ಅವರನ್ನು ಹೊಣೆ ಮಾಡುವುದು ಸರಿಯಲ್ಲ : ಡಿಕೆ ಬ್ರದರ್ಸ್ ಪರವಾಗಿ ಮಾತಾಡಿದ ಸಚಿವ ಸುಧಾಕರ್

Kannadaprabha News   | stockphoto
Published : Nov 12, 2020, 08:09 AM IST
ಅವರನ್ನು ಹೊಣೆ ಮಾಡುವುದು ಸರಿಯಲ್ಲ : ಡಿಕೆ ಬ್ರದರ್ಸ್ ಪರವಾಗಿ ಮಾತಾಡಿದ ಸಚಿವ ಸುಧಾಕರ್

ಸಾರಾಂಶ

ಸಚಿವ ಸುಧಾಕರ್ ಡಿಕೆ ಸಹೋದರರ ಪರವಾಗಿ ಮಾತನಾಡಿದ್ದಾರೆ. ಅವರನ್ನು ಹೊಣೆ ಮಾಡುವುದು ಸರಿಯಲ್ಲ ಎಂದಿದ್ದಾರೆ. 

ಮೈಸೂರು (ನ.12): ಬೆಂಗಳೂರಿನ ಆರ್‌ಆರ್‌ ನಗರ ಉಪಚುನಾವಣೆ ವಿಚಾರದಲ್ಲಿ ಆ ಕ್ಷೇತ್ರದ ವಾಸ್ತವ ಅರಿತುಕೊಳ್ಳುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆ. 

ಸೋಲಿಗೆ ಕೇವಲ ಡಿಕೆ ಬ್ರದರ್ಸ್‌ ಹೊಣೆ ಮಾಡುವುದು ಸರಿಯಲ್ಲ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ. 

ಮೈಸೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಅವರ ತಮ್ಮ ಸಂಸದ ಡಿ.ಕೆ.ಸುರೇಶ್‌ ಕಷ್ಟಪಟ್ಟು ಚುನಾವಣೆಯಲ್ಲಿ ಓಡಾಡಿದ್ದಾರೆ. ಅವರಿಬ್ಬರನ್ನೇ ಯಾಕೆ ಸೋಲಿಗೆ ಹೊಣೆ ಮಾಡುವುದು? ಇಡೀ ಕಾಂಗ್ರೆಸ್‌ ಪಕ್ಷ ಆರ್‌ಆರ್‌ ನಗರ ಉಪಚುನಾವಣೆಯಲ್ಲಿ ಎಡವಿದೆ ಎಂದರು.

ಕೊಲೆಯಾದ ಬಿಜೆಪಿಗ ಯೋಗೇಶ್ ಪತ್ನಿ ಕೈ ಸೇರ್ಪಡೆ : ಮೂಲ ಕಾರಣ ಏನು..? .

 ಆರ್‌ಆರ್‌ ನಗರದಲ್ಲಿ 50,000 ಲೀಡ್‌ನಲ್ಲಿ ಗೆಲ್ತೀವಿ ಅಂತ ನಾನು ಮೊದಲೇ ಹೇಳಿದ್ದೆ. ಈಗ ಅದೇ ರೀತಿಯ ಚುನಾವಣೆ ಫಲಿತಾಂಶ ಬಂದಿದೆ. ಸಂಪುಟ ಪುನಾರಚನೆ ಉಸಾಬರಿ ನಮಗೆ ಯಾಕೆ? ಸಂಪುಟ ವಿಸ್ತರಣೆಯೋ, ಪುನಾರಚನೆಯೋ, ಏನು ಮಾಡಬೇಕು ಎಂಬುದು ಸಿಎಂ ಪರಮಾಧಿಕಾರ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

CM-DCM ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಸಿದ್ದರಾಮಯ್ಯ ಪುತ್ರ ಶಾಕಿಂಗ್ ಹೇಳಿಕೆ
ಸಿಎಂ ಸಿದ್ದರಾಮಯ್ಯಗೆ ಸುಪ್ರೀಂಕೋರ್ಟ್‌ ನೋಟೀಸ್: ವರುಣಾ ಕ್ಷೇತ್ರದ ಆಯ್ಕೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