೆ ಯಾ ಎಂಬ ಪ್ರಶ್ನೆಗೆ ನಮ್ಮ ಸಿದ್ದರಾಮಯ್ಯ ಅದಾರ್ ಅಲರ್ರಿ.. ಎಂದು ಉತ್ತರಿಸಿ ಅಲಿಂದ ತೆರಳಿದರು.
ಮುಂದಿನ ಸಿಎಂ ಡಿಕೆಶಿ, ಘೋಷಣೆ
ಹುಬ್ಬಳ್ಳಿ: ಅತ್ತ ಮಾಧ್ಯಮದವರ ಎದುರಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಅದಾರ ಅಲ್ಲರ್ರಿ.. ಎಂದು ಹೇಳಿ ಕಾರೇರಲು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ ಹೊರಡುತ್ತಿದ್ದಂತೆ ಇತ್ತ ಅವರ ಬೆಂಬಲಿಗರು ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಜೈ ಎಂದು ಘೋಷಣೆಗಳು ಮೊಳಗಿದವು. ಆದರೆ ಇದಕ್ಕೆ ಡಿ.ಕೆ. ಶಿವಕುಮಾರ ಮಾತ್ರ ತಡೆಯುವ ಗೋಜಿಗೆ ಹೋಗಲಿಲ್ಲ.
ಸಿದ್ದು ಅಧಿಕಾರ ತ್ಯಾಗ: ವಿಜಯೇಂದ್ರ ತಮಗೆ ಬಿದ್ದ ಕನಸು ನಿಜವೆಂದು ನಂಬಿದ್ದಾರೆ, ರೆಡ್ಡಿ ವ್ಯಂಗ್ಯ
ರಾಯಚೂರ ಜಿಲ್ಲೆಯ ಸಿಂಧನೂರನಿಂದ ನೇರವಾಗಿ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಡಿ.ಕೆ. ಶಿವಕುಮಾರ, ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಅಲ್ಲಿಂದ ಕಾರನ್ನೇರಿ ಹೊರಡಲು ಅನುವಾದರು. ಅಷ್ಟರಲ್ಲೇ ಅವರ ಅಭಿಮಾನಿಗಳ ಪಡೆ ಮುಂದಿನ ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರಗೆ ಜೈವಾಗಲಿ ಎಂದು ಘೋಷಣೆ ಕೂಗಲು ಆರಂಭಿಸಿದರು.
ಡಿಕೆಶಿ ಕೂಡ ಎಲ್ಲರತ್ತ ಕೈ ಬೀಸುತ್ತಾ ಅಲ್ಲಿಂದ ಹೊರಟರು. ಜತೆಗೆ ಯಾವ ಕಾರ್ಯಕರ್ತರು ತಮ್ಮ ಕಾರಿನ ಹಿಂದೆ ಬಾರದಂತೆ ಕೈ ಸನ್ನೆ ಮಾಡಿ ಹೊರಟರು. ಆದರೆ, ಮಾಧ್ಯಮದವರ ಸಿಎಂ ವಿಚಾರದ ಪ್ರಶ್ನೆಗೆ, ಸಿದ್ದರಾಮಯ್ಯ ಈಗ ಮುಖ್ಯಮಂತ್ರಿ ಅದಾರ್ ಅಲ್ಲರ್ರಿ, ಅವರ ಕೆಳಗೆ ನಾವು ಕೆಲಸ ಮಾಡುತ್ತೇವೆ. ಸಿಎಂ ಹುದ್ದೆಗೆ ಪಕ್ಷದಲ್ಲೇ ಲಾಬಿ ನಡೆದಿಲ್ಲ ಎಂದು ಹೇಳಿದ್ದರು. ಅಷ್ಟರಲ್ಲೇ ಅವರ ಪರವಾಗಿ ಘೋಷಣೆ ಕೇಳಿ ಬಂದಿತು.