
ಮೈಸೂರು (ಸೆ.27): ಸಂಸದ ತೇಜಸ್ವಿ ಸೂರ್ಯ ಬಿಜೆಪಿ ರಾಷ್ಟ್ರೀಯ ಯುವಮೋರ್ಚ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಕರ್ನಾಟಕಕ್ಕೆ ಸಿಕ್ಕ ಮನ್ನಣೆಯಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ ಬಿಜೆಪಿ ಕರ್ನಾಟಕದ ವಿಚಾರದಲ್ಲಿ ಹೆಚ್ಚು ಪ್ರೀತಿ ಹೊಂದಿದೆ. ಅದಕ್ಕಾಗಿ ರಾಷ್ಟ್ರೀಯ ಸಂಘಟನೆಯಲ್ಲಿ ಮೂವರಿಗೆ ಅವಕಾಶ ಸಿಕ್ಕಿದೆ. ಇದು ಕರ್ನಾಟಕದಲ್ಲಿ ಬಿಜೆಪಿ ಶಕ್ತಿಯನ್ನ ಬಿಂಬಿಸುತ್ತದೆ.
ಸಿ.ಟಿ.ರವಿ ಹಾಗೂ ರಾಜೀವ್ ಚಂದ್ರಶೇಖರ್ ಅವರಿಗೆ ಅಭಿನಂದನೆಗಳು ಎಂದು ಪ್ರತಾಪ್ ಸಿಂಹ ಹೇಳಿದರು.
"
ಕರ್ನಾಟಕ ಬಂದ್ ವಿಚಾರ
ರೈತ ಪರ ಕಾಯ್ದೆ ಜಾರಿ ಮಾಡಿದರೆ ರೈತರಿಗೆ ಆಗುವ ಅನುಕೂಲದ ಬಗ್ಗೆ ನಾವು ಯೋಚನೆ ಮಾಡುತ್ತೇವೆ. ಬಂದ್ ಮಾಡುವವರು ಬಂದ್ ನ ಲಾಭದ ಬಗ್ಗೆ ಯೋಚನೆ ಮಾಡುತ್ತಾರೆ. ದಳ್ಳಾಳಿ ವ್ಯವಸ್ಥೆಯಿಂದ ರೈತರನ್ನ ಮುಕ್ತ ಮಾಡುವುದು ತಪ್ಪಾ.?
ರೈತನಿಗೆ ಮತ್ತು ಗ್ರಾಹಕನಿಗೆ ಲಾಭವಿಲ್ಲದ ದಳ್ಳಾಳಿಗೆ ಲಾಭವಿರುವ ಕಾಯ್ದೆ ತಿದ್ದುಪಡಿ ಮಾಡಿದ್ದು ತಪ್ಪಾ.? ಎಪಿಎಂಸಿ ಚುನಾವಣೆ ಲಕ್ಷಾಂತರ ಖರ್ಚು ಮಾಡಿ ಏಕೆ ನಡೆಸುತ್ತಾರೆ.
ಅಮಿತ್ ಶಾ ಭೇಟಿಯಾದ ತೇಜಸ್ವಿ ಸೂರ್ಯ: ಮಹತ್ವದ ಚರ್ಚೆ..!
ಲಾಭವಿಲ್ಲದೆ ಈ ರೀತಿ ಚುನಾವಣೆ ನಡೆಸಲು ಸಾಧ್ಯವೇ.? ರೈತರಿಂದಲೇ ಸೆಸ್ಕ್ ಸುಲಿಗೆ ಮಾಡಿ ಲಾಭ ಮಾಡುತ್ತಿರುವುದಿ ದಳ್ಳಾಳಿಗಳು ಎಂದರು.
ಸೂಪರ್ ಮಾರ್ಕೆಟ್ ಒಳಗೆ ಬಿಟ್ಟುಕೊಂಡಿದ್ದು ಯಾರು. ಈಗ ಅವರೇ ರೈತರ ಬಳಿ ಪದಾರ್ಥ ಖರೀದಿ ಮಾಡ್ತಾರೆ ಅದರಲ್ಲಿ ತಪ್ಪೇನು. ವಿರೋಧ ಮಾಡುವುದಿದ್ದರೇ ಸೂಪರ್ ಮಾರ್ಕೆಟ್‍ಗಳನ್ನೆ ವಿರೋಧ ಮಾಡಬೇಕಿತ್ತು. ಈ ಬಂದ್ ನಲ್ಲಿ ರೈತರು ಭಾಗಿಯಾಗುತ್ತಿಲ್ಲ.
ಆದ್ರೆ ರೈತರ ಹೆಸರಿನ ಸಂಘಟನೆಗಳು ಭಾಗಿಯಾಗುತ್ತಿವೆ. ಈ ಬಂದ್‍ನಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದರು.
ಸರಳ ದಸರಾ ಆಚರಣೆ
ನಾವು ಸರಳ ಹಾಗೂ ಸಾಂಪ್ರದಾಯಿಕ ದಸರಾ ಬಗ್ಗೆ ಯೋಚನೆ ಮಾಡ್ತಿದ್ದೇವೆ ಎಂದ ಪ್ರತಾಪ್ ಸಿಂಹ ಮಹಿಷ ದಸರಾ ಬಗ್ಗೆ ಕ್ಷುಲ್ಲಕ ವಿಚಾರಗಳ ಬಗ್ಗೆ ನಾವು ಚಿಂತನೆಯನ್ನೆ ಮಾಡೋಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.