ಊರಿನ ಜನತೆ ಒಗ್ಗಟ್ಟಾಗಿರಿ, ರಾಜಕಾರಣಕ್ಕಾಗಿ ಬಟ್ಟೆ ಹರಿದು ಕೊಳ್ಳದಿರಿ, ಚುನಾವಣಾಸಮಯ ಮಾತ್ರ ರಾಜಕಾರಣ ಮಾಡಿ, ನಂತರ ಎಲ್ಲರೂ ಒಗ್ಗಟ್ಟಾಗಿ ಗ್ರಾಮದ ಅಭಿವೃದ್ದಿಯತ್ತ ಗಮನ ಹರಿಸಿ, ತಮ್ಮನ್ನೂ ಸೇರಿದಂತೆ ಯಾವುದೇ ರಾಜಕಾರಣಿಗಳನ್ನು ನಂಬಿ ಜೀವನ ಹಾಳುಮಾಡಿ ಕೊಳ್ಳಬೇಡಿ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ಚಿಕ್ಕಬಳ್ಳಾಪುರ (ಜ.12): ಊರಿನ ಜನತೆ ಒಗ್ಗಟ್ಟಾಗಿರಿ, ರಾಜಕಾರಣಕ್ಕಾಗಿ ಬಟ್ಟೆ ಹರಿದು ಕೊಳ್ಳದಿರಿ, ಚುನಾವಣಾಸಮಯ ಮಾತ್ರ ರಾಜಕಾರಣ ಮಾಡಿ, ನಂತರ ಎಲ್ಲರೂ ಒಗ್ಗಟ್ಟಾಗಿ ಗ್ರಾಮದ ಅಭಿವೃದ್ದಿಯತ್ತ ಗಮನ ಹರಿಸಿ, ತಮ್ಮನ್ನೂ ಸೇರಿದಂತೆ ಯಾವುದೇ ರಾಜಕಾರಣಿಗಳನ್ನು ನಂಬಿ ಜೀವನ ಹಾಳುಮಾಡಿ ಕೊಳ್ಳಬೇಡಿ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ಕೇಂದ್ರ ಸರ್ಕಾರದ ವಿರುದ್ಧ ಟೀಕೆ: ತಾಲೂಕಿನ ಅಗಲಗುರ್ಕಿ ಗ್ರಾಮದಲ್ಲಿ ಗುರುವಾರ ನೂತನ ಗ್ರಾಮ ಪಂಚಾಯತಿ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿ, ಚಂದ್ರಯಾನಕ್ಕೆ ಹೋಗುವ ತಂತ್ರಜ್ಞಾನ ನಮ್ಮಲ್ಲಿದೆ. ಆದರೆ ಬೀದಿಗಳಲ್ಲಿ ಲೈಟ್ ಇದೆಯೋ ಇಲ್ಲವೂ ಗೊತ್ತಿಲ್ಲ. ಚಂದ್ರಲೋಕದಲ್ಲಿ ನೀರನ್ನು ಹುಡುಕುತ್ತೇವೆ ಆದರೆ ಬೀದಿಗಳಲ್ಲಿರುವ ನಳಗಳಲ್ಲಿ ನೀರು ಬರುತ್ತದೋ ಇಲ್ಲವೂ ನೋಡುವುದಿಲ್ಲಾ ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸಿದರು.
ಕಾಂಗ್ರೆಸ್ ಪಕ್ಷ ಜಾತಿಗೊಂದು ಡಿಸಿಎಂ ಸ್ಥಾನ ನೀಡುತ್ತಿದೆ: ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯ
ಬಿಜೆಪಿ ಸರ್ಕಾರ ಬಡವರ ವಿರೋಧಿ. ಅದು ಏನಿದ್ದರೂ ಹೊಟ್ಟೆ ತುಂಬಿದವರ ಬಗ್ಗೆ ಮಾತ್ರ ಕಾಳಜಿ ತೋರಿಸುತ್ತದೆ. ಮೃಷ್ಟಾನ್ನ ಭೋಜನ ಉಣ್ಣುವ ಅಂಬಾನಿ ಅದಾನಿ ಅವರಿಗೆ ಲಾಭದ ಹಾಸಿಗೆ ಹಾಕುವ ಸಂಸ್ಕೃತಿ ಬಿಜೆಪಿಗಿದ್ದರೆ, ಬಡವರಿಗೆ ಹೊಟ್ಟೆಗೆ ಅನ್ನ, 200 ಯೂನಿಟ್ ಉಚಿತ ವಿದ್ಯುತ್, ಮನೆನಿರ್ವಹಣೆಗೆ 2 ಸಾವಿರ ರುಪಾಯಿ ಹಣ, ಉಚಿತ ಬಸ್ ಸೇವೆ, ನಿರುದ್ಯೋಗಿಗಳಿಗೆ ಭತ್ಯೆ,ಇದು ನಮ್ಮ ಬದ್ಧತೆ ಎಂದರು.
