* ವೈಯಕ್ತಿಕ ದ್ವೇಷ ರಾಜಕೀಯದಲ್ಲಿ ತರುವುದು ಎಷ್ಟು ಸರಿ?
* ಭ್ರಷ್ಟಾಚಾರ, ಭಯೋತ್ಪಾದನೆ, ಬಡತನ, ನಿರುದ್ಯೋಗ ಇವು ಕಾಂಗ್ರೆಸ್ ಕೊಡುಗೆ
* ಸೋಲಿನ ಭೀತಿಯಿಂದ ಕಾಂಗ್ರೆಸ್‌ನಿಂದ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಯತ್ನ
ಹಾನಗಲ್ಲ(ಅ.27): ಸಿಂದಗಿ(Sindagi), ಹಾನಗಲ್ಲ(Hanagal) ಉಪಚುನಾವಣೆಯಲ್ಲಿ ಮಾತ್ರವಲ್ಲ, ಈಗಿನ ಬಿಜೆಪಿ ಪರ ಅಲೆ ಕಂಡು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿಯೂ ಕಾಂಗ್ರೆಸ್‌ಗೆ ಸೋಲಿನ ಭಯ ಕಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್(Nalin Kumar Kateel) ವ್ಯಂಗ್ಯವಾಡಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ(Corruption), ಭಯೋತ್ಪಾದನೆ(Terrorism), ಬಡತನ, ನಿರುದ್ಯೋಗ ಇವು ಕಾಂಗ್ರೆಸ್(Congress) ಕೊಡುಗೆಯಾಗಿವೆ. ಸೋಲಿನ ಭೀತಿಯಲ್ಲಿ ಕಾಂಗ್ರೆಸ್ ಅತಂತ್ರವಾಗಿದೆ. ಎರಡೂ ಕ್ಷೇತ್ರದಲ್ಲಿ ಬಿಜೆಪಿ(BJP) ಸ್ವತಂತ್ರವಾಗಿ ಗೆಲ್ಲಲಿದೆ. ನಮಗೆ ಯಾವುದೆ ಪಕ್ಷಗಳ ಜೊತೆ ಒಪ್ಪಂದವಿಲ್ಲ. ಇದೇ ಭಯದಲ್ಲಿ ಕಾಂಗ್ರೆಸ್ ವಿಚಲಿತಗೊಂಡಿದೆ ಎಂಬುದು ಅವರ ಪ್ರಚಾರದ(Campaign) ಭಾಷಣಗಳಿಂದ ತಿಳಿಯುತ್ತಿದೆ. ಸೋಲಿನ ಭೀತಿಯಿಂದ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಯತ್ನ ನಡೆಯುತ್ತಿದೆ. ಏನು ಮಾಡಿದರೂ ಗೆಲ್ಲಲು ಸಾಧ್ಯವಿಲ್ಲ ಎಂದು ಅರಿತು ಗೂಂಡಾಗಿರಿ ಮೂಲಕ ಗೆಲ್ಲಲು ಹೊರಟಿದೆ. ಇದು ಪ್ರಜಾಪ್ರಭುತ್ವವೆ(Democracy) ಎಂದು ಪ್ರಶ್ನಿಸಿದರು.
ಡಿಕೆಶಿ(DK Shivakumar) ಹಣ ಹಂಚಿಕೆ ಆರೋಪಕ್ಕೆ ತಿರುಗೇಟು ನೀಡಿದ ಕಟೀಲ್, 65 ವರ್ಷ ನೀವು ಹಣಬಲದಲ್ಲೇ ದೇಶದಲ್ಲಿ ಆಡಳಿತಕ್ಕೆ ಬಂದಿದ್ದೀರಾ? ಕನಕಪುರದಲ್ಲಿ ನೀವು ಹಾಗೂ ಬಾದಾಮಿ ಕ್ಷೇತ್ರದಲ್ಲಿ ನಿಮ್ಮ ನಾಯಕರು ಗೆದ್ದಿದ್ದು ಹಣ ಹಂಚಿಯೇ? ಕಾಂಗ್ರೆಸ್ ಅಧಿಕಾರಿಗಳನ್ನು ಕೂಡ ಎಲೆಕ್ಷನ್‌ನಲ್ಲಿ(Election) ಬಳಸಿಕೊಂಡ ಉದಾಹರಣೆ ನಮ್ಮ ಎದುರಿದೆ ಎಂದರು.
'ಬಿಜೆಪಿಯಿಂದ ಜನ ಬೇಸತ್ತಿದ್ದಾರೆ : ಕಾಂಗ್ರೆಸ್‌ಗೆ ಜಯ ಖಚಿತವಾಗಿದೆ'
ವೈಯಕ್ತಿಕ ದ್ವೇಷವನ್ನು ರಾಜಕೀಯದಲ್ಲಿ ತರುವುದು ಎಷ್ಟು ಸರಿ?
