ಬಾಲ್ಯ ಗೆಳೆಯನ ಸಾವಿಗೆ ಬಿಕ್ಕಿ-ಬಿಕ್ಕಿ ಅತ್ತ ಸಚಿವ ರಮೇಶ್ ಜಾರಕಿಹೊಳಿ

By Suvarna News  |  First Published Aug 9, 2020, 7:49 PM IST

ಬಾಲ್ಯ ಸ್ನೇಹಿತನ ನಿಧನದಿಂದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ  ಬಿಕ್ಕಿ ಬಿಕ್ಕಿ ಅತ್ತಿರುವ ಪ್ರಸಂಗ ನಡೆದಿದೆ.


ಬೆಳಗಾವಿ, (ಆ.09): ಅನಾರೋಗ್ಯದಿಂದ ನಿಧನರಾದ ನಗರಸಭೆ ಸದಸ್ಯ ಎಸ್.ಎ. ಕೋತ್ವಾಲ್  ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಬಿಕ್ಕಿ ಬಿಕ್ಕಿ ಅತ್ತರು.

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸ್ನೇಹಿತ ಎಸ್‌.ಎ ಕೊತ್ವಾಲ್ ಅನಾರೋಗ್ಯದಿಂದಾಗಿ ಇಂದು (ಭಾನುವಾರ) ಮೃತಟ್ಟಿದ್ದು, ಗೋಕಾಕ್‌ನ ಬಸವೇಶ್ವರ್ ವೃತ್ತದಲ್ಲಿ ಸಚಿವ ರಮೇಶ ಜಾರಕಿಹೊಳಿ ಅವರು ಆಪ್ತ ಗೆಳಯನ ಪಾರ್ಥಿವ ಶರೀರದ ಮುಂದೆ  ನಿಂತು ಕಣ್ಣೀರಿಟ್ಟರು. 

Tap to resize

Latest Videos

ರೈತರಿಗೆ ಮೋದಿ ಆಫರ್, ಕನ್ನಡದಲ್ಲಿ ವಿದ್ಯಾ ಬಾಲನ್ ಆನ್ಸರ್: ಆ.9ರ ಟಾಪ್ 10 ಸುದ್ದಿ!
 
ಈ ವೇಳೆ ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಸೇರಿದಂತೆ ಇತರೆ ನಾಯಕರುಗಳು ಸಚಿವರನ್ನು ಸಮಾಧಾನ ಪಡಿಸಿದ ದೃಶ್ಯಕಂಡು ಬಂತು. ನಂತರ ಗೆಳೆಯನ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡ ರಮೇಶ್ ಜಾರಕಿಹೊಳಿ ಮೌನವಾಗಿದ್ದರು.

ಗೋಕಾಕ ನಗರಸಭೆಗೆ 8 ಬಾರಿ ಆಯ್ಕೆಯಾಗಿದ್ದ ಅವರು, ಹಲವು ಜವಾಬ್ದಾರಿಯುತ ಹುದ್ದೆಗಳನ್ನು ಅಚ್ಚುಕಟ್ಟಾಗಿ  ನಿಭಾಯಿಸಿದ್ದರು. ಅಲ್ಲದೇ ಸಚಿವ ರಮೇಶ ಜಾರಕಿಹೊಳಿ ಬಾಲ್ಯದ ಸ್ನೇಹಿತರಾಗಿದ್ದರು.

click me!