ಬಿಜೆಪಿಯವರು ನನ್ನನ್ನು ವಿಷ್ಣುವಿನ ಅವತಾರದಲ್ಲಿ ನೋಡುತ್ತಿದ್ದಾರೆ: ಶಾಸಕ ಪ್ರದೀಪ್ ಈಶ್ವರ್ ವ್ಯಂಗ್ಯ

Published : Oct 28, 2025, 11:58 AM IST
Pradeep Eshwar

ಸಾರಾಂಶ

ನವೆಂಬರ್ ಕ್ರಾಂತಿ ಅಂದ್ರೆ ಅಶೋಕಣ್ಣನ ಚೇರ್‌ಗೆ ಸುನಿಲ್ ಅಣ್ಣ ಬರುತ್ತಿದ್ದಾರೆ. ಖಂಡಿತವಾಗಿ ನವೆಂಬರ್ ಕ್ರಾಂತಿ ಆಗುತ್ತೆ. ಸುನಿಲ್ ಅವರು ಅಶೋಕಣ್ಣನ ಚೇರ್ ಕಿತ್ತುಕೊಂಡು ಹೊರಟು ಹೋಗುತ್ತಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ಬೆಂಗಳೂರು (ಅ.28): ನವೆಂಬರ್ ಕ್ರಾಂತಿ ಅಂದ್ರೆ ಅಶೋಕಣ್ಣನ ಚೇರ್‌ಗೆ ಸುನಿಲ್ ಅಣ್ಣ ಬರುತ್ತಿದ್ದಾರೆ. ಖಂಡಿತವಾಗಿ ನವೆಂಬರ್ ಕ್ರಾಂತಿ ಆಗುತ್ತೆ. ಸುನಿಲ್ ಅವರು ಅಶೋಕಣ್ಣನ ಚೇರ್ ಕಿತ್ತುಕೊಂಡು ಹೊರಟು ಹೋಗುತ್ತಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು. ನಂತರ ಮಾತನಾಡಿದ ಅವರು, ಅಶೋಕಣ್ಣ ಪದ್ಮನಾಭನಗರದಲ್ಲಿ ಜೋತಿಷ್ಯಾಲಯ ಚಾಪೆ ಮೇಲೆ ಕುಳಿತುಕೊಂಡಿರುತ್ತಾರೆ. ಇದೆ ನವೆಂಬರ್ ಕ್ರಾಂತಿ. ಅಶೋಕಣ್ಣ ಪದೇ ಪದೇ ಅಕ್ಟೋಬರ್, ನವೆಂಬರ್ ಕ್ರಾಂತಿ ಅನ್ನೋದನ್ನ ನೋಡಿದ್ರೆ ಅಕ್ಟೋಬರ್‌ ಕ್ರಾಂತಿಯಲ್ಲಿ ಅಶೋಕಣ್ಣನ ಷಡ್ಯಂತ್ರ ಇದೆ ಅನಿಸುತ್ತೆ ಎಂದರು.

ಕಾಂಗ್ರೆಸ್‌ನಲ್ಲಿ ನವೆಂಬರ್ ಕ್ರಾಂತಿ ಚರ್ಚೆ ವಿಚಾರವಾಗಿ, ನವೆಂಬರ್ 15 ರಿಂದ 30ರವರೆಗೆ ಬದಲಾವಣೆ ಇರಬಹುದು ಅಂತ ನಮ್ಮ ಪಕ್ಷದವರು ಮಾತನಾಡುತ್ತಿದ್ದಾರೆ. ಬಹುಶಃ ಇರಬಹುದೇನೋ. ಆದ್ರೆ ಸಿಎಂ ಯಾರಾಗಬೇಕು, ಡಿಸಿಎಂ ಯಾರಾಗಬೇಕು ಅಂತ ಮಾತನಾಡುವಷ್ಟು ದೊಡ್ಡವನಲ್ಲ. ನಾನು ಒಬ್ಬ ಎಂಎಲ್ಎ. ಎಲ್ಲ ಸಮುದಾಯದವರು ಸಿಎಂ ಆಗಬೇಕು ಅಂತ ನನಗೆ ಆಸೆ ಇರುತ್ತೆ ಎಂದರು. ಪ್ರದೀಪ್ ಈಶ್ವರ್ ಸಚಿವನಾಗುವ ವಿಚಾರವಾಗಿ, ಬಿಜೆಪಿ ಅವರು ನನ್ನನ್ನು ವಿಷ್ಣುವಿನ ಅವತಾರದಲ್ಲಿ ನೋಡುತ್ತಿದ್ದಾರೆ.

