
ಬೆಂಗಳೂರು,(ಜ.13): ಬಹುದಿನಗಳಿಂದ ಕಗ್ಗಂಟಾಗಿದ್ದ ಸಚಿವ ಸಂಪುಟ ವಿಸ್ತರಣೆ ಇಂದು (ಬುಧವಾರ) ಮುಕ್ತಾಯವಾಗಿದ್ದು, 7 ಜನರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಮತ್ತೊಂದೆಡೆ ಸಚಿವ ಸ್ಥಾನ ಆಕಾಂಕ್ಷಿಗಳ ಆಕ್ರೋಶ ಭುಗಿಲೆದ್ದಿದ್ದು, ಮತ್ತೊಂದಷ್ಟು ಅಸಮಾಧಾನಗಳು ಸೃಷ್ಟಿಯಾಗಿವೆ. ಅವುಗಳನ್ನ ಸಮಾಧಾನಪಡಿಸುವ ಕಾರ್ಯವು ಸಹ ನಡೆದಿದೆ.
ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಐದಾರು ಗಂಟೆಯಲ್ಲೇ ನಾಗೇಶ್‌ಗೆ ಮಹತ್ವದ ಹುದ್ದೆ
ಹೌದು...ಸಚಿವ ಸ್ಥಾನವನ್ನು ವಾಪಸ್ ಪಡೆದಿರುವುದಕ್ಕೆ ನಾಗೇಶ್ ಅಸಮಾಧಾನಗೊಂಡಿದ್ದಾರೆ. ಇನ್ನು ಹೇಳಿದಂತೆ ಸಚಿವ ಸ್ಥಾನ ಕೊಟ್ಟಿಲ್ಲವೆಂದು ಮುನಿರತ್ನ ಅವರು ಬೇಸರದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಇಬ್ಬರು ನಾಯಕರನ್ನು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಬಳಿ ಕರೆದುಕೊಂಡು ಹೋಗಿ ಸಮಧಾನಪಡಿಸುವ ಕೆಲಸವನ್ನು ಸಚಿವ ಸುಧಾಕರ್ ಮಾಡಿದರು.
ಕೆಕೆ ಗೆಸ್ಟ್ ಹೌಸ್ ನಲ್ಲಿ ಇಬ್ಬರು ಅಸಮಾಧಾನಿತರನ್ನ ಪ್ರತ್ಯೇಕವಾಗಿ ಮಾತನಾಡಿಸಿದ ಅರುಣ್ ಸಿಂಗ್, ಇಬ್ಬರನ್ನೂ ಪ್ರತ್ಯೇಕವಾಗಿ ಕೂರಿಸಿಕೊಂಡು ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನ ಮಾನ ಪಕ್ಷದಲ್ಲಿ ಸಿಗಲಿದೆ ಎಂದು ಸಮಾಧಾನ ಮಾಡಿದರು. ಬಳಿಕ ಅರುಣ್ ಸಿಂಗ್ ದೆಹಲಿಗೆ ಹೊರಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.