ಸಿಎಂ ಸಿದ್ದರಾಮಯ್ಯ ಜೈಲಿಗೆ ಹೋಗೋದು ಪಿಕ್ಸ್; ಮಾಜಿ ಉಪಮುಖ್ಯಮಂತ್ರಿ ಕೆಎಸ್‌ ಈಶ್ವರಪ್ಪ ವಾಗ್ದಾಳಿ

By Ravi Janekal  |  First Published Jul 23, 2024, 9:19 AM IST

ಕಾಂಗ್ರೆಸ್ ಪಟ್ಟಿ ಮಾಡಿದ ಬಿಜೆಪಿಯ 22 ಹಗರಣಗಳನ್ನ ಸಿಬಿಐಗೆ ವಹಿಸಲಿ. ಸಿಬಿಐ ತನಿಖೆ ಮಾಡಿ ಕಳ್ಳರು ಯಾರು ಅಂತಾ ಹಿಡಿತಾರೆ. ಲೂಟಿ ಮಾಡಿದವರು ಜೈಲಿಗೆ ಹೋಗ್ತಾರೆ. ಜೈಲಿಗೆ ಹೋಗುವವರ ನಾಯಕತ್ವ ಸಿದ್ದರಾಮಯ್ಯ ತೆಗೆದುಕೊಳ್ಳುವುದರಲ್ಲಿ ಅನುಮಾನವಿಲ್ಲ ಎಂದು ಮಾಜಿ ಡಿಸಿಎಂ ಕೆಎಸ್‌ ಈಶ್ವರಪ್ಪ ವಾಗ್ದಾಳಿ ನಡೆಸಿದರು.


ವಿಜಯಪುರ (ಜು.23): ಕಾಂಗ್ರೆಸ್ ಪಟ್ಟಿ ಮಾಡಿದ ಬಿಜೆಪಿಯ 22 ಹಗರಣಗಳನ್ನ ಸಿಬಿಐಗೆ ವಹಿಸಲಿ. ಸಿಬಿಐ ತನಿಖೆ ಮಾಡಿ ಕಳ್ಳರು ಯಾರು ಅಂತಾ ಹಿಡಿತಾರೆ. ಲೂಟಿ ಮಾಡಿದವರು ಜೈಲಿಗೆ ಹೋಗ್ತಾರೆ. ಜೈಲಿಗೆ ಹೋಗುವವರ ನಾಯಕತ್ವ ಸಿದ್ದರಾಮಯ್ಯ ತೆಗೆದುಕೊಳ್ಳುವುದರಲ್ಲಿ ಅನುಮಾನವಿಲ್ಲ ಎಂದು ಮಾಜಿ ಡಿಸಿಎಂ ಕೆಎಸ್‌ ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಮುಡಾ, ವಾಲ್ಮೀಕಿ ನಿಗಮ ಹಗರಣ ಸಂಬಂಧ ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿಮ್ಮ ಸರ್ಕಾರದಲ್ಲಿ ವಾಲ್ಮೀಕಿ ನಿಗಮ, ಮುಡಾ ಹಗರಣ ನಡೆದಿದೆ. ಪ್ರಕರಣಗಳನ್ನು ಸಿಬಿಐಗೆ ನೀಡಿ, ನೀವು ರಾಜೀನಾಮೆ ತನಿಖೆ ಮುಗಿದು ಕ್ಲಿನ್‌ಚೀಟ್ ಪಡೆದು ಬೇಕಾದರೆ ಮತ್ತೆ ಅಧಿಕಾರಕ್ಕೆ ಬನ್ನಿ ಎಂದು ಸವಾಲು ಹಾಕಿದರು.

Tap to resize

Latest Videos

undefined

ಗಂಗಾರತಿ ಮಾದರಿ ಕಾವೇರಿ ನದಿಗೆ ಆರತಿ: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ ಒಪ್ಪಿಗೆ