ಅವರು ಹಂದಿ ಅನ್ನೋ ಪದ ಬಳಸಿದ್ದಾರೆ. ವಿಷ್ಣು ಹಂದಿ ರೂಪ ತಾಳಿ ಸಂಹಾರ ಮಾಡಿದ್ರು. ಅವರು ವಿಷ್ಣುವಿನ ಅವತಾರದಲ್ಲಿ ನನ್ನನ್ನು ನೋಡಿದಾಗ ರಾಜಭವನಕ್ಕೆ ಹೋಗೋದ್ರಲ್ಲಿ ತಪ್ಪಿಲ್ಲ. ಆಸೆ ಯಾರಿಗಿರಲ್ಲ. ನಾನು ಸಿಎಂ ಮತ್ತು ಡಿಸಿಎಂ ಸಾಹೇಬ್ರ ಪ್ರೀತಿಯ ಪುತ್ರ. ನಾನು ಪ್ರಮಾಣವಚನ ಸ್ವೀಕರಿಸದೇ ಇದ್ರೂ ನಮ್ಮ ಸ್ನೇಹಿತರು ಪ್ರಮಾಣ ವಚನ ಸ್ವೀಕರಿಸುವುದನ್ನ ನೋಡಲು ರಾಜಭವನಕ್ಕೆ ಹೋಗುತ್ತೇನೆ ಎಂದರಲ್ಲದೇ ಪ್ರತಾಪ್‌ ಸಿಂಹ ವಿಚಾರವಾಗಿ ಪ್ರದೀಪ್ ಈಶ್ವರ್ ಸೈಲೆಂಟ್ ಆಗಿರುವ ವಿಚಾರವಾಗಿ Agree to disagree ಇದನ್ನು ಚಾರ್ಟ್ ಜಿಪಿಟಿಯಲ್ಲಿ ನೋಡಲು ಹೇಳಿ ಎಂದು ಸಲಹೆಯನ್ನು ಕೊಟ್ಟರು.

ಕೀಳು ಭಾಷೆ ಬಳಸಿ ವೈಯಕ್ತಿಕ ನಿಂದನೆ

ಮಾಜಿ ಸಂಸದ ಮತ್ತು ಹಾಲಿ ಶಾಸಕರ ನಡುವೆ ನಡೆದ ವೈಯಕ್ತಿಕ ವಾಗ್ದಾಳಿ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ಮೈಸೂರು-ಕೊಡಗು ಮಾಜಿ ಸಂಸದ ಪ್ರತಾಪ್‌ ಸಿಂಹ ಮತ್ತು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ತೀರಾ ವೈಯಕ್ತಿಕ ಮಟ್ಟದ ಕೀಳು ಭಾಷೆ ಬಳಸಿ ಪರಸ್ಪರ ನಿಂದಿಸಿಕೊಂಡಿದ್ದಾರೆ. ಇವರ ಮಾತುಗಳನ್ನು ಕೇಳಿದ ಜನರು ಇಬ್ಬರಿಗೂ ಹಿರಿಯರು ಬುದ್ಧಿವಾದ ಹೇಳುವುದು ಒಳಿತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ನಡುವೆ ಮಾಜಿ ಸಂಸದ ಮತ್ತು ಶಾಸಕರ ಪಕ್ಷಗಳ ಮುಖಂಡರು ಇಬ್ಬರಿಗೂ ಅನೇಕ ಹಿರಿಯರು ಹಿತವಚನ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ
ಬಂಗಾರಪ್ಪ ಅವರ ಹೆಸರಿಗೆ ತಕ್ಕ ರೀತಿ ಮಧು ಮಾತನಾಡಲಿ: ಆರಗ ಜ್ಞಾನೇಂದ್ರ ತಿರುಗೇಟು