ಕಾಂಗ್ರೆಸ್‌ನ ಒಡೆದು ಆಳುವ ನೀತಿಗೆ ನಂದಿನಿ-ಅಮೂಲ್‌ ವಿವಾದ ಸಾಕ್ಷಿ: ಪ್ರತಾಪ ಸಿಂಹ ನಾಯಕ

By Kannadaprabha News  |  First Published Apr 11, 2023, 9:58 PM IST

ಬ್ರಿಟಿಷರು ಮಾಡಿದ ಒಡೆದು ಆಳವು ನೀತಿಯನ್ನೇ ಕಾಂಗ್ರೆಸ್‌ ಇಂದಿಗೂ ಅನುಸರಿಸುತ್ತಿದೆ ಎಂಬುದಕ್ಕೆ ಇತ್ತೀಚೆಗೆ ಕೆಎಂಎಫ್‌ ನಂದಿನಿ ಮತ್ತು ಅಮುಲ್‌ ಬಗ್ಗೆ ಅವರು ಹುಟ್ಟು ಹಾಕಿದ ವಿವಾದವೇ ಸಾಕ್ಷಿ ಎಂದು ವಿಧಾನ ಪರಿಷತ್‌ ಶಾಸಕ ಕೆ.ಪ್ರತಾಪಸಿಂಹ ನಾಯಕ್‌ ಆರೋಪ ಮಾಡಿದರು.


ಬೆಳ್ತಂಗಡಿ (ಏ.11): ಬ್ರಿಟಿಷರು ಮಾಡಿದ ಒಡೆದು ಆಳವು ನೀತಿಯನ್ನೇ ಕಾಂಗ್ರೆಸ್‌ ಇಂದಿಗೂ ಅನುಸರಿಸುತ್ತಿದೆ ಎಂಬುದಕ್ಕೆ ಇತ್ತೀಚೆಗೆ ಕೆಎಂಎಫ್‌ ನಂದಿನಿ ಮತ್ತು ಅಮುಲ್‌ ಬಗ್ಗೆ ಅವರು ಹುಟ್ಟು ಹಾಕಿದ ವಿವಾದವೇ ಸಾಕ್ಷಿ ಎಂದು ವಿಧಾನ ಪರಿಷತ್‌ ಶಾಸಕ ಕೆ.ಪ್ರತಾಪಸಿಂಹ ನಾಯಕ್‌(K Pratap simha Nayak) ಆರೋಪ ಮಾಡಿದರು. 

ಬೆಳ್ತಂಗಡಿ(Belthangady)ಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿಯನ್ನ ಅಥವಾ ಜನಸಾಮಾನ್ಯರ ಹಿತವನ್ನು ಬದಿಗೊತ್ತಿ ಕೇವಲ ಓಟ್‌ ಬ್ಯಾಂಕಿನ ರಾಜಕೀಯಕ್ಕೋಸ್ಕರ, ಜಾತಿ, ಸಮಾಜ, ಪ್ರದೇಶಗಳ ಭಾವನೆಗಳನ್ನ ಎಬ್ಬಸಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ. ಬಿಜೆಪಿ ಸರಕಾರ ಆಡಳಿತಕ್ಕೆ ಬಂದಮೇಲೆ ರೈತರ, ಹೈನುಗಾರರ, ವಿಶೇಷವಾಗಿ ಮಹಿಳೆಯರ ಹಿತಾಸಕ್ತಿ ಮನಸ್ಸಿನಲ್ಲಿಟ್ಟುಕೊಂಡು ಕೆ.ಎಂ.ಎಫ್‌. ಮತ್ತು ನಂದಿನಿ ಕರ್ನಾಟಕದ ಆಸ್ಮಿತೆ ಎಂಬುದನ್ನರಿತು ಎಲ್ಲ ರೀತಿಯ ಪೋ›ತ್ಸಾಹವನ್ನು ನೀಡಿದೆ.

Tap to resize

Latest Videos

Nandini VS Amul: ಅಮುಲ್‌ ವಿರುದ್ಧ ಕರವೇ ಹೋರಾಟ; ಅಮುಲ್‌ ಉತ್ಪನ್ನಗಳನ್ನು ರಸ್ತೆಗೆಸೆದು ಪ್ರತಿಭಟನೆ

ಕೆ.ಎಂ.ಎಫ್‌. ನಂದಿನಿ(KMF Nandini milk)ಯನ್ನು ದೇಶದಲ್ಲಿ ಮಾತ್ರವಲ್ಲದೆ ವಿದೇಶಕ್ಕೂ ಮಾರುಕಟ್ಟೆತಲುಪಿಸುವ ನಿಟ್ಟಿನಲ್ಲಿ ಅಗ್ರಗಣ್ಯ ಪ್ರಯತ್ನ ಮಾಡಿದೆ. ಆದರೂ ಪ್ರಾದೇಶಿಕವಾಗಿ ಈ ವಿಚಾರವನ್ನು ತೆಗೆದಕೊಂಡಿರುವ ಕಾಂಗ್ರೆಸ್‌(Congress) ಎಷ್ಟುಕೆಳಮಟ್ಟಿಗೆ ಇಳಿದಿದೆ ಎಂಬುದನ್ನು ತೋರಿಸುತ್ತಿದೆ.

ಅಮುಲ್‌(Amul) ಪ್ರಧಾನಿಯವರ ರಾಜ್ಯ ಗುಜರಾತ್‌ ಎಂಬ ಒಂದೇ ಕಾರಣಕ್ಕೆ ಜನರ ಮನಸ್ಸಿಗೆ ತಪ್ಪು ಭಾವನೆ ಕೊಡುವ ಮೂಲಕ ಪ್ರಾದೇಶಿಕ ಸಂಘರ್ಷಕ್ಕೆ ಕಾಂಗ್ರೆಸ್‌ ಕೈ ಹಾಕಿದೆ. ಅಮುಲ್‌ ಡಾ ಕುರಿಯನ್‌ ಅವರ ಕಲ್ಪನೆ ಪರಿಶ್ರಮವಾಗಿ ಅದನ್ನೇ ಮಾದರಿಯಾಗಿಟ್ಟುಕೊಂಡು ರೈತರು ಹಾಲುತ್ಪಾದನೆ, ಸಹಕಾರಿ ಸಂಸ್ಥೆಗಳು ಬೆಳೆಯುತ್ತಿದೆ. ಇದು ಬಿಜೆಪಿ ಸರಕಾರ ಇದ್ದಾಗ ಆರಂಭಗೊಂಡದ್ದಲ್ಲ, ಕಾಂಗ್ರೆಸ್‌ ಸರಕಾರ ಇದ್ದಾಗಲೆ ಅಮುಲ್‌ ಕರ್ನಾಟಕದಲ್ಲಿ ಮಾರಾಟವಾಗಿದೆ ಎಂಬುದು ಜನರು ಮನದಟ್ಟು ಮಾಡಿಕೊಳ್ಳಬೇಕಿದೆ.

ಇನ್ನು 10 ವರ್ಷ ಕಳೆದರೂ ನಂದಿನಿಗೆ ನಾವು ಸ್ಪರ್ಧೆ ನೀಡಲಾಗದು: ಅಮುಲ್‌

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಗಣೇಶ್‌ ಗೌಡ ನಾವೂರು ಉಪಸ್ಥಿತರಿದ್ದರು.

click me!