ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮತ್ತೊಮ್ಮೆ ಬಾಂಬ್ ಸಿಡಿಸಿದ್ದಾರೆ. ಈ ಹಿಂದೆ ನೀಡಿರುವ ಹೇಳಿಕೆಗಳನ್ನೇ ನೀಡಿರುವ ಅವರು, ಈ ಬಾರಿ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಯುಗಾದಿಯ ಗಡುವನ್ನು ನೀಡಿದ್ದಾರೆ.
ವಿಜಯಪುರ, (ಜ.30): ಹೊಸ ವರ್ಷಕ್ಕೆ ಹೊಸ ರಾಜ್ಯ ಸರ್ಕಾರ ಬರುತ್ತೆ ನೋಡ್ತಾ ಇರಿ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.
ವಿಜಯಪುರದಲ್ಲಿ ಇಂದು (ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೋಡ್ತಾ ಇರಿ, ಯುಗಾದಿಗೆ ಬದಲಾವಣೆಯಾಗುತ್ತೆ, ಈ ಹಿಂದೆ ಮೂರು ತಿಂಗಳು ಅಂತ ಹೇಳಿದ್ದೆ. ನಾವು ಮಂತ್ರಿ ನೀಡಿ ಅಂತ ದಾವಣಗೆರೆಗೆ ಹೋಗಿಲ್ಲ. ಮಂತ್ರಿ ಕೊಡುವ ಜಾಗದಲ್ಲಿ ನಮ್ಮವರೇ ಒಬ್ಬರು ಬರ್ತಾರೆ. ಉತ್ತರ ಕರ್ನಾಟಕದವರೇ ಬರ್ತಾರೆ. ಹೊಸ ವರ್ಷಕ್ಕೆ ಹೊಸ ರಾಜ್ಯ ಸರ್ಕಾರ ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಹಲ್ ಚಲ್ ಎಬ್ಬಿಸಿದರು.
undefined
ಯುಗಾದಿಗೆ ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೆ ಎಂದು ಈ ಹಿಂದೆ ಕೂಡ ಯತ್ನಾಳ್ ಹೇಳಿದ್ದರು. ಇದೀಗ ಅದನ್ನೇ ಮೊತ್ತೊಮ್ಮೆ ಪುನರುಚ್ಚರಿಸಿದ್ದಾರೆ.
ಮುಂದುವರಿದ ಯತ್ನಾಳ್-ಯಡಿಯೂರಪ್ಪ ಮುಸುಕಿನ ಗುದ್ದಾಟ..!
ವಿಧಾನ ಪರಿಷತ್ ನಲ್ಲಿ ನೀಲಿ ಚಿತ್ರ ವೀಕ್ಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಂತಹ ಸಣ್ಣ ವಿಷಯಗಳ ಬಗ್ಗೆ ನಾನು ಮಾತನಾಡಲ್ಲ. ವಿಧಾನಸಭೆ ಹೊರಗಡೆ ನಮಗೆ ಮೊಬೈಲ್ ಹೊರಗಡೆ ಇಡಲು ಬಾಕ್ಸ್ ಮಾಡಿದ್ದಾರೆ. ನಾವೆಲ್ಲ ಅಲ್ಲೆ ಇಟ್ಟು ಹೋಗುತ್ತೇವೆ. ಇದರ ಬಗ್ಗೆ ಸೂಕ್ತ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು. ಇದನ್ನ ಗಂಭೀರವಾಗಿ ತಗೆದುಕೊಳ್ಳ ಬೇಕು ಎಂದಿದ್ದಾರೆ.
ರಾಮಮಂದಿರ ಕಟ್ಟಡದ ಹಣ ಸಂಗ್ರಹದ ವಾಹನದ ಮೇಲೆ ಹಲ್ಲೆ ಹಿನ್ನೆಲೆ ಬೆಂಗಳೂರು ಹಾಟ್ ಸ್ಪಾಟ್ ಆಗುತ್ತಿದೆ. ಇದರ ಬಗ್ಗೆ ಸಿಎಂ, ಗೃಹ ಮಂತ್ರಿ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರ ಕೋಮು ಗಲಭೆ ನಿಯಂತ್ರಿಸುವಲ್ಲಿ ವಿಫಲವಾಗಿದೆ. ಅಂಥಹವರ ಜೊತೆ ಮಂತ್ರಿಗಳು, ಮುಖ್ಯಮಂತ್ರಿಗಳು ಸಲುಗೆಯಿಂದ ಇದ್ರೆ ಹೀಗೆ ಆಗೋದು ಎಂದಿದ್ದಾರೆ. ಶಿವಮೊಗ್ಗದಲ್ಲಿ ಸ್ಫೊಟ ವಿಚಾರಕ್ಕೂ ಕಿಡಿ ಕಾರಿದ ಯತ್ನಾಳ ಅದನ್ನು ಸಿಬಿಐ ತನಿಖೆಗೆ ಕೊಡಬೇಕಿತ್ತು. ಎಲ್ಲ ರಾಜಕೀಯ ವ್ಯಕ್ತಿಗಳ ಗಣಿಗಾರಿಕೆ ಇದೆ. ಅದು ಏನು ಆಗಲ್ಲ, ಯಾವ ತನಿಖೆಯಿಂದಲು ಏನು ಆಗಲ್ಲ. ನೀವು ಕೂಡ ಎರಡು ದಿನ ತೋರಸ್ತಿರಿ ನಂತರ ಬೇರೆ ಸುದ್ದಿಗೆ ಹೋಗ್ತಿರಿ ಎಂದರು.
ಕರ್ನಾಟಕದಲ್ಲಿ ನಿಜವಾದ ವಿರೋಧ ಪಕ್ಷಗಳು ಸತ್ತು ಹೋಗಿವೆ. ನಿಜವಾದ ವಿರೋಧ ಪಕ್ಷದ ನಾಯಕ ಅಂದರೆ ನೀವೆ ಅಂತ ಹೆಚ್ ಡಿ ಕೆ ಹೇಳಿದರು ಎಂದರು. ಅಲ್ಲದೆ ನಾನು ಸಿದ್ದರಾಮಯ್ಯ ಜತೆಗೂ ಜೊತೆಗೂ ಮಾತಾಡಿದಿನಿ, ಅದು ಅನ್ಯೋನ್ಯ ಬಾಂಧವ್ಯ ಇರುತ್ತೆ, ಅದು ಬಿಟ್ಟು ಬೇರೆನು ಇಲ್ಲಾ. ನಾನು ಬ್ಲಾಕಮೇಲ್ ರಾಜಕಾರಣಿ ಅಲ್ಲ, ನಾನು ಬಿಜೆಪಿ ಬಿಟ್ಟು ಎಲ್ಲೂ ಹೋಗಲ್ಲ ಎಂದು ಸಮಜಾಯಿಶಿ ನೀಡಿದ್ರು.