ಕ್ಷೇತ್ರಕ್ಕೆ ₹25 ಕೋಟಿ ಅನುದಾನ: ನನ್ನ ಅವಧಿಯಲ್ಲಿ ಕೈಲಾದಷ್ಟು ಅನುದಾನ ತಂದು ಅಭಿವೃದ್ಧಿ ಮಾಡಿ ತೋರಿಸುತ್ತೇನೆ. ಇದುವರೆಗೂ 25 ಕೋಟಿ ಅನುದಾನ ತಂದಿದ್ದೇನೆ. ಚುನಾವಣೆ ಬರಲಿ ಬಾರದಿರಲಿ, ಗೆಲುವು ಕಾಣಲಿ, ಸೋಲೇ ಆಗಿ ಸಮಾಜಸೇವೆ ಮಾತ್ರ ನಿರಂತರವಾಗಿ ಸಾಗಲಿದೆ ಎಂದು ಸ್ಪಷ್ಟಪಡಿಸಿ, ಯಾರೇ ಜನತೆ ಸರ್ಕಾರಿ ಕಚೇರಿಗಳಿಗೆ ಬಂದರೆ ಅವರ ಕೆಲಸ ಮಾಡಿ ಕೊಡಿ ವೃತಾ ಅಲೆಸಬೇಡಿ ಎಂದು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ಈವರೆಗೆ ₹15 ಕೋಟಿ ವೆಚ್ಚ: ನಾನು ಶಾಸಕನಾಗಿ ಏಳು ತಿಂಗಳಾಗಿದೆ. ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆ ಈಡೇರಿಸಲು ಕ್ಷೇತ್ರದಲ್ಲಿ 15 ಕೋಟಿಗೂ ಅಧಿಕ ಹಣ ಈವರೆಗೆ ಖರ್ಚು ಮಾಡಿದ್ದೇನೆ. ಅನಾಥ ಹುಡುಗನಿಗೆ ವಿಧಾನ ಸೌಧಕ್ಕೆ ಹೋಗುವ ದಾರಿ ತೋರಿದ ನಿಮ್ಮ ಋಣ ತೀರಿಸಲು ಖರ್ಚು ಮಾಡಿದ್ದೇನೆ ಎಂದು ಹೇಳಿದರು.
ಭ್ರಷ್ಟಾಚಾರದಿಂದ ನೆಮ್ಮದಿಯ ಬದುಕಿಲ್ಲ: ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ
ಕಾರ್ಯಕ್ರಮದಲ್ಲಿ ತಾ.ಪಂ ಇ ಓ ಮಂಜುನಾಥ್, ಇಂಜನೀಯರ್ ಜಗದೀಶ್,ಪಿಡಿಓ ಆಶ್ವತ್, ಗ್ರಾಮ ಪಂಚಾಯತಿಯ ಅಧ್ಯಕ್ಷ ನರಸಿಂಹಮೂರ್ತಿ, ಉಪಾಧ್ಯಕ್ಷೆ ಸದಸ್ಯ ಚಂದ್ರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಂ,ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ್, ಮುಖಂಡರಾದ ಪಿ.ಎಂ.ರಘು, ಡ್ಯಾನ್ಸ್ ಶ್ರೀನಿವಾಸ್,ಕೋಲಾಟ್ಲು ರಾಮಚಂದ್ರ,ವಿನಯ್ ಬಂಗಾರಿ,ಅಲ್ಲು ಅನಿಲ್, ಕದಸಂಸ ರಾಜ್ಯಸಂಚಾಲಕ ಸುಧಾ ವೆಂಕಟೇಶ್, ವೆಂಕಟರವಣಪ್ಪ, ಮತ್ತಿತರರು ಇದ್ದರು.