
ಪಟನಾ: ಬಿಹಾರದಲ್ಲಿ ಚುನಾವಣೆಗೆ ದಿನಗಣನೆ ಆರಂಭವಾಗಿರುವ ನಡುವೆಯೇ ಐಎಎನ್‌ಎಸ್-ಮ್ಯಾಟ್ರಿಜ್ ಚುನಾವಣಾಪೂರ್ವ ಸಮೀಕ್ಷೆ ಪ್ರಕಟವಾಗಿದ್ದು, ಮೂರನೇ 2ರಷ್ಟು ಬಹುಮತದೊಂದಿಗೆ ಎನ್‌ಡಿಎ ಭರ್ಜರಿ ಜಯಗಳಿಸಲಿದೆ ಎಂದು ಭವಿಷ್ಯ ಹೇಳಿದೆ.ಬಿಹಾರದಲ್ಲಿ 243 ಕ್ಷೇತ್ರಗಳಿದ್ದು, ಬಹುಮತಕ್ಕೆ 122 ಸೀಟು ಬೇಕು. ಆದರೆ ಎನ್‌ಡಿಎ 153-164 ಸ್ಥಾನದಲ್ಲಿ ಗೆಲ್ಲಲಿದೆ. ಕಾಂಗ್ರೆಸ್-ಆರ್‌ಜೆಡಿ-ಎಡಪಕ್ಷಗಳ ಕೂಟವಾಗಿರುವ ಮಹಾಮೈತ್ರಿಕೂಟ ಕೇವಲ 76-87 ಸ್ಥಾನಗಳಲ್ಲಿ ಜಯಿಸಲಿದೆ ಎಂದು ಸಮೀಕ್ಷೆ ವಿವರಿಸಿದೆ.
ಪಕ್ಷವಾರು ಹೋಲಿಸಿದರೆ, ಬಿಜೆಪಿ 83-87 ಹಾಗೂ ಜೆಡಿಯು 61-65 ಸ್ಥಾನಗಳಲ್ಲಿ ಗೆಲ್ಲಲಿವೆ. ವಿಪಕ್ಷಗಳ ಪೈಕಿ ಆರ್‌ಜೆಡಿ 62-66 ಸ್ಥಾನ ಗೆಲ್ಲಲಿದ್ದರೆ, ಕಾಂಗ್ರೆಸ್ ಕೇವಲ 7-9 ಹಾಗೂ ಇತರರು 6-10 ಸ್ಥಾನ ಗೆದ್ದು ಕಳಪೆ ಫಲಿತಾಂಶ ಪ್ರದರ್ಶಿಸಲಿದ್ದಾರೆ ಎಂದು ಅದು ಹೇಳಿದೆ.
ಹೊಸ ಪಕ್ಷವಾದ ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಹಾಗೂ ಕಳೆದ ಬಾರಿ ಕಾಂಗ್ರೆಸ್ ಮತ ಕಿತ್ತಿದ್ದ ಎಐಎಂಐಎಂ ಯಾವುದೇ ಪ್ರಭಾವ ಬೀರಲ್ಲ ಎಂದು ಅದು ವಿವರಿಸಿದೆ.
ಸ್ಥಾನ ಗಳಿಕೆಯಲ್ಲಿ ಆರ್‌ಜೆಡಿ ಹಿಂದೆ ಬಿದ್ದರೂ ಶೇ.22 ಮತ ಗಳಿಸಿ ಮೊದಲ ಸ್ಥಾನ ಪಡೆಯಲಿದೆ. ಬಿಜೆಪಿ ಶೇ.21, ಜೆಡಿಯು ಶೇ.18 ಮತ ಪಡೆಯಲಿದೆ ಎಂದು ಸಮೀಕ್ಷೆ ನುಡಿದಿದೆ.
ರಾಜ್ಯಾದ್ಯಂತ 73,387 ಮತದಾರರನ್ನು ಅ.10ರಿಂದ ನ.3ರವರೆಗೆ ಸಂದರ್ಶಿಸಿ ಸಮೀಕ್ಷೆ ಸಿದ್ಧಪಡಿಸಲಾಗಿದೆ ಎಂದು ಐಎಎನ್‌ಎಸ್-ಮ್ಯಾಟ್ರಿಜ್ ಹೇಳಿವೆ.
ಪಟನಾ: ಹಾಲಿ ಸಿಎಂ ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿ ಆಗುತ್ತಾರಾ ಎಂಬ ಸಂದೇಹಗಳ ನಡುವೆಯೇ ಬಿಹಾರದ ಶೇ.46 ಜನರು, ‘ನಿತೀಶ್ ನಮ್ಮ ನೆಚ್ಚಿನ ಸಿಎಂ ಅಭ್ಯರ್ಥಿ’ ಎಂದು ಐಎಎನ್‌ಎಸ್-ಮ್ಯಾಟ್ರಿಜ್ ಸಮೀಕ್ಷೆಯಲ್ಲಿ ಹೇಳಿದ್ದಾರೆ. ಸಿಎಂ ಆಗಬೇಕು ಎಂದು ಅತಿಯಾಗಿ ಶ್ರಮ ಪಡುತ್ತಿರುವ ಆರ್‌ಜೆಡಿ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ಪರ ಕೇವಲ ಶೇ.15 ಜನರು ಒಲವು ತೋರಿದ್ದಾರೆ.-
ಬಿಹಾರ
ಒಟ್ಟು ಕ್ಷೇತ್ರ 243/ಬಹುಮತ 122
ಎನ್‌ಡಿಎ 153-164
ಗಟಬಂಧನ 76-87
63% ಜನರ ಮೇಲೆ
ಮೋದಿ ಪ್ರಭಾವ!
ಪಟನಾ: ಬಿಹಾರದೆಲ್ಲೆಡೆ ಪ್ರಚಾರದಲ್ಲಿ ತೊಡಗಿರುವ ಪ್ರಧಾನಿ ನರೇಂದ್ರ ಮೋದಿಯಿಂದ ಪ್ರಭಾವಿತರಾಗಿ ಮತ ಹಾಕುತ್ತಿದ್ದೇವೆ ಎಂದವರ ಸಂಖ್ಯೆ ಶೇ.63 ಎಂದು ಐಎಎನ್‌ಎಸ್-ಮ್ಯಾಟ್ರಿಜ್ ಸಮೀಕ್ಷೆ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.