ಪ್ರಧಾನಿ ನರೇಂದ್ರ ಮೋದಿ ಸಮರ್ಥ ಆಡಳಿತ ನೀಡುತ್ತಿದ್ದಾರೆ. ಮಹಿಳೆಯರಿಗಾಗಿ ಹಲವು ಜನಪರ ಯೋಜನೆಗಳನ್ನು ಸಾಕಾರಗೊಳಿಸಿದ್ದಾರೆ. ಕಾಂಗ್ರೆಸ್‌ನವರು ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆ ತರುತ್ತೇವೆ ಎಂದು ಹೇಳುತ್ತಿದ್ದಾರೆ.
ಹೊಸಪೇಟೆ (ಮಾ.18): ಪ್ರಧಾನಿ ನರೇಂದ್ರ ಮೋದಿ ಸಮರ್ಥ ಆಡಳಿತ ನೀಡುತ್ತಿದ್ದಾರೆ. ಮಹಿಳೆಯರಿಗಾಗಿ ಹಲವು ಜನಪರ ಯೋಜನೆಗಳನ್ನು ಸಾಕಾರಗೊಳಿಸಿದ್ದಾರೆ. ಕಾಂಗ್ರೆಸ್‌ನವರು ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆ ತರುತ್ತೇವೆ ಎಂದು ಹೇಳುತ್ತಿದ್ದಾರೆ. ಅವರು ಅಧಿಕಾರಕ್ಕೆ ಬರುವುದಿಲ್ಲ. ಹಾಗಾಗಿ ಸುಳ್ಳು ಗ್ಯಾರಂಟಿ ಕಾರ್ಡ್ ವಿತರಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ ಕಟೀಲ್ ಟೀಕಿಸಿದರು. ನಗರದ ಪುನೀತ್ ರಾಜ್‌ಕುಮಾರ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಬಿಜೆಪಿಯ ಮಹಿಳಾ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು, ಮಹಿಳೆಯರಿಗಾಗಿ ಉಜ್ವಲ ಯೋಜನೆ ಜಾರಿ ಮಾಡಿದ್ದಾರೆ.
ಈ ಮೂಲಕ ದೇಶದ ಬಡ ಮಹಿಳೆಯರಿಗೆ ಸಿಲಿಂಡರ್ ಒದಗಿಸಿದ್ದಾರೆ. ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಕೂಡ ಸಾಕಾರ ಮಾಡಿದ್ದಾರೆ. ಸಂಸತ್‌ನಲ್ಲಿ ಮಹಿಳಾ ಶೌಚಾಲಯದ ಕುರಿತು ಚರ್ಚಿಸಿದ್ದಾರೆ. ಮಹಿಳಾಪರ ಯೋಜನೆಗಳನ್ನು ಜಾರಿ ಮಾಡಿರುವ ಪ್ರಧಾನಿ ಮೋದಿ ನೇತೃತ್ವದಲ್ಲಿ ರಾಜ್ಯದಲ್ಲೂ ಡಬಲ್ ಎಂಜಿನ್ ಸರ್ಕಾರಗಳು ಹಲವು ಯೋಜನೆಗಳನ್ನು ತಂದಿದ್ದಾರೆ. ಹಾಗಾಗಿ ರಾಜ್ಯದಲ್ಲೂ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಬೇಕು ಎಂದರು.
undefined
ಕ್ರೆಡಿಟ್ ತೆಗೆದುಕೊಳ್ಳೋದು ಎಚ್ಡಿಕೆಗೆ ಹೊಸತೇನಲ್ಲ: ಸಿ.ಪಿ.ಯೋಗೇಶ್ವರ್
ಐದೂ ಕ್ಷೇತ್ರಗಳಲ್ಲಿ ಗೆಲುವು: ವಿಜಯನಗರ ಪುಣ್ಯಕ್ಷೇತ್ರಲ್ಲಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿದ್ದಾರೆ. ಮಹಿಳಾ ಶಕ್ತಿ ಮೂಲಕ ವಿಜಯನಗರ ಜಿಲ್ಲೆಯ ಐದೂ ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಬಿಜೆಪಿ ನಾಯಕರು ಕೇಂದ್ರ ಹಾಗೂ ರಾಜ್ಯ ಕ್ಯಾಬಿನೆಟ್‌ನಲ್ಲೂ ಸ್ಥಾನಮಾನ ನೀಡಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಮಹಿಳೆಯರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.
