ರಾಸಲೀಲೆ ಸಿಡಿ ಪ್ರಕರಣದ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ. ಇನ್ನು ರಾಜೀನಾಮೆಯಿಂದ ತೆರವಾದ ಖಾತೆ ಮೇಲೆ ಹಲವರ ಕಣ್ಣು ಬಿದ್ದಿದೆ.
ಬೆಂಗಳೂರು, (ಮಾ.3): ರಾಜ್ಯ ರಾಜಕಾಣದಲ್ಲಿ ಸಂಚಲನ ಮೂಡಿಸಿರುವ ರಾಸಲೀಲೆ ಸಿಡಿ ಪ್ರಕರಣದ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ.
ಇಂದು (ಬುಧವಾರ) ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರಿಗೆ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ಪತ್ರ ರವಾನೆ ಮಾಡಿದ್ದು, ಸಿಎಂ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
undefined
ಪ್ರಮುಖವಾಗಿ ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದ ತೆರವಾದ ಮಹತ್ವದ ಜಲಸಂಪನ್ಮೂಲ ಖಾತೆಯನ್ನು ಸಿಎಂ ಯಾರ ಹೆಗಲಿಗೆ ಹಾಕುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.
ರಾಸಲೀಲೆ ಸಿ.ಡಿ.: ರಾಜೀನಾಮೆ ಪತ್ರದಲ್ಲಿ ಮಹತ್ವದ ಅಂಶ ಉಲ್ಲೇಖಿಸಿದ ಜಾರಕಿಹೊಳಿ
ಈಗಾಗಲೇ ಸಹೋದರನ ರಾಜೀನಾಮೆಯಿಂದ ತೆರವಾದ ಸಚಿವ ಸ್ಥಾನವನ್ನು ನನಗೆ ನೀಡಬೇಕೆಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ವಿಚಾರವಾಗಿ ಬಾಲಚಂದ್ರ ಜಾರಕಿಹೊಳಿ ಅವರು ಇಂದು (ಬುಧವಾರ) ಎರಡ್ಮೂರು ಬಾರಿ ಸಿಎಂ ಭೇಟಿ ಮಾಡಿ ಚರ್ಚಿಸಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ ಈ ಖಾತೆ ಮೇಲೆ ಹಲವರ ಕಣ್ಣು ಬಿದ್ದಿದೆ. ಆದ್ರೆ, ಸದ್ಯಕ್ಕೆ ಬಜೆಟ್ ಅಧಿವೇಶನ ಮುಗಿಯುವವರೆಗೆ ಜಲಸಂನ್ಮೂಲ ಖಾತೆಯನ್ನು ಯಾರಿಗೂ ಕೊಡದೇ ತಮ್ಮ ಬಳಿಯೇ ಇಟ್ಟುಕೊಳ್ಳುವ ಎಲ್ಲಾ ಸಾಧ್ಯತೆಗಳಿದ್ದು, ಅಧಿವೇಶನದ ಬಳಿಕ ಒಬ್ಬರಿಗೆ ಜನಸಂನ್ಮೂಲ ಖಾತೆಯನ್ನು ಬೇರೆಯವರೆಗೆ ಹಂಚಿಕೆ ಮಾಡಬೇಕಾಗುತ್ತೆ.
ಸಿಡಿದ ರಾಸಲೀಲೆ : ಈಗ ಕೈ ನಾಯಕನ ಹೊಗಳಿ ಸಿಎಂ BSY ಭ್ರಷ್ಟ ಎಂದ ಜಾರಕಿಹೊಳಿ?
ಯಾಕಂದ್ರೆ ಇದೊಂದು ಮಹತ್ವದ ಖಾತೆ. ಎಲ್ಲಾ ಇಲಾಖೆ ಅಂತಲ್ಲ. ರಾಜ್ಯದ ನದಿ ನೀರು ವಿವಾದಗಳು ಈ ಇಲಾಖೆಯಲ್ಲೇ ಬರುವುದರಿಂದ ಇದನ್ನು ನಿಭಾಯಿಸಲು ಸೂಕ್ತ ವ್ಯಕ್ತಿಯೇ ಬೇಕು. ಹಾಗಾಗಿ ಸಿಎಂ ಹಲವು ಒತ್ತಡಗಳ ಮಧ್ಯೆ ಈ ಖಾತೆಯನ್ನು ಹೊತ್ತುಕೊಂಡು ನಿಭಾಯಿಸುವುದು ಕಷ್ಟ ಸಾಧ್ಯ. ಹಾಗಾಗಿ ಬೇರೆಯವರಿಗೆ ವಹಿಸುವ ಸಾಧ್ಯತೆಗಳು ಹೆಚ್ಚಿವೆ.
ಈ ಪ್ರಕರಣ ಸುಖಾಂತ್ಯ ಆಗುವವರೆಗೂ ರಮೇಶ್ ಜಾರಕಿಹೊಳಿಯನ್ನು ವಾಪಸ್ ಸಂಪುಟಕ್ಕೆ ಸೇರಿಸಿಕೊಳ್ಳುವುದು ಅನುಮಾನ. ಈ ಹಿನ್ನೆಲೆಯಲ್ಲಿ ಈಗಾಗಲೇ ಈ ಖಾತೆಯನ್ನು ನಿಭಾಯಿಸಿದ ಅನುಭವ ಇರುವ ಬಸವರಾಜ್ ಬೊಮ್ಮಾಯಿಗೆ ನೀಡಿದರೂ ಅಚ್ಚರಿಪಡಬೇಕಿಲ್ಲ.
ಈ ಹಿಂದೆ ಎಚ್‌ಕೆ ಪಾಟೀಲ್, ಬಸವರಾಜ್ ಬೊಮ್ಮಾಯಿ, ಡಿ ಕೆ ಶಿವಕುಮಾರ್, ಎಂ ಬಿ ಪಾಟೀಲ್ ನಂತಹ ಪ್ರಮುಖ ನಾಯಕರುಗಳು ಈ ಜಲಸಂನ್ಮೂಲ ಖಾತೆಯನ್ನು ನಿಭಾಯಿಸಿರುವುದನ್ನು ಇಲ್ಲಿ ಸ್ಮರಿಸಬಹುದು.