ಹಿಂದೂಗಳ ಭಾವನೆಗೆ ಅಪಮಾನ‌ ಮಾಡುವುದೇ ಕಾಂಗ್ರೆಸ್ ಸರ್ಕಾರದ ಸಂಸ್ಕೃತಿ: ಶಾಸಕ ಯತ್ನಾಳ್‌

By Kannadaprabha News  |  First Published Jan 20, 2024, 11:50 AM IST

ಮುಖ್ಯಮಂತ್ರಿ ಸಿದ್ದರಾಮಯ್ಯ ನಿಜವಾದ ಜಾತ್ಯಾತೀತರಾಗಿದ್ದರೆ 22ರಂದು ರಾಜ್ಯದಲ್ಲಿ ರಜೆ ಘೋಷಿಸಲಿ ಎಂದು ಬಿಜೆಪಿ ನಾಯಕ ಬಸವನಗೌಡ ಯತ್ನಾಳ್ ಸವಾಲು ಹಾಕಿದ್ದಾರೆ.
 


ಉಡುಪಿ (ಜ.19): ಮುಖ್ಯಮಂತ್ರಿ ಸಿದ್ದರಾಮಯ್ಯ ನಿಜವಾದ ಜಾತ್ಯಾತೀತರಾಗಿದ್ದರೆ 22ರಂದು ರಾಜ್ಯದಲ್ಲಿ ರಜೆ ಘೋಷಿಸಲಿ ಎಂದು ಬಿಜೆಪಿ ನಾಯಕ ಬಸವನಗೌಡ ಯತ್ನಾಳ್ ಸವಾಲು ಹಾಕಿದ್ದಾರೆ. ಉಡುಪಿಯಲ್ಲಿ ಸದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಒಂದು ಕೋಮಿನ ಪರವಾಗಿದ್ದಾರೆ ಎಂಬ ಆರೋಪದಿಂದ ಹೊರಗೆ ಬರುವುದಕ್ಕೆ ಇದೊಂದು ಒಳ್ಳೆಯ ಅವಕಾಶ, ಈ ಅವಕಾಶವನ್ನು ಬಳಸಿಕೊಳ್ಳುವ ಸದ್ಬುದ್ದಿಯನ್ನು ಪ್ರಭು ಶ್ರೀರಾಮ ಅವರಿಗೆ ನೀಡಲಿ. ಎಷ್ಟೋ ಜನರಿಗೆ ರಾಮ ಬುದ್ದಿ ನೀಡಿದ್ದಾನೆ, ಸಿದ್ದರಾಮಯ್ಯರಿಗೂ ಕೊಡಬಹುದು ನೋಡೋಣ ಎಂದವರು ಹೇಳಿದರು.

ಹಿಂದೂಗಳ ಭಾವನೆಗೆ ಅಪಮಾನ‌ ಮಾಡುವುದೇ ಕಾಂಗ್ರೆಸ್ ಸರ್ಕಾರದ ಸಂಸ್ಕೃತಿಯಾಗಿದೆ. ಅವರ ಹೇಳಿಕೆ, ನಡವಳಿಕೆ ನೋಡಿದರೇ ಹಿಂದೂಗಳಿಗೆ ಅಪಮಾನ ಮಾಡಿ‌ದರೆ ಮುಸ್ಲೀಂ‌ ಮತಗಳು ಹೆಚ್ಚುತ್ತವೆ ಎನ್ನುವ ಭಾವನೆ ಇರಬಹುದು. ದೇಶದ ಪ್ರತಿಯೊಬ್ಬನ ಮನಸಲ್ಲಿ ರಾಮ ಮಂದಿರದ ಸಂಭ್ರಮ ಇದೆ, ಇಂತಹ ಗಳಿಗೆಯಲ್ಲಿ ಅಪಶಬ್ದಗಳನ್ನು ನುಡಿಯುವುದು ಟೀಕಿಸುವುದು ಅವರ ಕಾಂಗ್ರೆಸ್ ಪಕ್ಷದ ನಾಶ ಆರಂಭ ಎಂದವರು ಭವಿಷ್ಯ ನುಡಿದರು.

