
ಬಾಗಲಕೋಟೆ (ಅ.19) ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರ ಬದಲಾವಣೆ ಚರ್ಚೆಗಳು ಕೇಳಿಬರುತ್ತಿದ್ದಂತೆ ಸಿಎಂ ಸ್ಥಾನಾರ್ಥಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದ ನಾಯಕರು 5 ವರ್ಷ ಸಿಎಂ ಬದಲಾವಣೆ ಇಲ್ಲ ಎಂದರೆ, ಇತ್ತ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಪ್ತ ನಾಯಕರು ಅಧಿಕಾರ ಬದಲಾವಣೆ ಕುರಿತು ಮಾತನಾಡಿದ್ದಾರೆ. ಈ ಬೆಳವಣಿಗೆ ನಡುವೆ ಇದೀಗ ಅಬಕಾರಿ ಸಚಿವ ಆರ್‌ಬಿ ತಿಮ್ಮಾಪೂರ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಸತೀಶ್ ಜಾರಕಿಹೊಳಿ ಮುಂದಿನ ಮುಖ್ಯಮಂತ್ರಿ ಎಂದು ಆರ್‌ಬಿ ತಿಮ್ಮಾಪೂರ ಹೇಳಿದ್ದಾರೆ.
ಮುಧೋಳದಲ್ಲಿ ಜಡಗಣ್ಣ- ಬಾಲಣ್ಣ ಕಂಚಿನ ಮೂರ್ತಿ ಅನಾವರಣ ಹಾಗೂ ವಾಲ್ಮೀಕಿ ಜಯಂತಿ ಕಾರ್ಯಕ್ರಮ ವೇಳೆ ಮಾತನಾಡಿದ ಆರ್‌ಬಿ ತಿಮ್ಮಾಪೂರ, ಈ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ ಎಂದಿದ್ದಾರೆ. ಸ್ವಾಗತ ಭಾಷಣ ಮಾಡುತ್ತಾ ಆರ್‌ಬಿ ತಿಮ್ಮಾಪೂರ, ವೇದಿಕೆಯಲ್ಲಿರುವ ನನ್ನ ನಾಯಕ, ಮುಂದಿನ ಎಲ್ಲರ ನಿರೀಕ್ಷೆಯಲ್ಲಿರುವ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ ಎಂದಿದ್ದಾರೆ. ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿಯಾಗುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಸತೀಶ್ ಜಾರಕಿಹೊಳಿ ಯಾರದೋ ಕೃಪೆಯಿಂದ ಮುಖ್ಯಮಂತ್ರಿ ಆಗುವುದಲ್ಲ, ಅವರ ಸ್ವಂತ ಶಕ್ತಿಯಿಂದ ಮುಖ್ಯಮಂತ್ರಿ ಆಗುತ್ತಾರೆ. ಅಭಿವೃದ್ಧಿ ಕಾರ್ಯಗಳ ಮೂಲಕ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗುತ್ತಾರೆ. ಸತೀಶ್ ಜಾರಕಿಹೊಳಿ ಒಂದಲ್ಲ ಒಂದು ದಿನ ಈ ನಾಡಿನ ಮುಖ್ಯಮಂತ್ರಿ ಆಗುತ್ತಾರೆ ಎಂದು ಆರ್‌ಬಿ ತಿಮ್ಮಾಪೂರ ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗಲು ಬಿಜೆಪಿ ನಾಯಕ ರಾಜು ಗೌಡ ಸಲಹೆ ನೀಡಿದ್ದರು. ಸತೀಶ್ ಜಾರಕಿಹೊಳಿಯನ್ನು ಹಾಡಿ ಹೊಗಳಿದ್ದ ರಾಜು ಗೌಡ, ನವೆಂಬರ್, ಡಿಸೆಂಬರ್ ಒಳಗೆ ಮುಖ್ಯಮಂತರಿ ಆಗಲು ಸತೀಶ್ ಜಾರಕಿಹೊಳಿಗೆ ಸೂಚಿಸಿದ್ದರು.ಸತೀಶ್ ಜಾರಕಿಹೊಳಿಯನ್ನ ಸ್ವತಂತ್ರ ವೀರ ಯೋಧ ಜಡಗಣ್ಣ ಬಾಲಣ್ಣಗೆ ಹೋಲಿಸಿದ ರಾಜುಗೌಡ, ಸತೀಶ್ ಜಾರಕಿಹೊಳಿ ಶಸ್ತ್ರತ್ಯಾಗ ಮಾಡಬಾರದು. ಈ ಬಾರಿ ನಾನು ಮುಖ್ಯಮಂತ್ರಿ ಅಭಿಲಾಷೆ ಇಲ್ಲ, ಮುಂದಿನಸಾರಿ ಎಂದು ಜಾರಕಿಹೊಳಿ ಹೇಳುತ್ತಿದ್ದಾರೆ. ಅವೆಲ್ಲಾ ಬೇಡ ಇದೇ ಡಿಸೆಂಬರ್‌ನಲ್ಲಿ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗಬೇಕು ಎಂದು ರಾಜುಗೌಡ ಆಶಿಸಿದ್ದರು.
2028ಕ್ಕೆ ಸಿಎಂ ಸ್ಥಾನದ ಬಗ್ಗೆ ಆಲೋಚನೆ ಎಂಬ ಸತೀಶ್ ಮಾತಿಗೆ ರಾಜುಗೌಡ ಕೌಂಟರ್ ನೀಡಿದ್ದರು. 2028ರ ವರೆಗೆ ಕಾಯೋಕೆ ಆಗಲ್ಲ, ಇದೇ ನವೆಂಬರ್ ನಲ್ಲಿ ಸಿಎಂ ಆಗು, ಕಾರಣ 2028ರಲ್ಲಿ ಬಿಜೆಪಿ ಅದಿಕಾರಕ್ಕೆ ಬರಲಿದೆ. ಹೀಗಾಗಿ ನೀವೂ ಈಗ ಮುಖ್ಯಮಂತ್ರಿ ಆದರೆ ನಿಮ್ಮ ಆಸೆ ಈಡೇರುತ್ತದೆ ಎಂದು ರಾಜುಗೌಡ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.