ಪಕ್ಷ, ಜಾತಿ ಓಲೈಸುವ ಉದ್ದೇಶಕ್ಕಾಗಿ ಈ ಹಿಂದೆ ಅನರ್ಹರಿಗೆ ನಿವೇಶನ ನೀಡಲಾಗಿದೆ. ಸಾರ್ವಜನಿಕ ಕೆಲಸಕ್ಕೆ ಪಕ್ಷಭೇದ ಮಾಡುವುದು ಸೇರಿ ಹಲವು ಅವ್ಯವಹಾರ ನಡೆಸಿರುವ ಬಿಜೆಪಿಗೆ ಮತದಾರರ ತಕ್ಕ ಪಾಠ ಕಲಿಸಿದ್ದಾರೆ. ಕಾಂಗ್ರೆಸ್ ಪಕ್ಷ ಯಾವುದೇ ಜಾತಿ, ಮತ, ಪಂಥ ನೋಡದೇ ಎಲ್ಲರಿಗೂ ಸರಿಸಮಾನವಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದ ಸಚಿವ ಆರ್.ಬಿ.ತಿಮ್ಮಾಪುರ
ಲೋಕಾಪುರ(ನ.01): ಬಡವರ ಪರವಾದ ಕಾರ್ಯಕ್ರಮ ನೀಡುವುದು ಕಾಂಗ್ರೆಸ್ ಪಕ್ಷ ಮಾತ್ರ. ಇದನ್ನು ಮತದಾರರು ಮನಗಂಡು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಸಮೀಪದ ಲಕ್ಷಾನಟ್ಟಿ ಗ್ರಾಮದಲ್ಲಿ ಸಾರ್ವಜನಿಕರ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷ, ಜಾತಿ ಓಲೈಸುವ ಉದ್ದೇಶಕ್ಕಾಗಿ ಈ ಹಿಂದೆ ಅನರ್ಹರಿಗೆ ನಿವೇಶನ ನೀಡಲಾಗಿದೆ. ಸಾರ್ವಜನಿಕ ಕೆಲಸಕ್ಕೆ ಪಕ್ಷಭೇದ ಮಾಡುವುದು ಸೇರಿ ಹಲವು ಅವ್ಯವಹಾರ ನಡೆಸಿರುವ ಬಿಜೆಪಿಗೆ ಮತದಾರರ ತಕ್ಕ ಪಾಠ ಕಲಿಸಿದ್ದಾರೆ. ಕಾಂಗ್ರೆಸ್ ಪಕ್ಷ ಯಾವುದೇ ಜಾತಿ, ಮತ, ಪಂಥ ನೋಡದೇ ಎಲ್ಲರಿಗೂ ಸರಿಸಮಾನವಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು. ಈ ಹಿಂದೆ ಮುಧೋಳ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಗೋವಿಂದ ಕಾರಜೋಳ ಅವರೇ ಜಲಸಂಪನ್ಮೂಲ ಸಚಿವರಾಗಿದ್ದರೂ ಕೂಡ ಈ ಭಾಗದ ನೀರಾವರಿ ಕಾಲುವೆಗಳತ್ತ ಗಮನಹರಿಸಿಲ್ಲ. ಇದರಿಂದಾಗಿ ಕಾಲುವೆಗಳಲ್ಲಿ ಹೂಳುತುಂಬಿಕೊಂಡು ರೈತರ ಜಮೀನುಗಳಿಗೆ ನೀರು ತಲುಪದಂತಾಗಿದೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
undefined
ಸಿಎಂ ಬದಲಾವಣೆ ಬಗ್ಗೆ ಚರ್ಚೆ ಆಗಿಲ್ಲ, ಕೇವಲ ಮಾಧ್ಯಮಗಳಲ್ಲಿ ವದಂತಿ ಅಷ್ಟೇ: ಸಚಿವ ತಿಮ್ಮಾಪೂರ
ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ಲೋಕಾಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭೀಮನಗೌಡ ಪಾಟೀಲ, ಹಿರಿಯರಾದ ನಾಮದೇವ ಪಾಟೀಲ, ಲೋಕಣ್ಣ ಕೊಪ್ಪದ, ಗೋಪಾಲಗೌಡ ಪಾಟೀಲ, ಹಣಮಂತಗೌಡ ಪಾಟೀಲ, ಭೀಮಶೆಪ್ಪ ಮೆಳ್ಳಿಗೇರಿ, ಯಲ್ಲಪ್ಪ ನಾಯ್ಕ, ಭೀಮನಗೌಡ ಖಜ್ಜಿಡೋಣಿ, ಲೋಕಣ್ಣ ಕನಕಪ್ಪನವರ, ವೆಂಕಣ್ಣ ಕಮಕೇರಿ, ರಾಜುಗೌಡ ನ್ಯಾಮಗೌಡರ, ಎಂ.ಎಂ.ಹುಂಡೇಕಾರ, ಮುತ್ತಪ್ಪ ಚೌಧರಿ, ರೆಹಮಾನ್ ತೊರಗಲ್, ಹಣಮಂತ ಮಾಳೇದ, ತಹಶೀಲ್ದಾರ ವಿನೋದ ಹತ್ತಳ್ಳಿ, ಸಮಾಜ ಕಲ್ಯಾಣ ಅಧಿಕಾರಿ ಮೊಹನ ಕೋರಡ್ಡಿ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.