Tap to resize

Latest Videos

undefined

ಒಂದು ವರ್ಗದ ಓಲೈಕೆಗೆ ಕಾಂಗ್ರೆಸ್ ರಾಮಮಂದಿರಕ್ಕೆ ವಿರೋಧ: ಶೋಭಾ ಕರಂದ್ಲಾಜೆ

ಚುನಾವಣೆವರೆಗೆ ಸೈಲೆಂಟ್: ನಾನು ಸೈಲೆಂಟ್ ಆಗಿಲ್ಲ, ಪಕ್ಷದ ವರಿಷ್ಟರು ಕರೆದಾಗ ಹೋಗಿ ನನ್ನ ಭಾವನೆ ಹೇಳಿದ್ದೇನೆ. ಸದ್ಯಕ್ಕೆ ನಮ್ಮ ಮುಂದೆ ಮೋದಿ ಮತ್ತೋಮ್ಮೆ ಪ್ರಧಾನಿ ಆಗಬೇಕು ಎನ್ನುವ ಗುರಿ ಇದೆ. ಆಗದಿದ್ದರೆ ಇಂಡಿಯಾ ಅಲಯನ್ಸ್ ಕೈಗೆ ದೇಶ ಸಿಕ್ಕರೆ ಹೇಗೆ ಎಂಬ ಆತಂಕ ಇದೆ. ಆದ್ದರಿಂದ ಭಿನ್ನಮತ ಅಪಸ್ವರಗಳಿಗೆ ಲೋಕಸಭಾ ಚುನಾವಣೆವರೆಗೆ ಬ್ರೇಕ್ ಹಾಕಿ, ಎಲ್ಲರೂ ಪಕ್ಷದ್ರೋಹ ಮಾಡದೆ ಒಗ್ಗಟ್ಟಾಗಿ ಕೆಲಸ ಮಾಡಲು‌ ನಿರ್ಧಾರ ಮಾಡಿದ್ದೇವೆ, ಇದನ್ನು ಇಲ್ಲಿ ಕೃಷ್ಣಮಠದಲ್ಲಿ ನಿಂತು ಹೇಳುತಿದ್ದೇನೆ ಎಂದರು.

ಲೊಕಸಭಾ ಚುನಾವಣೆ ಮುಗಿಯುವವರೆಗೆ ಯಾವುದೇ ತಗಾದೆ ಇಲ್ಲ, ಅದರೋಳಗೆ ಪಕ್ಷವನ್ನು ಮೇಲಿನವರೇ ಎಲ್ಲಾ ರಿಪೇರಿ ಮಾಡಿದರೆ ಒಳ್ಳೆಯದು, ಮಾಡ್ತಾರೆ ಅನ್ನೋ ವಿಶ್ವಾಸ ಇದೆ ಎಂದರು. ನಾನು ಯಾವುದೇ ಸ್ಥಾನ ದ ಆಕಾಂಕ್ಷಿ ಅಲ್ಲ, ನನ್ನ ವೈಯುಕ್ತಿಕ ಕಾರಣಕ್ಕೆ ಮಾತನಾಡುವುದಿಲ್ಲ, ಪಕ್ಷ ಸಿದ್ದಾಂತ ದ ಹಿತದೃಷ್ಟಿಯಿಂದ, ವಂಶವಾದ, ಭ್ರಷ್ಟಾಚಾರ, ಸಿದ್ದಾಂತ ತಪ್ಪಿದರೆ ಮಾತ್ರ ನಾನು ಮಾತನಾಡುವುದು ಎಂದರು.

ಲೋಕಸಭೆ ಚುನಾವಣೆಗೆ ಸ್ಪರ್ಧೆ ಇಲ್ಲ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸ್ಪಷ್ಟನೆ

ಕೇಂದ್ರಕ್ಕೆ ಹೋಗುವ ಯೋಚನೆ ಇಲ್ಲ, ರಾಜ್ಯ ರಾಜಕಾರಣದಲ್ಲಿ ರೋಸಿ ಹೋಗಿಲ್ಲ, ಬಹಳ ಸೂಕ್ಷ್ಮ ವಾಗಿ ನಾನು ಯೋಜನೆ ಮಾಡಿದ್ದೇನೆ, ನನಗೆ ಅಧಿಕಾರ ಕೊಡಿ ಎಂದು ನಾನು ಯಡಿಯೂರಪ್ಪ, ಬೊಮ್ಮಾಯಿ, ಕೇಂದ್ರ ನಾಯಕರ ಕಾಲು ಹಿಡಿಲಿಲ್ಲ. ಈ ಬಾರಿ ನನ್ನನ್ನು ವಿಪಕ್ಷ ನಾಯಕ ಮಾಡಬೇಕು ಎಂದು ಬಹಳಷ್ಟು ಶಾಸಕರು ಹೇಳಿದ್ದರು. ಬಹುಶಃ ವರಿಷ್ಠರು ಚುನಾವಣೆ ಉದ್ದೇಶದಿಂದ ಬೇರೆ ನಿರ್ಧಾರ ಮಾಡಿದ್ದಾರೆ, ಅದನ್ನು ಒಪ್ಪಿಕೊಂಡು ನಾನು ಸುಮ್ಮನಿದ್ದೇನೆ ಎಂದರು.

click me!