ಸಿದ್ದರಾಮಯ್ಯ ಸತ್ಯಹರಿಶ್ಚಂದ್ರ ನಾನೇ ಅಂತ ಹೇಳ್ಕೊಕೊಳ್ತಿದ್ರು. ಆದರೀಗ ಕಾಂಗ್ರೆಸ್ ಸರ್ಕಾರ ನೇರವಾಗಿ ಬಹಿರಂಗವಾಗಿ ಎರಡು ಹಗರಣಗಳಲ್ಲಿ ಬೆತ್ತಲಾಗಿದೆ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳೇ ನೇರ ಭಾಗಿಯಾಗಿದ್ದಾರೆ. ಅದನ್ನು ಮುಚ್ಚಿಕೊಳ್ಳಲು ಬಿಜೆಪಿ ಭ್ರಷ್ಟಾಚಾರದ ತನಿಖೆ ಮಾಡ್ತೇವೆ ಎಂದು ವರಸೆ ತೆಗೆದಿದ್ದಾರೆ. ಬಿಜೆಪಿ ಭ್ರಷ್ಟಾಚಾರದ ಪಟ್ಟಿಯಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಹೆಸರು ತಂದಿದ್ದಕ್ಕೆ ತೀವ್ರ ವಾಗ್ದಾಳಿ ನಡೆಸಿದರು ಈಶ್ವರಪ್ಪ, ಕೋಟಾ ಶ್ರೀನಿವಾಸ್ ಪೂಜಾರಿ ಹೆಸರು ಬಂದಿರೋದಕ್ಕೆ ನೊಂದಿದ್ದೇನೆ. ಪೂಜಾರಿ ಪ್ರಾಮಾಣಿಕ ರಾಜಕಾರಣಿ ಇದು ಬಹಳ ಅನ್ಯಾಯ, ಕೋಟಾ ಶ್ರೀನಿವಾಸ್ ಹೆಸರಿನ ಪಟ್ಟಿ ವಾಪಸ್ ಪಡೆದು ಕೋಟ ಶ್ರೀನಿವಾಸ ಅವರ ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು.

ಛಲವಾದಿ ನಾರಾಯಣಸ್ವಾಮಿ ಮೇಲ್ಮನೆ ಪ್ರತಿಪಕ್ಷದ ನಾಯಕರಾಗಿ ನೇಮಕ!

ಸಿಎಂ ದಾಖಲೆ ಇಲ್ಲದೆ ಆರೋಪ ಮಾಡೊಲ್ಲ ಎಂಬ ಸಚಿವ ಹೆಬ್ಬಾಳ್ಕರ್ ಹೇಳಿಕೆಗೆ ಆಕ್ರೋಶ ವ್ಯಕ್ತಡಿಸಿದ ಈಶ್ವರಪ್ಪ ಅವರು, ಕಾಂಗ್ರೆಸ್ ಹಗರಣದ ಬಗ್ಗೆ ಬಿಜೆಪಿ ಕಾರ್ಯಕರ್ತರು ದಾಖಲೆ ನೀಡ್ತಿದ್ದಾರೆ ಇದಕ್ಕೆ ಏನು ಹೇಳ್ತೀರಿ? ಕಾಂಗ್ರೆಸ್ ಲೂಟಿ ಮಾಡ್ತಾ ಮಾಡ್ತಾ ಮುಚ್ಚಿಕೊಂಡು ಬಂದಿತ್ತು, ಇನ್ಮುಂದೆ ಮುಚ್ಚೋಕೆ ಆಗಲ್ಲ. ಸಿದ್ದರಾಮಯ್ಯ ಜೈಲಿಗೆ ಹೋಗ್ತಾರೆ. ನಾಲ್ಕು ವರ್ಷ ಸರ್ಕಾರ ಇರಲ್ಲ. ಭ್ರಮೆಯಲ್ಲಿ ಇರೋದು ಬೇಡ. ಆದಷ್ಟು ಬೇಗ ಚುನಾವಣೆ ಬರಲಿದೆ ಎಂದು ಭವಿಷ್ಯ ನುಡಿದರು. ಮುಂದುವರಿದು,  ಕಾಂಗ್ರೆಸ್ ಪಕ್ಷದ ಇನ್ನಷ್ಟೂ ಹಗರಣ ಹೊರಗೆ ಬೀಳುತ್ವೆ ನೋಡ್ತಾ ಇರಿ. ಲೂಟಿ ಮಾಡಿದ ಸಿಎಂ ಸೇರಿ ಇನ್ನೂ ಅನೇಕ ಮಂತ್ರಿಗಳ ಬಂಡವಾಳ ಹೊರಗೆ ಬರುತ್ತೆ. ಜೈಲಿಗೆ ಹೋಗಿ ಸಿಎಂ, ಸಚಿವರಿಗೆ ನಾವು ಹಣ್ಣು ಕೊಡಬೇಕು, ಅನುಮಾನ ಬೇಡ ಎಂದು ಟಾಂಗ್ ಕೊಟ್ಟರು.

click me!