ಬಳ್ಳಾರಿ ಮರೆತ ಸೋನಿಯಾ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಳ್ಳಾರಿಗೆ ಬಂದಿದ್ದರು. ಸುಷ್ಮಾ ಸ್ವರಾಜ್ ಕೂಡ ಬಂದಿದ್ದರು. ಎಲೆಕ್ಷನ್‌ನಲ್ಲಿ ಸುಷ್ಮಾ ಸೋತರು. ಆದರೆ, ಗೆದ್ದ ಸೋನಿಯಾ ಗಾಂಧಿ ದೆಹಲಿಯಲ್ಲಿ ಕುಳಿತರು, ಸೋತ ಸುಷ್ಮಾ ಸ್ವರಾಜ್ ಜನರ ಸೇವೆ ಮಾಡಿದರು ಎಂದರು. ಮಹಿಳೆಯರು ಕಣ್ಣೀರು ಹಾಕಬಾರದು ಅಂತ ಪ್ರಧಾನಿ ಮೋದಿ ಉಜ್ವಲ ಯೋಜನೆ ಜಾರಿ ಮಾಡಿದರು. ತನ್ನ ತಾಯಿಯ ಕಟ್ಟಿಗೆ ಹೊರುವ ಕಷ್ಟನೋಡಿ ಮಹಿಳೆಯರಿಗಾಗಿ ಉಜ್ವಲ ಯೋಜನೆ ಜಾರಿ ಮಾಡಿದರು. ಗರೀಬಿ ಹಠಾವೋ ಎಂದು ಘೋಷಣೆ ಕೂಗಿದವರು ಮಹಿಳೆಯರು ಕೈಯಲ್ಲಿ ಎಟಿಎಂ ಕೊಡಲಿಲ್ಲ, ಪ್ರಧಾನಿ ಮೋದಿ ಬ್ಯಾಂಕ್‌ಗಳಲ್ಲಿ ಖಾತೆ ಮಾಡಿಸಿ, ಎಟಿಎಂ ಕಾರ್ಡ್ ನೀಡಿದರು ಎಂದರು.
ಮೋದಿ ಅವರು ಇಟಲಿಯಿಂದ ನೇರವಾಗಿ ಬಂದು ಆಡಳಿತ ಮಾಡಿಲ್ಲ. ಮೋದಿ ಹಳ್ಳಿ ಹಳ್ಳಿಗೆ ತಿರುಗಿ ಆಡಳಿತ ಮಾಡಿದ್ದಾರೆ. ಮಹಿಳೆಯರಿಗೆ ಕೇಂದ್ರ ಸರ್ಕಾರ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿದ್ದಾರೆ. ಕೇಂದ್ರದಲ್ಲಿ 11 ಜನ ಮಹಿಳಾ ಸಚಿವರಿದ್ದಾರೆ ಎಂದರು.ಯುವ ನಾಯಕ ಸಿದ್ಧಾರ್ಥ ಸಿಂಗ್ ಮಾತನಾಡಿ, ವಿಜಯನಗರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ನ್ಯಾಯಪರ ಆಡಳಿತ ನೀಡಿದ್ದಾರೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಕ್ಷೇತ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಬೇಕು ಎಂದರು. ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಎಸ್ಸಿ, ಎಸ್ಟಿಗಳಿಗೆ ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದೆ. ಜನಪರ ಆಡಳಿತ ನೀಡಿದೆ.
ಭೂಸನೂರ ಗೆಲ್ಲಿಸಿ, ಸಚಿವರಾಗುವಂತೆ ಹರಸಿ: ಸಚಿವ ಎಂಟಿಬಿ ನಾಗರಾಜ್
ಹಾಗಾಗಿ ಯಾರ ಮಾತಿಗೂ ಮಣೆ ಹಾಕದೇ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಬೇಕು ಎಂದರು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯೆ ರಾಣಿ ಸಂಯುಕ್ತಾ, ಸಂಸದ ದೇವೇಂದ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಉಪಾಧ್ಯಕ್ಷರಾದ ಅಯ್ಯಾಳಿ ತಿಮ್ಮಪ್ಪ, ಕವಿತಾ ಸಿಂಗ್, ನಗರಸಭೆ ಅಧ್ಯಕ್ಕೆ ಸುಂಕಮ್ಮ, ಉಪಾಧ್ಯಕ್ಷ ಎಲ್.ಎಸ್. ಆನಂದ, ಮುಖಂಡರಾದ ಸುವರ್ಣ ಆರುಂಡಿ, ರಾಘವೇಂದ್ರ, ತಾರಿಹಳ್ಳಿ ಜಂಬುನಾಥ, ಅಶೋಕ್ ಜೀರೆ, ಬಂಗಾರು ಹನುಮಂತ, ಜೀವರತ್ನ, ರಮೇಶ ಗುಪ್ತಾ, ಸ್ವಾತಿ ಸಿಂಗ್, ಭಾರತಿ ಪಾಟೀಲ್ ಇತರರು ಇದ್ದರು.