ಉಪಚುನಾವಣೆಯಲ್ಲಿ(Byelection) ಇದು ಹೆಚ್ಚಾಗಿದೆ. ಜೆಡಿಎಸ್(JDS), ಕಾಂಗ್ರೆಸ್ ಪಕ್ಷಗಳು ಜಾತಿ(Caste), ವೈಯಕ್ತಿಕ ವಿಚಾರ ತೆಗೆದಿದ್ದು ಯಾಕೆ? ಸಿದ್ದರಾಮಯ್ಯ(Siddaramaiah) ಐದು ವರ್ಷಗಳ ಕಾಲ ಆಡಳಿತ ನಡೆಸಿದರೂ ಅವರ ಬಳಿ ಹೇಳಿಕೊಳ್ಳಲು ಗಟ್ಟಿಯಾದ ಅಭಿವೃದ್ಧಿ ವಿಚಾರ ಇಲ್ಲ. ಕಾಂಗ್ರೆಸ್ ಬಳಿ ಅಭಿವೃದ್ಧಿ ಮಂತ್ರ ಇಲ್ಲ. ಆದರೆ ಬಿಜೆಪಿ ಪ್ರಧಾನಿ ಮೋದಿ(Narendra Modi), ಯಡಿಯೂರಪ್ಪ(BS Yediyurappa) ಅವರ ಯೋಜನೆ, ಬೊಮ್ಮಾಯಿ(Basavaraj Bommai) ಅವರ ಜನವಿಶ್ವಾಸದ ಆಡಳಿತದ ಮೂಲಕ ಮೆಚ್ಚುಗೆ ಗಳಿಸಿದ್ದಾರೆ ಎಂದರು.
ಸಿದ್ದರಾಮಯ್ಯ ಅವರು ಅಧಿವೇಶನದಲ್ಲಿ ಚರ್ಚೆಗೆ ಮುಂದಾಗುವುದಿಲ್ಲ. ಇಲ್ಲಿ ಪ್ರಚಾರಕ್ಕೆ ಬಂದು ಬಹಿರಂಗ ವೇದಿಕೆಗೆ ಚರ್ಚೆಗೆ ಬನ್ನಿ ಎನ್ನುತ್ತಾರೆ. ಅಧಿವೇಶನ(Session)ಬಹಿಷ್ಕಾರ ಹಾಕಿ ತೆರಳುತ್ತಾರೆ. ಅವರ ಪಕ್ಷದ ಇತರರನ್ನು ಮಾತನಾಡಲು ಬಿಡದೆ ತಾವೇ ಮಾತಾಡುತ್ತಾರೆ ಎಂದರು. ಸಚಿವ ಡಾ. ಸುಧಾಕರ, ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಇದ್ದರು.
ಹಾನಗಲ್ ಕ್ಷೇತ್ರದಲ್ಲಿರುವ ಅಭ್ಯರ್ಥಿಗಳು:
ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು: ನಿಯಾಜ್ ಶೇಖ್ (ಜೆಡಿಎಶ್), ಶಿವರಾಜ ಸಜ್ಜನರ (ಬಿಜೆಪಿ), ಶ್ರೀನಿವಾಸ ಮಾನೆ (ಕಾಂಗ್ರೆಸ್), ಉಡಚಪ್ಪ ಉದ್ದನಕಾಲ (ಕರ್ನಾಟಕ ರಾಷ್ಟ್ರ ಸಮಿತಿ), ಫಕ್ಕೀರಗೌಡ ಶಂಕರಗೌಡ ಗಾಜಿಗೌಡ್ರ (ರೈತ ಭಾರತ ಪಕ್ಷ), ತಳವಾರ ಶಿವಕುಮಾರ (ಲೋಕಶಕ್ತಿ ಪಕ್ಷ), ಉಮೇಶ ಕೃಷ್ಣಪ್ಪ ದೈವಜ್ಞ (ಪಕ್ಷೇತರ), ಸಿದ್ದಪ್ಪ ಕಲ್ಲಪ್ಪ ಪೂಜಾರ (ಪಕ್ಷೇತರ), ಎಸ್ಎಸ್.ದೊಡ್ಡ ಲಿಂಗಣ್ಣನವರ (ಪಕ್ಷೇತರ), ಸೋಮಶೇಖರ ಮಹದೇವಪ್ಪ ಕೋತಂಬರಿ (ಪಕ್ಷೇತರ), ಹೊನ್ನಪ್ಪ ಹನುಮಂತಪ್ಪ ಅಕ್ಕಿವಳ್ಳಿ (ಪಕ್ಷೇತರ)
ಸಿಂದಗಿಯಲ್ಲಿ ಕ್ಷೇತ್ರದಲ್ಲಿರುವ ಅಭ್ಯರ್ಥಿಗಳು:
ಇನ್ನು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಆರು ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಅಶೋಕ ಮನಗೊಳಿ(ಕಾಂಗ್ರೆಸ್), ರಮೇಶ್ ಬೂಸನೂರ್(ಬಿಜೆಪಿ), ನಜಿಯಾ ಅಂಗಡಿ(ಜೆಡಿಎಸ್), ಡಾ. ಸುನಿಲ್‌ಕುಮಾರ್‌ಹೆಬ್ಬಿ(ಕರ್ನಾಟಕ ರಾಷ್ಟ್ರ ಸಮಿತಿ) ಹಾಗೂ ಜಿಲಾನಿ ಗುಡುಸಾಬ್‌ಮುಲ್ಲಾ, ದೀಪಿಕಾ ಎಸ್. ಪಡಸಲಗಿ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.
ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ಅ. 30ರಂದು ಮತದಾನ ನಡೆಯಲಿದ್ದು ನ.2ರಂದು ಫಲಿತಾಂಶ ಹೊರಬೀಳಲಿದೆ.